Ganesha Festival  

(Search results - 45)
 • undefined
  Video Icon

  ASTROLOGY12, Sep 2019, 7:44 PM

  ಗಣೇಶ ಹಬ್ಬ; ಮೂರ್ತಿ ವಿಸರ್ಜನೆ ಹಿಂದಿನ ಕಾರಣ!

  ಗಣೇಶ ಹಬ್ಬದಂದು ಇಟ್ಟ ಮೂರ್ತಿಗಳು ಅನಂತ ಚತುರ್ಥದಶಿಯಂದು ವಿಸರ್ಜನೆಯಾಗುವ ಮೂಲಕ ಹಬ್ಬ ಸುಸಂಪನ್ನವಾಗುತ್ತದೆ. ಇದಕ್ಕಾಗಿ ಜೇಡಿ ಮಣ್ಣಿನಿಂದ ಗಣೇಶನ  ಮೂರ್ತಿಯನ್ನು ನಿರ್ಮಿಸಲಾಗುತ್ತೆ. ನೀರು ಹಾಗೂ ಮಣ್ಣಿನಿಂದ ಸೃಷ್ಟಿಯಾಗುವ ಗಣೇಶನ ವಿಗ್ರಹ ಸಾರ್ವತ್ರಿಕ ಸತ್ಯವನ್ನು ಸಾರುತ್ತದೆ. ಗಣೇಶ ವಿಗ್ರಹಕ್ಕೆ ಪೂಜೆ ಸಲ್ಲಿಸಿ ಬಳಿಕ ನೀರಿನಲ್ಲಿ ವಿಸರ್ಜನೆ ಮಾಡಲಾಗುತ್ತೆ.  ಗಣೇಶನ ವಿಗ್ರಹ ಹಾಗೂ ವಿಸರ್ಜನೆ ಹಿಂದಿನ ಕಾರಣ ಇಲ್ಲಿದೆ.

 • Ripponpet Galate

  Shivamogga11, Sep 2019, 9:33 AM

  ಶಿವಮೊಗ್ಗ: ರಿಪ್ಪನ್‌ಪೇಟೆ ಗಣೇಶ ವಿಸರ್ಜನೆ ವೇಳೆ ಇಬ್ಬರು ಯುವಕರಿಗೆ ಚಾಕು ಇರಿತ..!

  ಗಣಪತಿ ವಿಸರ್ಜನೆ ವೇಳೆಯಲ್ಲಿ ಸೂರ್ಯ ಮತ್ತು ಕುಮಾರ್ ಎಂಬುವವರಿಗೆ ಧನುಷ್, ಜೋಸೆಫ್ ಹಾಗೂ ಇತರರು ಸೇರಿ ಚಾಕುವಿನಿಂದ ಇರಿದಿದ್ದು, ಅವರನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ.

 • Ganesha

  Karnataka Districts11, Sep 2019, 8:15 AM

  ಹಿಂದು ಮಹಾಸಭಾ ಗಣಪತಿ ಭವ್ಯ ಮೆರವಣಿಗೆ

  ಹಿಂದೂ ಮಹಾಸಭಾ ಹಿಂದೂ ರಾಷ್ಟ್ರ ಸೇನಾ ವಿನಾಯಕ ಸೇವಾ ಸಮಿತಿಯಿಂದ ಪ್ರತಿಷ್ಠಾಪಿಸಲಾಗಿರುವ ವಿನಾಯಕ ಮೂರ್ತಿ ವಿಸರ್ಜನಾ ಪೂರ್ವ ಮೆರವಣಿಗೆ ಮಂಗಳವಾರ ಅದ್ಧೂರಿಯಾಗಿ ನೆರವೇರಿದೆ. ಹೊಸಮನೆ ಶಿವಾಜಿ ವೃತ್ತದ ವರೆಗೂ ಸಾಗಿ ಪುನ ಹಿಂದಿರುಗಿ ಹೊಸಮನೆ ಮುಖ್ಯ ರಸ್ತೆ ಮೂಲಕ ರಂಗಪ್ಪ ವೃತ್ತ, ಮಾಧವಚಾರ್‌ ವೃತ್ತದ ವರೆಗೂ ಸಾಗಿದೆ.

 • death

  Karnataka Districts10, Sep 2019, 9:38 PM

  ಕೋಲಾರ: ತಾವೇ ತಯಾರಿಸಿದ ಗಣೇಶ ವಿಸರ್ಜನೆಗೆ ತೆರಳಿದ್ದ 6 ಮಕ್ಕಳ ದುರ್ಮರಣ

  ಇದಕ್ಕಿಂತ ಇನ್ನೊಂದು ದುರ್ಘಟನೆ  ನಡೆಯಲು ಸಾಧ್ಯವೇ? ತಾವೇ ತಯಾರಿಸಿದ ಗಣೇಶ ಮೂರ್ತಿ ವಿಸರ್ಜನೆಗೆ ತೆರಳಿದ್ದ 6 ಮಕ್ಕಳು ಕೋಲಾರದಲ್ಲಿ ನೀರು ಪಾಲಾಗಿದ್ದಾರೆ.

