ತುಮಕೂರು (ನ.08):  ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನವೆಂಬರ್‌ 6ರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ಕೋಡಿ ಸರ್ಕಲ್‌ ಬಳಿಯಿರುವ ಕೃಷ್ಣರಾಜೇಂದ್ರ ಮಾರುಕಟ್ಟೆಯ ಅಂಗಡಿ ಮಳಿಗೆಯ ಮುಂಭಾಗ ನಿತ್ರಾಣ ಸ್ಥಿತಿಯಲ್ಲಿದ್ದ ಸುಮಾರು 60 ರಿಂದ 65 ವರ್ಷದ ಅಪರಿಚಿತ ವ್ಯಕ್ತಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ವೈದ್ಯಾಧಿಕಾರಿಗಳು ಪರೀಕ್ಷಿಸಿದಾಗ ವ್ಯಕ್ತಿ ಮೃತಪಟ್ಟಿದ್ದಾನೆಂದು ತಿಳಿದು ಬಂದಿದ್ದು, ಮೃತನ ವಾರಸುದಾರರ ಬಗ್ಗೆ ಮಾಹಿತಿಯಿರುವುದಿಲ್ಲ. ಮೃತನು ಸುಮಾರು 170 ಸೆ.ಮೀ ಎತ್ತರ, ಗೋಧಿ ಮೈಬಣ್ಣ, ಕೋಲು ಮುಖ, ದೃಢಕಾಯ ಶರೀರ ಹೊಂದಿದ್ದು, ಮೈಮೇಲೆ ಮಾಸಲು ಬಿಳಿ ಅಂಗಿ ಇರುತ್ತದೆ. 

ಕೊಲೆಗೂ ಮುನ್ನ ಕೊಲೆಯ ನಂತ್ರ ಅವನೊಬ್ಬನ ಸೂಚನೆಯಂತೆ ನಡೆಯುತ್ತೆ ..

ಈತನ ವಾರಸುದಾರರ ಬಗ್ಗೆ ಮಾಹಿತಿ ಇದ್ದವರು ಸಮೀಪದ ಪೊಲೀಸ್‌ ಠಾಣೆಯನ್ನು ಸಂಪರ್ಕಿಸಬೇಕೆಂದು ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಮನವಿ ಮಾಡಿದ್ದಾರೆ.