ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಅನ್ಯಾಯ: 'ಇಬ್ರಾಹಿಂ ಬಾಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ?'
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಬಜೆಟ್‌ನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅದು ಇಬ್ರಾಹಿಂಗೆ ಗೊತ್ತಿಲ್ಲವೇ? ಕಾಂಗ್ರೆಸ್‌ನಲ್ಲಿ ಸದ್ಯ ಎಂಎಲ್‌ಸಿಯಾಗಿರುವ ಇಬ್ರಾಹಿಂ ಕಾಂಗ್ರೆಸ್ ಬಿಡಬೇಕಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದ ಜಮೀರ್
ಬಾಗಲಕೋಟೆ(ಫೆ.01): ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷ ಏನೂ ಮಾಡಿಲ್ಲ ಎನ್ನುವ ಸಿಎಂ ಇಬ್ರಾಹಿಂ ಇದಕ್ಕೂ ಮುನ್ನ ಬಾಯಿಯಲ್ಲಿ ಲಡ್ಡು ಇಟ್ಟುಕೊಂಡಿದ್ರಾ? ಹಿಂದೆ ದೇವೇಗೌಡ, ಕುಮಾರಸ್ವಾಮಿ ಅವರನ್ನು ಇದೆ ಇಬ್ರಾಹಿಂ ಬಾಯಿಗೆ ಬಂದಂತೆ ಬೈದಾಡಿಲ್ಲವಾ ಎಂದು ಶಾಸಕ ಜಮೀರ್ ಅಹಮ್ಮದ್ ಪ್ರಶ್ನಿಸಿದ್ದಾರೆ.
ಜಿಲ್ಲೆಯ ಕೆರೂರನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಅಲ್ಪಸಂಖ್ಯಾತರಿಗೆ 120 ಕೋಟಿ ಇದ್ದ ಬಜೆಟ್‌ನ್ನು 3100 ಕೋಟಿಗೆ ಹೆಚ್ಚಿಸಿದ್ದರು. ಅದು ಇಬ್ರಾಹಿಂಗೆ ಗೊತ್ತಿಲ್ಲವೇ? ಕಾಂಗ್ರೆಸ್‌ನಲ್ಲಿ ಸದ್ಯ ಎಂಎಲ್‌ಸಿಯಾಗಿರುವ ಅವರು ಕಾಂಗ್ರೆಸ್ ಬಿಡಬೇಕಾದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಎಂದರು.
ಬಿಜೆಪಿ ಪರ ಜಮೀರ್ ಬ್ಯಾಟಿಂಗ್, ತಮ್ಮದೇ ಪಕ್ಷದ ಹಿರಿಯ ನಾಯಕಗೆ ಖಾನ್ ಟಾಂಗ್
ಕೋಮುವಾದಿ ಪಕ್ಷದೊಂದಿಗೆ ಸೇರಿರುವ ಜೆಡಿಎಸ್ ತನ್ನ ಎಸ್ ಅನ್ನು ತೆಗೆಯಲಿ, ಜೆಡಿಎಸ್ ಪಕ್ಷವೀಗ ಸತ್ತಿರುವ ಪಕ್ಷ, ಗೋ ಹತ್ಯೆ ನಿಷೇಧ ಕಾಯ್ದೆ, ಉಪಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿರುವ ಪಕ್ಷ ಹೇಗೆ ಸೆಕ್ಯೂಲರ್ ಪಕ್ಷವಾಗುತ್ತದೆ ಎಂದು ಪ್ರಶ್ನಿಸಿದರು.