ದಾವಣಗೆರೆ [ಜ.15]: ಟಿಪ್ಪು ಸುಲ್ತಾನ್‌ ಬಾಯ್ಸ್ ಎಂಬ ವಾಟ್ಸಾಪ್‌ ಗ್ರೂಪ್‌ ಮಾಡಿಕೊಂಡು ರಾಷ್ಟ್ರ ವಿರೋಧಿ ಸಂದೇಶ ಹಾಕುತ್ತಿದ್ದ ಆರೋಪಿಯನ್ನು ದಾವಣಗೆರೆ ಬಸವನಗರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್‌ ರಜಾಕ್‌ ಬಂಧಿತ ಆರೋಪಿಯಾಗಿದ್ದಾನೆ. ಬಂಗಾರದ ಪಾಲಿಶ್‌ ಕೆಲಸ ಮಾಡುವ 17 ವರ್ಷ ಪ್ರಾಯದ ಹೊಸ ಕ್ಯಾಂಪ್‌ನ ಯುವಕ ವಾಟ್ಸಾಪ್‌ ಗ್ರೂಪ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ, ನರೇಂದ್ರ ಮೋದಿ ಹಾಗೂ ಭಾರತ ದೇಶದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಎನ್ನಲಾಗಿದೆ. 

ಗಣರಾಜ್ಯೋತ್ಸವ ದಿನ ರಕ್ತಪಾತಕ್ಕೆ ಐಸಿಸ್‌ ಉಗ್ರರ ಬಳಸಿ ಪಾಕ್‌ ಸಂಚು...

ವಿಷಯ ತಿಳಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಯುವಕನನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಬಸವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ದೇಶದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿ, ಕಾನೂನು ಸುವ್ಯವಸ್ಥೆ ಬಗ್ಗೆ ಕೆಟ್ಟದಾಗಿ ಪೋಸ್ಟ್‌ ಮಾಡಿದ್ದಲ್ಲದೆ, ಪಾಕಿಸ್ತಾನದ ಬಾವುಟವನ್ನು ಶೇರ್‌ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬಸವನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.