ದರ್ಗಾದಲ್ಲಿ ಈ ಹಿಂದೆ 250ಕ್ಕೂ ಅಧಿಕ ಹೆಣ್ಣುಮಕ್ಕಳ ಮೇಲೆ ರೇ*ಪ್​ ನಡೆದಿರುವುದು ನಿಜ ಎನ್ನುವ ಸತ್ಯವನ್ನು ಒಪ್ಪಿಕೊಂಡಿರುವ ಯುಟ್ಯೂಬರ್​ ಎಂ.ಡಿ.ಸಮೀರ್​ ಈ ಬಗ್ಗೆ ವಿಡಿಯೋದಲ್ಲಿ ಹೇಳಿದ್ದೇನು? 

ಸದ್ಯ ಧರ್ಮಸ್ಥಳದ ಸೌಜನ್ಯ ಕೇಸ್​ ಇಡೀ ದೇಶಾದ್ಯಂತ ಭಾರಿ ಹಲ್​ಚಲ್​ ಸೃಷ್ಟಿಸುತ್ತಿದೆ. ಬೂದಿ ಮುಚ್ಚಿದ ಕೆಂಡದಂತಿದ್ದ ಈ ಪ್ರಕರಣ ಮತ್ತೆ ಮುನ್ನೆಲೆಗೆ ಬರುವಂತೆ ಮಾಡಿದ್ದು ಯುಟ್ಯೂಬರ್​ ಸಮೀರ್ ಎಂ.ಡಿ. ಇದಾದ ಬಳಿಕ ಈ ಕೇಸ್​ ಮತ್ತೆ ಚಿಗುರಿದ್ದು, ಮುಗ್ಧೆ ಸೌಜನ್ಯಳಿಗೆ ನ್ಯಾಯ ಒದಗಿಸಬೇಕು ಎನ್ನುವ ಕೂಗು ಜೋರಾಗಿದೆ. ಇದರ ವಿಷಯ ಯಾವಾಗ ಇಷ್ಟೊಂದು ಹವಾ ಸೃಷ್ಟಿಸಿತೋ, ಆಗ ಸಮೀರ್​ ಅವರು ಕೃತಕ ಬುದ್ಧಿಮತ್ತೆ ಉಪಯೋಗಿಸಿ, ಧರ್ಮಸ್ಥಳದಲ್ಲಿ ಸಿಕ್ಕಿದೆ ಎನ್ನಲಾದ ಹೆಣಗಳ ರಾಶಿಗಳ ಕುರಿತು ಯುವಕನೊಬ್ಬನಿಂದ ವಿಡಿಯೋ ಮಾಡಿ ಪೇಚಿಗೆ ಸಿಲುಕಿದರು. ಈ ವಿಡಿಯೋ ಎಐ ಎನ್ನುವುದು ಅರಿಯದೇ, ಅರಿತರೂ ಅದು ನಿಜ ಎಂದೇ ಎಲ್ಲರೂ ನಂಬಲಿ ಎನ್ನುವ ಕಾರಣಕ್ಕೆ ಒಂದಿಷ್ಟು ಮಂದಿ ಇದರ ಬಗ್ಗೆ ಪ್ರಚಾರ ಮಾಡಿದರು. ಆದರೆ ಇದು ಸುಳ್ಳು ವಿಡಿಯೋ ಎನ್ನುವುದು ತಿಳಿದು ಕೇಸು ದಾಖಲಾಗುತ್ತಲೇ, ತಮ್ಮ ಯುಟ್ಯೂಬ್​ನಿಂದ ಸಮೀರ್​ ಅವರು ಈ ವಿಡಿಯೋ ಡಿಲೀಟ್​ ಮಾಡಿದರು.

ಇದಾಗುತ್ತಿದ್ದಂತೆಯೇ ಕಿರಿಕ್​ ಕೀರ್ತಿ ಅವರು, ಹಿಂದೂ ಧರ್ಮವನ್ನು ಮುಂದಿಟ್ಟುಕೊಂಡು ಸಮೀರ್​ ಇಲ್ಲಸಲ್ಲದ ಸುಳ್ಳುಗಳನ್ನುಸೃಷ್ಟಿ ಮಾಡುತ್ತಿರುವುದಾಗಿ ವಿಡಿಯೋದಲ್ಲಿ ಹೇಳಿದರು. ದರ್ಗಾದಲ್ಲಿ ನಡೆಯುತ್ತಿರುವ ಅನಾಚಾರಗಳ ಬಗ್ಗೆ ಸಮೀರ್​ ಬಾಯ್ಬಿಡುತ್ತಿಲ್ಲ ಎಂದರು. ಇವರ ಮಾತಿಗೆ ಕೀರ್ತಿ ಫ್ಯಾನ್ಸ್​ ಸೇರಿದಂತೆ ಸಮೀರ್​ ವಿರೋಧಿಗಳು ಭಾರಿ ಪ್ರಚಾರ ಮಾಡಿದರು. ದರ್ಗಾದಲ್ಲಿ ನಡೆಯುತ್ತಿರುವ ಹಾಗೂ ಆ ಸಮುದಾಯದಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ಶೋಷಣೆಗಳ ಕುರಿತು ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಟ್ರೆಂಡ್​ ಶುರುವಾಯಿತು. ಈ ಬಗ್ಗೆ ಸಮೀರ್​ ಯಾಕೆ ದನಿ ಎತ್ತುತ್ತಿಲ್ಲ ಎನ್ನುವ ಪ್ರಶ್ನೆಗಳ ಸುರಿಮಳೆಯೇ ಆಯಿತು.

