* ಬಾಗಲಕೋಟೆ ನಗರದ ವಲ್ಲಭಾಯ್ ವೃತ್ತದ ಬಳಿ ನಡೆದ ಘಟನೆ* ಗಣೇಶನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಯುವಕರು* ಮುಚಖಂಡಿ ತಾಂಡಾದ ಯುವಕರಿಂದ ಸಂಭ್ರಮಾಚರಣೆ
ಬಾಗಲಕೋಟೆ(ಸೆ.10): ಕೇಕ್ ಕತ್ತರಿಸಿ ಗಣೇಶನ ಹುಟ್ಟುಹಬ್ಬವನ್ನ ಭಕ್ತರು ವಿಶಿಷ್ಟವಾಗಿ ಆಚರಿಸಿದ ಘಟನೆ ನಗರದ ವಲ್ಲಭಾಯ್ ವೃತ್ತದ ಬಳಿ ಇಂದು(ಶುಕ್ರವಾರ) ನಡೆದಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಕೇಕ್ ಕತ್ತರಿಸಿ ಹ್ಯಾಪಿ ಬರ್ತಡೇ ಟು ಯೂ ಗಣೇಶ ಅಂತ ಘೋಷಣೆ ಕೂಗಿ ಯುವಕರು ಸಂಭ್ರಮಪಟ್ಟಿದ್ದಾರೆ. ಮುಚಖಂಡಿ ತಾಂಡಾದ ಯುವಕರು ಹಿರಿಯರ ಸಮ್ಮುಖದಲ್ಲಿ ಗಣೇಶನಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಬ್ಯಾಡಗಿ: ಇತರರಿಗೆ ಮಾದರಿಯಾಗಬೇಕಾದ ಶಾಸಕರು ಹೀಗಾ ಮಾಡೋದು?
ಬಾಗಲಕೋಟೆಯಿಂದ ಮುಚಖಂಡಿ ಗ್ರಾಮಕ್ಕೆ ಗಣೇಶನ ಮೂರ್ತಿ ಕೊಂಡೊಯ್ಯುವ ಮುನ್ನ ಕೇಕ್ ಕತ್ತಿರಿಸಿ ಗಣೇಶನ ಹುಟ್ಟುಹಬ್ಬ ಮಾಡಿದ್ದಾರೆ. ಕೇಕ್ ಮೇಲೆ ಹುಟ್ಟುಹಬ್ಬದ ಶುಭಾಶಯಗಳು ಶ್ರೀ ಗಣೇಶ ಅಂತ ಬರೆಯಲಾಗಿದೆ.
