ಹವ್ಯಾಸಿ ಬೇಟೆಗಾರರು ಯುವಕನಿಗೆ ಗುಂಡು ಹಾರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ ಕಾಡುಹಂದಿ ಎಂದು ತಿಳಿದು ಯುವಕನ ಮೇಲೆ ಫೈರಿಂಗ್ 

ಮಂಡ್ಯ (ಸೆ.09): ಹವ್ಯಾಸಿ ಬೇಟೆಗಾರರು ಯುವಕನಿಗೆ ಗುಂಡು ಹಾರಿಸಿದ ಘಟನೆ ಮಂಡ್ಯದಲ್ಲಿ ನಡೆದಿದೆ. ಕಾಡುಹಂದಿ ಎಂದು ತಿಳಿದು ಯುವಕನ ಮೇಲೆ ಫೈರಿಂಗ್ ಮಾಡಲಾಗಿದೆ. 

ಫೈರಿಂಗ್ ಮಾಡಿದ್ದರಿಂದ ಕಬ್ಬಿನ ಗದ್ದೆಯಲ್ಲಿ ಹುಲ್ಲು ಕೂಯ್ಯುತ್ತಿದ್ದ ಯುವಕನಿಗೆ ಗಂಭೀರ ಗಾಯವಾಗಿದೆ. ಮೇಳಾಪುರ ಗ್ರಾಮದ ಹೊರವಲಯದಲ್ಲಿ ಘಟನೆ ಬುಧವಾರ ನಡೆದಿದೆ. 

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮೇಳಾಪುರದ ಮಾದೇಶ್ (25) ಗುಂಡೇಟಿನಿಂದ ಗಾಯಗೊಂಡಿರುವ ಯುವಕನಾಗಿದ್ದಾನೆ. ನಾಡಬಂದೂಕು ಬಳಸಿ ಕಾಡುಹಂದಿ ಬೇಟೆಗೆ ಬಂದ ತಂಡದಿಂದ ಈ ಕೃತ್ಯ ನಡೆದಿದೆ.

ರಾಯಚೂರು: ಫೇಸ್‌ಬುಕ್‌ ಲೈವಲ್ಲಿ ಯುವಕ ಆತ್ಮಹತ್ಯೆ

ಮೈಸೂರು ಜಿಲ್ಲೆಯ 6 ಮಂದಿ ಯುವಕರ ತಂಡ ಬೇಟೆಗೆ ಬಂದಿತ್ತು. ಮಾದೇಶ ಅವರ ಕಬ್ಬಿನ ಗದ್ದೆಯಲ್ಲಿ ಹಂದಿಗಾಗಿ ಶೋಧ ನಡೆಸುತ್ತಿದ್ದ ತಂಡ ಅದೇ ಗದ್ದೆಯ ಬದುವಿನಲ್ಲಿ ಹುಲ್ಲು ಕುಯ್ಯುತ್ತಿದ್ದ ಮಾದೇಶನ ಮೇಲೆ ಗುಂಡಿನ ದಾಳಿ ನಡೆದಿದೆ. ಕಬ್ಬಿನ ಗರಿಗಳು ಅಲುಗಾಡುತ್ತಿದ್ದನ್ನು ಗಮನಿಸಿ ಹಂದಿಯೆಂದು ಫೈರಿಂಗ್ ಮಾದೇಶನ ಹೊಟ್ಟೆ ಭಾಗಕ್ಕೆ ಗುಂಡು ತಗುಲಿ ಗಂಭೀರ ಗಾಯವಾಗಿದೆ.

ಗಾಯಾಳು ಮಾದೇಶನಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರು ಮಂದಿ ಯುವಕರ ಪೈಕಿ ಮೂವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ. ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.