ಚಿಕ್ಕಬಳ್ಳಾಪುರ (ನ.30):  ನೂರಾರು ವರ್ಷಗಳ ಇತಿಹಾಸ ಇದ್ದು, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಕೀರ್ತಿ ಕಾಂಗ್ರೆಸ್‌ ಬಿಟ್ಟರೆ ಮತ್ತೆ ಬೇರೆ ಯಾವ ಪಕ್ಷಕ್ಕೂ ಇಲ್ಲ. ಕಾಂಗ್ರೆಸ್‌ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮಾಜಿ ಸಚಿವ ಜಮೀರ್‌ ಅಹ್ಮದ್‌ ತಿಳಿಸಿದರು.

ಜಿಲ್ಲೆಯ ಗುಡಿಬಂಡೆ ಪಟ್ಟಣದಲ್ಲಿ ಶುದ್ಧ ಕುಡಿಯುವ ನೀರು ಉದ್ಘಾಟನೆಗೆ ತೆರಳುವ ವೇಳೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ-7 ರ ಹಾಡೋಬಂಡೆ ಸಮೀಪ ಇರುವ ಶಿರಡಿ ಸಾಯಿ ಬಾಬಾ ಆಶ್ರಮಕ್ಕೆ ಆಗಮಿಸಿ ಕಾಂಗ್ರೆಸ್‌ ಮುಖಂಡರ, ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನ: ಇಬ್ಬರು ಶಾಸಕರುಗಳಿಗೆ ನೋಟಿಸ್..! ..

ಇಡೀ ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆ

ಚಿಕ್ಕಬಳ್ಳಾಪುರ ತಾಲೂಕು ಮಾತ್ರವಲ್ಲ ಇಡೀ ಜಿಲ್ಲೆ ಕಾಂಗ್ರೆಸ್‌ ಭದ್ರಕೋಟೆ. ಕಾಂಗ್ರೆಸ್‌ ಮುಂದಿನ ದಿನಗಳಲ್ಲಿ ಕ್ಷೇತ್ರದಲ್ಲಿ ಪುಟಿದೇಳುತ್ತದೆ. ಅಧಿಕಾರಕ್ಕೂ ಬರುತ್ತದೆ. ಯಾರು ಈ ಬಗ್ಗೆ ಚಿಂತಿಸಬೇಡಿ. ಕಾರ್ಯಕರ್ತರ ರಕ್ಷಣೆಗೆ ನಾವು ಬದ್ದರಾಗಿದ್ದೇವೆ ಎಂದು ಧೈರ್ಯ ತುಂಬಿದರು.

ಮಸೀದಿಗೆ ಬೇಟಿ:  ಗುಡಿಬಂಡೆ ಪಟ್ಟಣಕ್ಕೆ ಭೇಟಿ ಕೊಡುವ ಮೊದಲು ಚಿಕ್ಕಬಳ್ಳಾಪುರ ನಗರದ ಎಂಜಿ ರಸ್ತೆಯಲ್ಲಿರುವ ಮಿಸ್ಕೀನ್‌ ಷಾ ಶೇಲಾನಿ ದರ್ಗಾಗೆ ಭೇಟಿ ನೀಡಿದ ಶಾಸಕ ಜಮೀರ್‌ ಅಹ್ಮದ್‌, ದರ್ಗಾದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಅಧ್ಯಕ್ಷ ಇಸ್ಮಾಯಿಲ್‌, ನಗರಸಭಾ ಸದಸ್ಯರಾದ ಸತೀಶ್‌, ಅಂಬರೀಶ್‌, ನರಸಿಂಹಮೂರ್ತಿ, ಅಡ್ಡಗಲ್‌ ಶ್ರೀಧರ್‌, ಸಂತೋಷ್‌ ಸೇರಿದಂತೆ ಮತ್ತಿತರರು ಇದ್ದರು.