ಆದ್ದರಿಂದ ಇದೀಗ ಸಮೀರ್​ ಅವರು, ತಾವು ಯಾವುದೇ ಧರ್ಮದ ವಿರುದ್ಧವಿಲ್ಲ ಎನ್ನುತ್ತಲೇ ಕೀರ್ತಿ ಅವರಿಗೆ ಪರೋಕ್ಷವಾಗಿ ಟಾಂಗ್​ ಕೊಡುತ್ತಲೇ ದರ್ಗಾದಲ್ಲಿ ನಡೆದಿರುವ 250ಕ್ಕೂ ಅಧಿಕ ಅತ್ಯಾ*ಚಾರಗಳ ಬಗ್ಗೆ ಬಾಯ್ಬಿಟ್ಟು, ಅದರ ವಿಡಿಯೋ ಮಾಡಿದ್ದಾರೆ. ಅವರು ಹೇಳಿದ್ದೇನೆಂದರೆ, 2023 ಸೆಪ್ಟೆಂಬರ್​ 23ರಂದು ನನ್ನ ಹುಟ್ಟುಹಬ್ಬದ ದಿನ ಅಜ್ಮೇರಾದಲ್ಲಿರುವ ಖಾಜಾ ಗರೀಬ್​ ನವಾಜ್​ ದರ್ಗಾಕ್ಕೆ ಹೋಗಿದ್ದೆ. ಈ ಹಿಂದೆ ಇದೇ ಒಂದು ಮ್ಯಾನೇಜ್​ಮೆಂಟ್​ನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಜನರು ದರ್ಗಾ ನೋಡಲು ಬರುತ್ತಿದ್ದಂತಹ ಒಂಟಿ ಹೆಂಗಸರು ಮತ್ತು ಲೋಕಲ್​ ಹುಡುಗಿಯರನ್ನು ರೇ*ಪ್​ ಮಾಡಿರುವ 250ಕ್ಕೂ ಹೆಚ್ಚು ಪ್ರಕರಣಗಳು ಬೆಳಕಿಗೆ ಬಂದಿವೆ. ಸುಮಾರು ವರ್ಷಗಳಿಂದ ಮ್ಯಾನೇಜ್​ಮೆಂಟ್​ನಲ್ಲಿ ಕೆಲ್ಸ ಮಾಡುತ್ತಿದ್ದವರೇ ಈ ಕೆಲಸ ಮಾಡಿದ್ದಾರೆ. ಅವರೆಲ್ಲಾ ಸಿಕ್ಕಿಬಿದ್ದು ಅವರಿಗೆ ಕಾನೂನು ರೀತಿ ಶಿಕ್ಷೆನೂ ಆಗಿದೆ. ಅಲ್ಲಿ ಇಂಥ ಕೆಲ್ಸ ಮಾಡಿದವರು ದರ್ಗಾದಲ್ಲಿ ಇದ್ದ ವ್ಯಕ್ತಿಗಳೇ ವಿನಾ ದೇವರಲ್ಲ. ದೇವರಿಗೂ, ಈ ಪ್ರಕರಣಕ್ಕೂ ಸಂಬಂಧ ಇಲ್ಲ. ಆದರೆ ಇದನ್ನು ತಿಳಿಯದೇ ತಮ್ಮ ತೇಜೋವಧೆ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ವಿಡಿಯೋ ಈಗ ಪರ-ವಿರೋಧಗಳಿಂದಾಗಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಸಮೀರ್​ ಅಭಿಮಾನಿಗಳು ಅವರನ್ನು ಹಾಡಿ ಹೊಗಳುತ್ತಿದ್ದರೆ, ದರ್ಗಾದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ನಿನ್ನ ಬಾಯಿಯಿಂದ ಬರಿಸಲು ಕಿರಿಕ್​ ಕೀರ್ತಿಯೇ ಬರಬೇಕಾಯ್ತಲ್ಲಪ್ಪ, ಕೊನೆಗೂ ಸತ್ಯ ಒಪ್ಪಿಕೊಳ್ಳದೇ ಬೇರೆ ವಿಧಿಯಿರಲಿಲ್ಲ ನಿನಗೆ ಎನ್ನುತ್ತಿದ್ದಾರೆ. ಈ ವಿಡಿಯೋದಲ್ಲಿ ಸಮೀರ್​ ಅವರು ಪಂಚೆ ಉಟ್ಟು ನಾನು ಧರ್ಮಸ್ಥಳಕ್ಕೆ ಹೋಗಿದ್ದೆ, ನಾನೂ ಮಂಜುನಾಥನ ಭಕ್ತ ಎಂದಿದ್ದು, ಇದನ್ನು ನಿಮ್ಮವರು ಸಹಿಸುತ್ತಾರೆಯೇ ಎಂದೂ ಪ್ರಶ್ನಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋ ಈಗ ಮತ್ತೆ ಸಕತ್​ ಸುದ್ದಿ ಮಾಡುತ್ತಿದ್ದು, ತಮಗೆ ಬೇಕಾದ ರೀತಿಯಲ್ಲಿ ಜನರು ಅರ್ಥ ಕಲ್ಪಿಸಿಕೊಳ್ಳುತ್ತಿದ್ದಾರೆ.

View post on Instagram

View post on Instagram