ಬೆಂಗಳೂರು (ಮಾ.07):  ಮಾಜಿ ಕಾರ್ಪೊರೇಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಅನುಮಾನಾಸ್ಪದ ರೀತಿಯಲ್ಲಿ ಸಾವಿಗೀಡಾಗಿದ್ದಾನೆ. 

ಧರ್ಮರಾಯಸ್ವಾಉ ಟೆಂಪಲ್ ವಾರ್ಡ್ ಮಾಜಿ ಕಾರ್ಪೊರೇಟರ್ ಧನರಾಜ್‌ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಪಾಂಡಿ ಪ್ರಭು (30) ಎಂಬಾತ ಸಾವಿಗೀಡಾಗಿದ್ದಾನೆ. 

ದೆಹಲಿಯಲ್ಲಿ ತಾಳಿಕೋಟೆ ಮೂಲದ ಕರ್ತವ್ಯ ನಿರತ ಯೋಧ ಆತ್ಮಹತ್ಯೆ ..

ಪಾಂಡಿ ಪ್ರಭು ಮಾಜಿ ಕರ್ಪೊರೇಟರ್ ಧನರಾಜ್ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ.  ಇದೀಗ ಕಚೇರಿ ಕಟ್ಟಡದಲ್ಲೇ ಆತನ ಮೃತದೇಹ ಪತ್ತೆಯಾಗಿದೆ. 

ತಡರಾತ್ರಿ ಇಬ್ಬರು ಯುವಕರ ಜತೆಯಲ್ಲಿಯೇ ಕಚೇರಿಯಲ್ಲಿಯೇ ಪ್ರಭು ಉಳಿದುಕೊಂಡಿದ್ದ. ಬೆಳಗಾಗುವಷ್ಟರಲ್ಲಿ ಪ್ರಭು ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಈ ಸಂಬಂಧ ಕಲಾಸಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.