ಎಡ ಅಂಗೈ ಕಳೆ​ದು​ಕೊಂಡರೂ ಮಾಸ್ಕ್‌ ಹೊಲೀತಾಳೆ ದಿವ್ಯಾಂಗ ಬಾಲಕಿ..!

ಈ ಕೊರೋನಾ ಕಾಲದಲ್ಲಿ ಫೇಸ್‌ ಮಾಸ್ಕ್‌ ಧರಿಸುವುದು ಜೀವನದ ಅವಿಭಾಜ್ಯ ಅಂಗ. ಎಲ್ಲರೂ ಅಂಗಡಿಗಳಿಂದ ಮಾಸ್ಕ್‌ಗಳನ್ನು ಹಣ ಕೊಟ್ಟು ಖರೀದಿಸುತ್ತಿದ್ದರೆ, ಇಲ್ಲೊಬ್ಬ ಬಾಲಕಿ ತನಗೆ ಬೇಕಾದ ಮಾಸ್ಕ್‌ಗಳನ್ನು ತಾನೇ ಹೊಲಿದುಕೊಂಡು ಇತರರಿಗೆ ಮಾದರಿಯಾಗಿದ್ದಾಳೆ.

Physically challenged girl stitches mask at home

ಉಡುಪಿ(ಜೂ.24): ಈ ಕೊರೋನಾ ಕಾಲದಲ್ಲಿ ಫೇಸ್‌ ಮಾಸ್ಕ್‌ ಧರಿಸುವುದು ಜೀವನದ ಅವಿಭಾಜ್ಯ ಅಂಗ. ಎಲ್ಲರೂ ಅಂಗಡಿಗಳಿಂದ ಮಾಸ್ಕ್‌ಗಳನ್ನು ಹಣ ಕೊಟ್ಟು ಖರೀದಿಸುತ್ತಿದ್ದರೆ, ಇಲ್ಲೊಬ್ಬ ಬಾಲಕಿ ತನಗೆ ಬೇಕಾದ ಮಾಸ್ಕ್‌ಗಳನ್ನು ತಾನೇ ಹೊಲಿದುಕೊಂಡು ಇತರರಿಗೆ ಮಾದರಿಯಾಗಿದ್ದಾಳೆ.

"

ಈಕೆ ಉಡುಪಿ ತಾಲೂಕಿನ ಕಲ್ಯಾಣಪುರದ ಸುಧೀರ್‌ - ರೇಣುಕಾ ದಂಪತಿ ಮಗಳು, 6ನೇ ತರಗತಿಯ ವಿದ್ಯಾರ್ಥಿನಿ ಸಿಂಧೂರಿ. ಎಡಗೈಯ ಅಂಗೈ ಇಲ್ಲದ ಈ ಬಾಲಕಿ ಮನೆಯಲ್ಲಿಯೇ 15 ಮಾಸ್ಕ್‌ಗಳನ್ನು ಹೊಲಿದುಕೊಂಡಿದ್ದಾಳೆ.

ಬಡ​ಗು​ಬೆ​ಟ್ಟು ಬಶೀರರ ಆಟೋದಲ್ಲಿ ಕೊರೋನಾ ಹರಡೋದಿಲ್ಲ!

ಒಂದು ಕೈ ಇಲ್ಲದಿರುವುದರಿಂದ ಆಕೆಗೆ ಬಟ್ಟೆಯನ್ನು ಕತ್ತರಿಸುವುದಕ್ಕೆ ಆಗುವುದಿಲ್ಲ. ಆದ್ದರಿಂದ ತಾಯಿ ಬಟ್ಟೆಕತ್ತರಿಸಿಕೊಡುತ್ತಾರೆ. ಸಿಂಧೂರಿ ಹೊಲಿಯುತ್ತಾಳೆ. ಇತರರಿಗೆ ಒಂದು ಮಾಸ್ಕ್‌ ಹೊಲಿಯುವುದಕ್ಕೆ 5 ನಿಮಿಷಗಳ ಸಾಕಾಗುತ್ತದೆಯಾದರೆ, ಸಿಂಧೂರಿಗೆ 10 ನಿಮಿಷ ಬೇಕಾಗುತ್ತಿದೆ.

Physically challenged girl stitches mask at home

ತಾಯಿ ಮಾಸ್ಕ್‌ ಹೊಲಿಯುತ್ತಿದ್ದುದನ್ನು ನೋಡಿ ನನಗೂ ಹೊಲಿಯಬೇಕು ಅನ್ನಿಸಿತು. ತಾಯಿಯನ್ನು ಕೇಳಿದೆ. ಅವರು ಹೇಳಿಕೊಟ್ಟರು. ​ಆ​ರಂಭ​ದಲ್ಲಿ ಕಷ್ಟಆಯ್ತು. ಈಗ ಸುಲಭ ಆಗ್ತಿದೆ. ತುಂಬಾ ಖುಶಿಯಾಗುತ್ತದೆ ಎನ್ನುತ್ತಾಳೆ ಸಿಂಧೂರಿ. ಶಿಕ್ಷಕಿಯಾಗಬೇಕು ಅನ್ನುವ ಕನಸು ಹೊತ್ತಿ​ರುವ ಸಿಂಧೂ​ರಿ, ಶಾಲೆಯಲ್ಲಿ ಬುಲ್‌ಬುಲ್‌ ಕ್ಲಬ್‌ನ ಸಕ್ರಿಯ ಸದಸ್ಯೆ ಕೂಡ ಹೌದು.

Latest Videos
Follow Us:
Download App:
  • android
  • ios