ಅಳಿವಿನಂಚಿನ ಕೃಷಿಯತ್ತ ಮತ್ತೆ ಚಿತ್ತ; ಇದು ದೇವರ ಪ್ರೇರಣೆ-ಬ್ರಹ್ಮಾನಂದ ಸರಸ್ವತಿ
ಕೃಷಿಯ ಒಲವೇ ಇರದ ಯುವ ಸಮುದಾಯವನ್ನು ಗದ್ದೆಗೆ ಇಳಿಸಿ ಕೃಷಿಯ ಆಸಕ್ತಿ ಹುಟ್ಟುವಂತೆ ಮಾಡಿ, ರಾಸಾಯನಿಕ ರಹಿತ ವಿಷಮುಕ್ತ ಶುದ್ಧ ಆಹಾರವನ್ನು ಬೆಳೆಯುವ ಸಂದೇಶವನ್ನು ಸಾರಿದ ರಘುಪತಿ ಭಟ್ ಅವರು ಅಳಿವಿನಂಚಿಗೆ ಸಾಗುತ್ತಿದ್ದ ಕೃಷಿಯತ್ತ ಎಲ್ಲರೂ ಮತ್ತೆ ಚಿತ್ತ ಹರಿಸಿ ಕೃಷಿಯಲ್ಲಿ ತೊಡಗುವಂತೆ ಮಾಡಿದರು. ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಉಡುಪಿ ಡಿ.19 : ಕೃಷಿಯ ಒಲವೇ ಇರದ ಯುವ ಸಮುದಾಯವನ್ನು ಗದ್ದೆಗೆ ಇಳಿಸಿ ಕೃಷಿಯ ಆಸಕ್ತಿ ಹುಟ್ಟುವಂತೆ ಮಾಡಿ, ರಾಸಾಯನಿಕ ರಹಿತ ವಿಷಮುಕ್ತ ಶುದ್ಧ ಆಹಾರವನ್ನು ಬೆಳೆಯುವ ಸಂದೇಶವನ್ನು ಸಾರಿದ ರಘುಪತಿ ಭಟ್ ಅವರು ಅಳಿವಿನಂಚಿಗೆ ಸಾಗುತ್ತಿದ್ದ ಕೃಷಿಯತ್ತ ಎಲ್ಲರೂ ಮತ್ತೆ ಚಿತ್ತ ಹರಿಸಿ ಕೃಷಿಯಲ್ಲಿ ತೊಡಗುವಂತೆ ಮಾಡಿದರು. ಅವರಿಗೆ ಈ ಕ್ರಾಂತಿಕಾರಿ ಕೆಲಸ ಮಾಡಲು ದೇವರ ಪ್ರೇರಣೆಯಾಗಿದೆ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.
ಪುಣೆಯ ಬಂಟರ ಭವನದಲ್ಲಿ ನಡೆದ "ಉಡುಪಿ ಕೇದಾರ ಕಜೆ" ಕುಚ್ಚಲಕ್ಕಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಕೇದಾರೋತ್ಥಾನ ಟ್ರಸ್ಟ್ ಮೂಲಕ ಕೃಷಿ ಕ್ರಾಂತಿ ಮಾಡಿ ಯುವ ಸಮುದಾಯವನ್ನು ಕೃಷಿಯತ್ತ ಸೆಳೆದ ರಘುಪತಿ ಭಟ್ ಅವರು ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ನಮ್ಮ ಪೌರಾಣಿಕ ಪರಂಪರೆಯನ್ನು ಎಳವೆಯಲ್ಲಿಯೇ ಬೆಳೆಸುವ ಮಹತ್ತರ ಕಾರ್ಯ ಮಾಡಿದ್ದಾರೆ. ಎಲ್ಲಾ ಸಮುದಾಯಗಳನ್ನು ಜೊತೆಗೂಡಿಸಿ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಿ ಯಶಸ್ವಿಗೊಳಿಸಿದ್ದಾರೆ ಎಂದರು.
Udupi: ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯಿಂದ ತೊಂದರೆ, ರಸ್ತೆ ಬಂದ್ ಮಾಡಿ ಸ್ಥಳೀಯರ ಆಕ್ರೋಶ
ಶಾಸಕ ರಘುಪತಿ ಭಟ್ ಅವರು ಮಾತನಾಡಿ ಉಡುಪಿ ಜಿಲ್ಲೆಯ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ "ಉಡುಪಿ ಕೇದಾರ ಕಜೆ" ಕುಚ್ಚಲಕ್ಕಿಯನ್ನು ನಮ್ಮ ಊರಿನ ಬಂಧುಗಳು ಇರುವ ಎಲ್ಲಾ ಊರುಗಳಲ್ಲಿ ಬಿಡುಗಡೆ ಮಾಡುತ್ತಿದ್ದೇವೆ. ನಮ್ಮ ಊರಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿಗಳು ಹಡಿಲು ಬಿದ್ದಿದೆ. ಕಾರ್ಮಿಕರ ಕೊರತೆ ಹಾಗೂ ಉತ್ಪಾದನೆಗಿಂತ ಹೆಚ್ಚಾಗುತ್ತಿರುವ ಖರ್ಚಿನಿಂದಾಗಿ ಜನ ಕೃಷಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ರೈತರಿಗೆ ನೆರವಾಗಿ ಅವರವರ ಭೂಮಿಯನ್ನು ಅವರೇ ಸಾವಯವ ಕೃಷಿ ಮಾಡುವಂತೆ ಪ್ರೇರೇಪಿಸಿ ಅವರು ಬೆಳೆದ ಭತ್ತವನ್ನು ಉತ್ತಮ ಬೆಳೆಗೆ ಖರೀದಿಸಲು "ಕೇದಾರೋತ್ಥಾನ ರೈತ ಉತ್ಪಾದಕರ ಕಂಪನಿ" ಆರಂಭಿಸಲಾಗಿದೆ.
