ಬೆಂಗಳೂರು [ಜ.31]:  ಉದ್ಯಮಿ ಮೊಬೈಲ್ ನಿಂದ ಸುಂದರ ಯುವತಿಯರಿಗೆ ಅಶ್ಲೀಲ ಮೇಸೆಜ್ ಮಾಡುತ್ತಿದ್ದ ಕ್ಯಾಬ್ ಚಾಲಕನೀಗ ಪೊಲೀಸರ ಅತಿಥಿಯಾಗಿದ್ದಾನೆ. 

ಐ ಮಿಸ್ ಯೂ, ಐ ಲವ್ ಯೂ, ಯಾವಾಗ ಫ್ರೀ ಇರ್ತಿಯಾ...? ಎಂದು ಯುವತಿಯರಿಗೆ ಸಂದೇಶ ಕಳುಹಿಸುತ್ತಿದ್ದ. ಈ ನಿಟ್ಟಿನಲ್ಲಿ  ದಾಖಲಾದ ದೂರನ್ನು ಆಧಾರದಲ್ಲಿ ಚಾಲಕ ಮಿಥುನ್ ಕುಮಾರ್ ಎಂಬಾತನನ್ನು ಅಮೃತಹಳ್ಳಿ ಪೊಲೀಸರು ಬಂಧಿಸಿದ್ದಾರೆ. 

ಕಳೆದ ಜನವರಿ 16 ರಂದು ಹೆಬ್ಬಾಳ ಕೆಂಪಾಪುರ ಬಳಿ ಉದ್ಯಮಿ ಮತ್ತು ಕ್ಯಾಬ್ ಚಾಲಕನಿಗೆ ಸಣ್ಣ ಆಕ್ಸಿಡೆಂಟ್ ಆಗಿತ್ತು. ಈ ವೇಳೆ ಉದ್ಯಮಿ ಮೊಬೈಲ್ ಕಸಿದುಕೊಂಡು ಚಾಲಕ ಮಿಥುನ್ ಕುಮಾರ್ ಎಸ್ಕೇಪ್ ಆಗಿದ್ದ.  ಅಲ್ಲದೇ ಮೊಬೈಲ್ ಕೇಳಿದ್ದಕ್ಕೆ ಇಂದು ನಾಳೆ ಎಂದು ಹೇಳಿಕೊಂಡು ದಿನ ದೂಡುತ್ತಿದ್ದ.

ಬಾಲಕಿಯ ತೊಡೆಯನ್ನೇ ಸುಟ್ಟ ತಾಯಿ, ಪುಟ್ಟ ಕಂದಮ್ಮನ ಮೇಲೆ ರಾಕ್ಷಸಿ ಕೃತ್ಯ...

ಉದ್ಯಮಿ ಮೊಬೈಲ್ ನಲ್ಲಿ ಸೇವ್ ಆಗಿದ್ದ ಸುಂದರ ಯುವತಿಯರಿಗೆಲ್ಲಾ ಮೇಸೆಜ್ ಮಾಡಿ ಕಿರುಕುಳ ನೀಡುತ್ತಿದ್ದ. ನೊಂದ ಯುವತಿಯರು ಉದ್ಯಮಿಗೆ ಕ್ಲಾಸ್ ತೆಗೆದುಕೊಂಡಿದ್ದು,  ಬಳಿಕ ಎಚ್ಚೆತ್ತಕೊಂಡ ಉದ್ಯಮಿ ದೂರು ದಾಖಲಿಸಿದ್ದರು. ಉದ್ಯಮಿ ನೀಡಿದ ದೂರಿನ ಆಧಾರದಲ್ಲಿ FIR ದಾಖಲಾಗಿದ್ದು, ಬಳಿಕ ಕ್ಯಾಬ್ ಚಾಲಕ ಮಿಥುನ್  ಪತ್ತೆ ಹಚ್ಚಿ ಬಂಧಿಸಲಾಗಿದೆ.