 • singer

  Karnataka Districts4, Sep 2019, 11:12 AM

  ಮಂಗಳೂರು: ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದಾಗಲೇ ಕುಸಿದುಬಿದ್ದು ಗಾಯಕ ಸಾವು

  ಮಂಗಳೂರಿನಲ್ಲಿ ಗಣೇಶೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದ ಕಲಾವಿದ ವೇದಿಕೆಯಲ್ಲೇ ಕುಸಿದುಬಿದ್ದಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಅರ್ಧ ದಾರಿಯಲ್ಲೇ ಕೊನೆಯುಸಿರೆಳೆದಿದ್ದಾರೆ. ಚಾಲೆಂಜರ್ಸ್ ಪ್ರೆಂಡ್ಸ್ ಸರ್ಕಲ್ ರಸಮಂಜರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

 • Ganesha
  Video Icon

  Karnataka Districts3, Sep 2019, 7:36 PM

  ಹುಬ್ಬಳ್ಳಿ ಪೊಲೀಸರಿಂದ ಗಣೇಶ ಹಬ್ಬದ ಸಂಭ್ರಮ ಹೀಗಿತ್ತು!

  ಹುಬ್ಬಳ್ಳಿಯ ಪೊಲೀಸ್ ಸಿಬ್ಬಂದಿ ಗಣೇಶ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ತಮ್ಮ ಶಿಸ್ತು ಬದ್ಧ ಶೈಲಿಯಲ್ಲಿ ವಿನಾಯಕನಿಗೆ ನಮಿಸಿದ್ದಾರೆ. ಹಾಗಾದರೆ ಹುಬ್ಬಳ್ಳಿ ಪೊಲೀಸರ ಗಣೇಶ ಸಂಭ್ರಮ ಹೇಗಿತ್ತು? ನೋಡ್ಕೊಂಡು ಬನ್ನಿ...

 • nita ambani
  Video Icon

  LIFESTYLE3, Sep 2019, 5:32 PM

  ಮುಕೇಶ್ ಅಂಬಾನಿ ಆ್ಯಂಟಿಲಿಯಾದಲ್ಲಿ ವಿಜೃಂಭಣೆಯ ಗಣೇಶ ಹಬ್ಬ; ಒಂದು ಝಲಕ್

  ಇಡೀ ದೇಶದಲ್ಲಿ ಗಣೇಶ ಚತುರ್ಥಿಯನ್ನು ಬಹಳ ಸಡಗರದಿಂದ ಆಚರಿಸಲಾಗುತ್ತದೆ. ರಿಲಯನ್ಸ್ ಒಡೆಯ ಮುಕೇಶ್ ಅಂಬಾನಿ ನಿವಾಸದಲ್ಲೂ ಬಹಳ ವಿಜೃಂಭಣೆಯಿಂದ ವಿನಾಯಕ ಹಬ್ಬವನ್ನು ಆಚರಿಸಲಾಯ್ತು. ನೀತಾ ಅಂಬಾನಿ ನೇತೃತ್ವದಲ್ಲಿ ನಡೆದ ಈ ಸಮಾರಂಭದ ಒಂದು ಝಲಕ್ ಇಲ್ಲಿದೆ....

 • 02 top10 stories

  NEWS2, Sep 2019, 4:49 PM

  ಗೌರಿ ಗಣೇಶ ಹಬ್ಬದ ಸಂಭ್ರಮ, ಡಿಕೆಶಿಗೆ ಇಡಿ ಗುನ್ನ; ಇಲ್ಲಿವೆ ಸೆ.02ರ ಟಾಪ್ 10 ಸುದ್ದಿ!

