ತೋಳ ಕೊಂದು ಬೈಕ್‌ಗೆ ಕಟ್ಟಿ ಊರ ತುಂಬ ಮೆರವಣಿಗೆ ಮಾಡಿದ ಯುವಕರು
- ಕಾಡು ಪ್ರಾಣಿ ತೋಳವನ್ನು ಕೊಂದು, ಅದನ್ನು ಬೈಕ್‌ಗೆ ಕಟ್ಟಿಕೊಂಡು ಊರ ತುಂಬ ಮೆರವಣಿಗೆ
- ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಘಟನೆ 3 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ
ಲಕ್ಷ್ಮೇಶ್ವರ (ಆ.19): ಸಮೀಪದ ಆದ್ರಳ್ಳಿ ಗ್ರಾಪಂ ವ್ಯಾಪ್ತಿಯ ಸೋಗಿವಾಳ (Sogivala) ಗ್ರಾಮದಲ್ಲಿನ ಯುವಕರು ಕಾಡು ಪ್ರಾಣಿ ತೋಳವನ್ನು ಕೊಂದು, ಅದನ್ನು ಬೈಕ್‌ಗೆ (Bike) ಕಟ್ಟಿಕೊಂಡು ಊರ ತುಂಬ ಮೆರವಣಿಗೆ ಮಾಡಿ ವಿಕೃತಿ ಮೆರೆದಿರುವ ಘಟನೆ 3 ದಿನಗಳ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸೋಗಿವಾಳದಲ್ಲಿ 3-4 ದಿನಗಳ ಹಿಂದೆ ತೋಳವೊಂದು (Wolf) ಗ್ರಾಮದಲ್ಲಿ ದಾಳಿ ನಡೆಸಿ 3-4 ಜನರನ್ನು ಕಚ್ಚಿ ಗಾಯಗೊಳಿಸಿದ್ದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ತೋಳವನ್ನು ಬಡಿಗೆ ಹಾಗೂ ಕೊಡಲಿಯಿಂದ ಹೊಡೆದು ಕೊಂದು ಹಾಕಿದ್ದಾರೆ. ಆದರೆ ಇಷ್ಟಕ್ಕೆ ಸುಮ್ಮನಾಗದ ಯುವಕರು (Youths) ತೋಳವನ್ನು ತಮ್ಮ ಬೈಕ್‌ನ ಹಿಂಬದಿಗೆ ಕಟ್ಟಿಕೊಂಡು ಕೇಕೆ ಹಾಕುತ್ತ ಊರ ತುಂಬ ಎಳೆದಾಡಿ ಮೆರವಣಿಗೆ ಮಾಡಿ ವಿಕೃತಿ ಮೆರದಿದ್ದಾರೆ. ಅಲ್ಲದೆ ಸತ್ತ ತೋಳವನ್ನು ಹಳ್ಳದಲ್ಲಿ ಬಿಸಾಡಿದ್ದಾರೆ. ಅದನ್ನು ವಿಡಿಯೋ (Video) ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಹರಿ ಬಿಟ್ಟಿದ್ದಾರೆ.
ಕೋಲಾರ: ಬೀದಿ ನಾಯಿಗಳಿಂದ ಜಿಂಕೆ ರಕ್ಷಿಸಿದ ಗ್ರಾಮಸ್ಥರು
ಸಾಮಾಜಿಕ ಜಾಲ ತಾಣದಲ್ಲಿ ತೋಳ ಕೊಂದು ವಿಕೃತಿ ಮೆರೆದಿರುವ ವಿಡಿಯೋ ನೋಡಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ (Forest Department) ಅಧಿಕಾರಿಗಳು ತೋಳದ ಶವ ಹಾಗೂ ಮೆರವಣಿಗೆ ಮಾಡಿ ವಿಕೃತಿ ಮೆರೆದ ಯುವಕರ ಶೋಧ ಕಾರ್ಯ ಮಾಡುತ್ತಿದ್ದಾರೆ. ಈ ಕುರಿತು ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡು (Case Registered) ತನಿಖೆ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ತೋಳದ ದಾಳಿಯಿಂದ ಗಾಯಗೊಂಡ ಶಿವಾನಂದ ಎಂಬ ಯುವಕನು ಗದಗ ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.