ಸಕಲೇಶಪುರ (ನ.08):  ತಾಲೂಕಿನ ಹೆತ್ತೂರು ಹೋಬಳಿಯ ರೆಸಾರ್ಟ್‌ವೊಂದರಲ್ಲಿ ಶುಕ್ರವಾರ ರಾತ್ರಿ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಯುವಕನ ಸಾವಿನ ಕುರಿತು ಸಂಶಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹೆತ್ತೂರು ಹೋಬಳಿ ವನಗೂರು ಗ್ರಾ.ಪಂ ವ್ಯಾಪ್ತಿಯ ಪಟ್ಲ ಗ್ರಾಮದ ಕಾರ್ತೀಕ್‌(22) ಎಂಬಾತ ಹೆತ್ತೂರು ಸಮೀಪದ ಖಾಸಗಿ ರೆಸಾರ್ಟ್‌ವೊಂದರಲ್ಲಿ ಶುಕ್ರವಾರ ರಾತ್ರಿ ತಂಗಿದ್ದು ಬೆಳಗ್ಗಿನ ವೇಳೆ ಸಾವನ್ನಪ್ಪಿದ್ದಾನೆ. ಕಾರ್ತೀಕ್‌ ಈ ಹಿಂದೆ ಇದೇ ರೆಸಾರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ರೆಸಾರ್ಟ್‌ನವರು ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳುತ್ತಿದ್ದಾರೆ. 

ಅಂಗಡಿ ಎದುರಲ್ಲಿ ನಿತ್ರಾಣಗೊಂಡು ವ್ಯಕ್ತಿ ಸಾವು: ವಾರಸುದಾರರು ಪತ್ತೆಗೆ ಪೊಲೀಸ್ ಮನವಿ ...

ಆದರೆ ಇದು ಸಂಪೂರ್ಣ ಅನುಮಾನಸ್ಪದವಾಗಿದೆ. ಘಟನೆ ಕುರಿತು ಮುಂಜಾನೆಯೆ ಪೋಲಿಸರಿಗೆ ಮಾಹಿತಿ ಇದ್ದರೂ ಮಧ್ಯಾಹ್ನದ ವೇಳೆ ಯಾವುದೆ ರೀತಿಯಲ್ಲಿ ಸರಿಯಾಗಿ ಮಹಜರು ಮಾಡದೆ ಮೃತ ದೇಹವನ್ನು ಶವ ಪರೀಕ್ಷೆಗೆ ತೆಗೆದುಕೊಂಡು ಹೋಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಕೂಡಲೆ ಇದರ ವಿರುದ್ಧ ತನಿಖೆ ಮಾಡಿ ತಪ್ಪಿತಸ್ಥರನ್ನು ಬಂ​ಸಬೇಕು ಎಂದು ಗ್ರಾಮಸ್ಥ ವಿರೂಪಾಕ್ಷ ಹೇಳಿದ್ದಾರೆ. ಯಸಳೂರು ಠಾಣೆಯಲ್ಲಿ ದೂರು ದಾಖಲಾಗಿದೆ.