  ದೇಶದೆಲ್ಲೆಡೆ ಇಂದು ಗೌರಿ ಗಣೇಶ ಹಬ್ಬದ ಸಂಭ್ರಮ. ಆದರೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಇಡಿ ಅಧಿಕಾರಿಗಳೆರೆದುರು ವಿಚಾರಣೆಗೆ ಹಾಜರಾಗಾಬೇಕಾಯಿತು. ಹಬ್ಬದ ದಿನ ಡಿಕೆಶಿ ಅಪ್ಪನನ್ನು ನೆನೆದು ಡಿಕೆಶಿ ಕಣ್ಣೀರು ಹಾಕಿದರೆ, ಮಗನ ಸಂಕಷ್ಟ ನೋಡಿ ತಾಯಿ ಕೊರಗಿದರು. ದೆಹಲಿ ಮಾತ್ರವಲ್ಲ ಕರ್ನಾಟಕದಲ್ಲೂ ಹಲವು ರಾಜಕಾರಣಿಗಳು ತುಂತುರ ಮಳೆಯಲ್ಲೂ ಬೆವತಿದ್ದಾರೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ CBI ಮತ್ತೊಂದು ಬೇಟೆಗೆ ಇಳಿದಿದೆ. ರಾಜಕೀಯ ಹೊರತುಪಡಿಸಿದರೆ, ಕಿಚ್ಚ ಸುದೀಪ್‌ ವಿಶೇಷವಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ. ಸಿನಿ ತಾರೆಯರ ಗೌರಿ ಗಣೇಶ ಹಬ್ಬ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ವಿಕೆಟ್ ಕೀಪರ್ ಪಂತ್ ದಾಖಲೆಯ ಪ್ರದರ್ಶನ ಸೇರಿದಂತೆ ಹತ್ತು ಹಲವು ಸುದ್ದಿಗಳು ಸಂಚಲನ ಸೃಷ್ಟಿಸಿತು. ಸೆಪ್ಟೆಂಬರ್ 2 ರ ಟಾಪ್ 10 ಸುದ್ದಿಗಳ ವಿವರ ಇಲ್ಲಿದೆ.

 • POP Ganesha

  Karnataka Districts2, Sep 2019, 1:52 PM

  ಗಣೇಶೋತ್ಸವ, ಮೊಹರಂ: ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್

  ಗೌರಿ ಗಣೇಶ ಹಬ್ಬ ಹಾಗೂ ಮೊಹರಂ ಹಬ್ಬದ ಪ್ರಯುಕ್ತ ಶಾಂತಿಯುತ ಆಚರಣೆಗಾಗಿ ಸಕಲ ಕ್ರಮಕೈಗೊಂಡು ಶಿವಮೊಗ್ಗ ಜಿಲ್ಲೆಯಾದ್ಯಂತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ 

 • bbmp

  Karnataka Districts31, Aug 2019, 4:43 PM

  ಬೆಂಗಳೂರಿಗರೆ ಗಮನಿಸಿ...ಈ ಕೆರೆಗಳಲ್ಲಿ ಮಾತ್ರ ಗಣೇಶ ವಿಸರ್ಜನೆಗೆ ಅವಕಾಶ

  ಗಣೇಶ ಹಬ್ಬ ಬಂದಿದೆ.. ಸಂಭ್ರಮ ಸಡಗರ ಎಲ್ಲರಲ್ಲೂ ಮನೆ ಮಾಡಿದೆ. ಇದೇ ಕಾರಣಕ್ಕೆ ಪಿಒಪಿ ಗಣೇಶ ವಿಗ್ರಹ ಮನೆಗೆ ತಂದರೆ ತೊಂದರೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಪಿಒಪಿ ಅಥವಾ ವಿಷಯುಕ್ತ ರಾಸಾಯನಿಕ ಬಣ್ಣಗಳಿಂದ ಲೇಪಿತ ವಿಗ್ರಹಗಳನ್ನು ಈಗಾಗಲೇ ನಿಷೇಧ ಮಾಡಲಾಗಿದೆ.

 • current shock
  Video Icon

  NEWS30, Aug 2019, 5:01 PM

  ಎತ್ತರದ ಗಣೇಶ ಸಾಗಿಸಲು ಹೋಗಿ ಇಬ್ಬರ ದುರ್ಮರಣ

  ಸೂರತ್[ಆ. 30]  ಗಣೇಶ ಹಬ್ಬದ ಸಂಭ್ರಮ ಎಲ್ಲ ಕಡೆ ಮನೆ ಮಾಡುತ್ತಿದೆ. ಆದರೆ ಈ ಕುಟುಂಬಗಳಿಗೆ ಮಾತ್ರ ಸೂತಕದ ಛಾಯೆ. ಎತ್ತರದ ಗಣೇಶ ಮೂರ್ತಿಯನ್ನು ಸಾಗಿಸುವ ವೇಳೆ ವಿದ್ಯುತ್ ತಂತಿಗೆ ಎತ್ತರದ ವಿಗ್ರಹ ಸ್ಪರ್ಶವಾಗಿ ಅವಘಡ ಸಂಭವಿಸಿದೆ. ಇಬ್ಬರು ಯುವಕರು ಮೃತಪಟ್ಟಿದ್ದು 5 ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೂರತ್ ನಿಂದ ವರದಿಯಾಗಿದೆ. ವಿದ್ಯುತ್ ಶಾಕ್ ಗೆ ಬಲಿಯಾದವರನ್ನು ಅಮಿತ್ ಸೋಲಂಕಿ ಮತ್ತು ಕುನಾಲ್ ಪಟೇಲ್ ಎಂದು ಗುರುತಿಸಲಾಗಿದೆ.

