ಶಾಸಕ ಜಮೀರ್ ಅಹಮದ್ ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ . ಕೆ ಆರ್ ಪೇಟೆ ಗೆಲುವಿನ ಬಗ್ಗೆ ಮಾತನಾಡಿದ್ದಾರೆ
ತುಮಕೂರು (ನ.01): ಕೆ.ಆರ್.ಪೇಟೆ ಮಾದರಿಯ ಚುನಾವಣೆ ಶಿರಾದಲ್ಲಿ ನಡೆಯುವುದಿಲ್ಲ. ಗಿಮಿಕ್ನಲ್ಲಿ ಬಿಜೆಪಿ ಕೆ.ಆರ್.ಪೇಟೆಯಲ್ಲಿ ಗೆದ್ದಿದ್ದೆ. ಅದು ಬಿಜೆಪಿ ಗೆಲುವಲ್ಲ, ನಾರಾಯಣಗೌಡರ ಗೆಲುವು ಎಂದು ಕಾಂಗ್ರೆಸ್ ಮಾಜಿ ಸಚಿವ ಜಮೀರ್ ಅಹಮದ್ ಟೀಕಿಸಿದರು.
Add Asianetnews Kannada as a Preferred Source

ಶಿರಾದ ಬೇಗಮ್ ಮೊಹಲ್ಲಾದಲ್ಲಿ ಮಾತನಾಡಿದ ಅವರು, ಕಾಲಿಟ್ಟಕಡೆಯಲ್ಲೆಲ್ಲಾ ಬಿಜೆಪಿ ಗೆಲ್ಲುವುದಕ್ಕೆ ವಿಜಯೇಂದ್ರ ಅವರೇನು ಪಾಳೇಗಾರನಾ?. ಬಿಜೆಪಿಯಲ್ಲಿ ಯಡಿಯೂರಪ್ಪ ಅವರೇ ಮಾಸ್ ಲೀಡರ್. ವಿಜಯೇಂದ್ರ ಬಂದ ಕೂಡಲೇ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದರು.
ಮತ್ತೆ ಸಿಎಂ ಆಗ್ಬೇಕು! ಸಿದ್ದು ಪರ ಜಮೀರ್ ಖಾನ್ ಸಾಹೇಬ್ರ ಬ್ಯಾಟಿಂಗ್ ..
ವಿಜಯೇಂದ್ರಗೆ ಏನು ಶಕ್ತಿ ಇದೆ. ಯಡಿಯೂರಪ್ಪ ಅವರಿಂದ ವಿಜಯೇಂದ್ರ ಗೊತ್ತಿರುವುದು. ಯಡಿಯೂರಪ್ಪ ಅವರ ಪುತ್ರ ಅಲ್ಲದೇ ಹೋಗಿದ್ದರೆ ವಿಜಯೇಂದ್ರ ಯಾರಿಗೂ ಗೊತಾಗುತ್ತಿರಲಿಲ್ಲ ಎಂದು ಲೇವಾಡಿ ಮಾಡಿದರು.
