ಗಾಂಜಾ ಸೇವಿಸಿ ಪಬ್ಲಿಕ್‌ನಲ್ಲೇ ಯುವಕನ ಹುಚ್ಚಾಟ

ಗಾಂಜಾ ಸೇವನೆ ಮಾಡಿಕೊಂಡು ಯುವಕನೋರ್ವ ಸಾರ್ವಜನಿಕವಾಗಿಯೇ ಹುಚ್ಚಾಟ ಮೆರೆದ ಘಟನೆ ಕೋಲಾರದಲ್ಲಿ ನಡೆದಿದೆ. ಈಗ ಈತನನ್ನು ಅರೆಸ್ಟ್ ಮಾಡಲಾಗಿದೆ. 

Youth Arrested For Consuming Ganja in Kolar snr

ಕೋಲಾರ (ಜ.25):  ಗಾಂಜಾ  ಮತ್ತಿನಲ್ಲಿ ಯುವಕನೋರ್ವ ಹುಚ್ಚಾಟ ಮೆರೆದಿದ್ದು,  ದೇವರ ಮುಂದಿದ್ದ ತಲ್ವಾರ್ ಹಿಡಿದು ರೌಂಡ್ಸ್ ಹಾಕಿದ್ದಾನೆ. 

ಕೋಲಾರ ಜಿಲ್ಲೆಯ ಕೆಜಿಎಫ್ ನ ಭಾರತೀಪುರದಲ್ಲಿ ಘಟನೆ  ನಡೆದಿದೆ.  ತಲ್ವಾರ್ ಹಿಡಿದು ತಿರುಗಾಡಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಒಬ್ಬೊರನ್ನು ಸಾಯಿಸುತ್ತೇನೆ ಎಂದು ಸಿಕ್ಕ ಸಿಕ್ಕವರಿಗೂ ಆವಾಜ್ ಹಾಕಿದ್ದು, ಕಿಡಿಗೇಡಿಯ ಹುಚ್ಚಾಟದಿಂದ ಜನರು ಬೆಚ್ಚಿ ಬಿದ್ದಿದ್ದಾರೆ. ಇದರಿಂದ ಭಯಗೊಂಡ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. 

ಪ್ರತ್ಯೇಕ ಪ್ರಕ​ರ​ಣ: ಮಾದಕ ವಸ್ತು ಮಾರಾಟಕ್ಕೆ ಯತ್ನ, ನಾಲ್ವರ ಬಂಧ​ನ

ಆಂಧ್ರ ಹಾಗೂ ತಮಿಳುನಾಡು ರಾಜ್ಯಗಳಿಂದ ಇಲ್ಲಿಗೆ ಗಾಂಜಾ ಸರಬರಾಜು ಮಾಡುತ್ತಿದ್ದು, ಸದ್ಯ ಆಂಡರ್ಸನ್ ಪೇಟೆ ಪೊಲೀಸರು ಕಿಡಿಗೇಡಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. 

ಕೆಜಿಎಫ್ ತಾಲೂಕಿನ ಹೆಚ್ಚಿನ ಗಾಂಜಾ ಮಾರಾಟ ಜಾಲ ಹೆಚ್ಚಾಗಿಯೇ ಇದ್ದು, ಕೆಲ ದಿನಗಳ ಹಿಂದೆ ನಿಲ್ಲಿಸಿದ್ದು ಇದೀಗ ಮತ್ತೆ ತಮ್ಮ ಕುಕೃತ್ಯ ಆರಂಭ ಮಾಡಿದ್ದಾರೆ. ಇದರಿಂದ ಇಲ್ಲಿನ ಗಾಂಜಾ ಸೇವಿಸಿ ಹುಚ್ಚಾಟ ಮಾಡುವುದು ಮತ್ತೆ ಹೆಚ್ಚಾಗುತ್ತಿದೆ. 

Latest Videos
Follow Us:
Download App:
  • android
  • ios