 • DJ Dance

  Karnataka Districts30, Aug 2019, 12:13 PM

  ಶಿವಮೊಗ್ಗ: ಹಬ್ಬ ಆಚರಣೆಯಲ್ಲಿ ಡಿಜೆ, ಬೈಕ್ ರ‍್ಯಾಲಿಗಿಲ್ಲ ಅವಕಾಶ

  ಗಣೇಶ ಹಬ್ಬದ ನೆಪದಲ್ಲಿ ಡಿಜೆ ಹಾಕಿ ಕುಣಿದು, ಬೈಕ್ ರ‍್ಯಾಲಿ ಮಾಡಬೇಕೆಂದಿದ್ದವರಿಗೆ ಶಿವಮೊಗ್ಗ ಡಿಸಿ ಖಡಕ್ ವಾರ್ನಿಂಗ್ ನೀಡಿದ್ದಾರೆ. ಯಾವುದೇ ಕಾರಣಕ್ಕೂ ಹಬ್ಬ ಆಚರಣೆ ಸಂದರ್ಭ ಡಿಜೆ ಹಾಕುವಂತಿಲ್ಲ, ಬೈಕ್ ರ‍್ಯಾಲಿ ಮಾಡುವಂತಿಲ್ಲ ಎಂದು ಡಿಸಿ ಶಿವಕುಮಾರ್‌ ತಾಕೀತು ಮಾಡಿದ್ದಾರೆ.

 • Ganesh Chaturthi

  NEWS28, Aug 2019, 9:51 PM

  ದೇವರಿಗೂ ವಿಮೆ.. ಈ ಶ್ರೀಮಂತ ಗಣೇಶನ ಶಕ್ತಿಯೇ ಹಾಗೆ..

  ದೇವರಿಗೂ ವಿಮೆ ಮಾಡಿಸುತ್ತಾರಾ? ಹೌದು.. ಖಂಡಿತ ಮಾಡಿಸುತ್ತಾರೆ. ಮುಂಬೈನ ಈ ಸುದ್ದಿ ನೋಡಲೇಬೇಕು.. ವಿಮಾ ಮೊತ್ತ ಅಬ್ಬಬ್ಬಾ..

 • Ganesha chuturthi

  BUSINESS28, Aug 2019, 7:45 AM

  ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ!: ದೇಣಿಗೆ ಸಂಗ್ರಹದಲ್ಲಿ ಶೇ.25ರಷ್ಟು ಇಳಿಕೆ!

  ಗಣೇಶನಿಗೂ ತಟ್ಟಿದ ಆರ್ಥಿಕ ಹಿಂಜರಿತ!| ದೇಣಿಗೆ ಸಂಗ್ರಹದಲ್ಲಿ ಶೇ.25ರಷ್ಟು ಇಳಿಕೆ| ಗಣೇಶನ ಆಭರಣಕ್ಕೂ ಬಂದಿಲ್ಲ ಬೇಡಿಕೆ

 • cotton art

  LIFESTYLE19, Aug 2019, 5:34 PM

  ಅಪರೂಪದ ಅತ್ತೆ ಸೊಸೆ: ಇವರ ಮನೆ ಗೆಜ್ಜೆವಸ್ತ್ರದ ಪುಟ್ಟ ಬೊಗಸೆ

  ಬೆಳಕಿಗೆ ಬಾರದ ಅದೆಷ್ಟೋ ಪ್ರತಿಭೆಗಳು ನಮ್ಮಲ್ಲಿವೆ. ಅದರಲ್ಲಿಯೂ ಅಳಿದು ಹೋಗುತ್ತಿರುವ ಗೆಜ್ಜೆವಸ್ತ್ರದಂಥ ಕಲೆಗೆ ಜೀವ ತುಂಬುವವರೂ ಹಲವರಿದ್ದಾರೆ. ಇದೀಗ ಗೌರಿ ಹಬ್ಬದ ಸೀಸನ್. ಮಗಳಿಗೆ ಅರಿಷಿನ- ಕುಂಕುಮ ನೀಡುವ ಸಂಭ್ರಮ ತವರಿಗೆ. ಅದೇ ಹೊತ್ತಲ್ಲಿ ವಿಧ ವಿಧವಾದ ಗೆಜ್ಜೆವಸ್ತ್ರಗಳೂ ಅಲ್ಲಲ್ಲಿ ತಯಾರಾಗುತ್ತಿವೆ. ಇಂಥ ಕಲೆಯನ್ನು ಬೆಳೆಸುತ್ತಿರುವ ಮಲೆನಾಡಿನ ಅತ್ತೆ-ಸೊಸೆ ಶ್ರೀಮತಿ ಹಾಗೂ ಮಮತಾ ಅವರ ಕೈ ಕುಸುರಿಯ ಝಲಕ್ ಇಲ್ಲಿವೆ ನೋಡಿ...