ಶಿವಮೊಗ್ಗದಲ್ಲಿ ಗ್ಯಾಂಗ್ ಒಂದು ಪ್ರೇಮಿಗಳು ವಿಡಿಯೋನಿಂದ ಬ್ಲಾಕ್ ಮೇಲ್ ಮಾಡಿ ಒಂದು ಜೀವ ಬಲಿ ತೆಗೆದುಕೊಂಡಿದೆ.

ಶಿವಮೊಗ್ಗ, [ನ.21]: ಹಣಕ್ಕಾಗಿ ಪ್ರೇಮಿಗಳಿಗೆ ಬ್ಲಾಕ್​​ ಮೇಲ್ ಗೆ ಹೆದರಿ ವಿಷ ಸೇವಿಸಿ ಆತ್ಮಹತ್ಯೆಗೆ ಮುಂದಾದ ಪ್ರಿಯಕರ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. 

ಮಂಡಘಟ್ಟದ ಸಂಜಯ್​ ಹಾಗೂ ರಾಗಿ ಹೊಸಹಳ್ಳಿಯ ಕೀರ್ತನಾ ಎಂಬುವರು ಅಂತರ್ಜಾತಿಯ ಪ್ರೇಮಿಗಳಾಗಿದ್ದು, ಇಬ್ಬರು ಹೊರಗಡೆ ವಿಹರಿಸುತ್ತಿದ್ದಾಗ, ಅನ್ಯ ಕೋಮಿನ ಯುವಕರಾದ ಯಾಸೀನ್​​ ಗ್ಯಾಂಗ್​ವೊಂದು ಇವ್ರ ವಿಡೀಯೋ ಚಿತ್ರೀಕರಿಸಿ, ಪ್ರೇಮಿಗಳಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿದೆ. 

ಅಲ್ಲದೇ ಹಣ ಕೊಡದಿದ್ರೆ, ಈ ವಿಡೀಯೋವನ್ನ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬ್ಲಾಕ್​ ಮೇಲ್​ ಮಾಡಿದ್ದಾರೆ. ಜೊತೆಗೆ ಪ್ರಿಯಕರನಿಗೆ ಕರೆ ಮಾಡಿ ಮೊದಲಿಗೆ 5 ಸಾವಿರ ಹಣ ಪೀಕಿದ್ದಾರೆ.

 ಆದ್ರೆ ಇಷ್ಟಕ್ಕೆ ಸುಮ್ಮನಾಗದ ಯಾಸೀನ್​ ಗ್ಯಾಂಗ್​ ಯುವಕನ ಬಳಿಕ 5 ಲಕ್ಷಕ್ಕೆ ಡಿಮ್ಯಾಂಡ್​ ಮಾಡಿದ್ದಾರೆ. ಆದ್ರೆ ಇಷ್ಟೊಂದು ಹಣ ಹೊಂದಿಸಲು ಆಗದ ಪ್ರೇಮಿಗಳಿಬ್ಬರು ನಿನ್ನೆ ಮಂಡಘಟ್ಟದ ಕೆರೆ ಕೋಡಿ ಬಳಿ ವಿಷ ಸೇವಿಸಿ, ತಮ್ಮ ಗೆಳೆಯರಿಗೆ ವಿಷಯ ತಿಳಿಸಿದ್ದಾರೆ. 

ಕೂಡಲೇ ಅವರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿತ್ತಾದ್ರೂ, ಚಿಕಿತ್ಸೆ ಫಲಿಸದೇ ಪ್ರಿಯಕರ ಸಂಜಯ್ ಇಂದು ಮೃತಪಟ್ಟಿದ್ದಾನೆ. ಇನ್ನು ಯುವತಿ ಕೀರ್ತನಾ ಸಾವು ಬದುಕಿ ಮಧ್ಯೆ ಹೋರಾಟ ನಡೆಸಿದ್ದಾರೆ.

 ಈ ಕುರಿತು ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.