ಈ ಕಂಪನಿ ಮೂಲಕ ರೈತರಿಂದ ಭತ್ತವನ್ನು ಉತ್ತಮ ಬೆಲೆಗೆ ಖರೀದಿಸಲಾಗುವುದು. ಈ ಮೂಲಕ ಹೆಚ್ಚು ಹೆಚ್ಚು ಕೃಷಿ ಮಾಡುವಂತೆ ಪ್ರೇರೇಪಿಸಿ ಉಡುಪಿಯನ್ನು ಹಡಿಲು ಕೃಷಿ ಭೂಮಿ ಮುಕ್ತ ಉಡುಪಿ ಮಾಡುವ ಉದ್ದೇಶವಿದೆ. ನಮ್ಮ ಪಾರಂಪರಿಕ ಕೃಷಿ ಪದ್ಧತಿಯನ್ನು ಮುಂದುವರಿಸಲು ರೈತರನ್ನು ಪ್ರೋತ್ಸಾಹಿಸಲು ಈ "ಉಡುಪಿ ಕೇದಾರ ಕಜೆ" ಕುಚ್ಚಲಕ್ಕಿಯನ್ನು ಎಲ್ಲರು ಖರೀದಿಸುವಂತೆ ಮನವಿ ಮಾಡಿದ ಅವರು ಊರಿನಲ್ಲಿ ನಿಮ್ಮ ಕೃಷಿ ಭೂಮಿಗಳು ಹಡಿಲು ಬಿಟ್ಟಿದ್ದರೆ ಮುಂದಿನ ಬಾರಿ ನೀವು ಊರಿಗೆ ಬಂದು ನಮ್ಮೊಂದಿಗೆ ಕೈಜೋಡಿಸಿ ಕೃಷಿ ಮಾಡಿ. ಯಾವುದೇ ಕಾರಣಕ್ಕೂ ಕೃಷಿ ಭೂಮಿ ಹಡಿಲು ಬೀಳದಂತೆ ನೋಡಿ ಎಂದರು.
ಈ ಸಂದರ್ಭದಲ್ಲಿ ಪುಣೆಯ ಸಮಸ್ತರ ಪರವಾಗಿ ಶಾಸಕ ಶ್ರೀ ಕೆ. ರಘುಪತಿ ಭಟ್ ಅವರನ್ನು ಅಭಿನಂದಿಸಲಾಯಿತು.ಕನ್ಯಾಡಿ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಸದ್ಗುರು ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು ಗಣ್ಯರಿಗೆ ಸಾಂಕೇತಿಕವಾಗಿ "ಉಡುಪಿ ಕೇದಾರ ಕಜೆ" ಕುಚ್ಚಲಕ್ಕಿ ನೀಡುವ ಮೂಲಕ ಪುಣೆ ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುಣೆ ಬಂಟರ ಸಂಘದ ಅಧ್ಯಕ್ಷರಾದ ಇನ್ನ ಕುರ್ಕಿಲಬೆಟ್ಟು ಬಾಳಿಕೆ ಸಂತೋಷ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.ಪುಣೆ ಕನ್ನಡ ಸಂಘದ ಅಧ್ಯಕ್ಷರು, ಪುಣೆ ಬಂಟರ ಸಂಘದ ವಿಶ್ವಸ್ಥರಾದ ಕುಶಲ್ ಹೆಗ್ಡೆ, ಪುಣೆಯ ಖ್ಯಾತ ಅತೋಪೆಡಿಕ್ ಸರ್ಜನ್ ಡಾll ಉಮೇಶ್ ನಗರೆ, ಹೋಟೆಲ್ ಶೀತಲ್ ವೆಜ್ ಕೊತ್ತುದ್ ಪುಣೆ, ಬಂಟರ ಸಂಘ ಪುಣೆಯ ವಿಶ್ವಸ್ಥರಾದ ವಿಶ್ವನಾಥ್ ಶೆಟ್ಟಿ, ಬಯೋರಾಡ್ ಮೆಡಿಸಿಸ್ ಪ್ರ್ರೈ. ಲಿಮಿಟೆಡ್ ಪುಣೆಯ ವ್ಯವಸ್ಥಾಪಕ ನಿರ್ದೇಶಕರು ಪುಣೆ ಬಂಟರ ಸಂಘದ ವಿಶ್ವಸ್ಥರಾದ ಜಿತೇಂದ್ರ ಹೆಗ್ಡೆ, ಪುಣೆ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರು ಪುಣೆ ಸಮಿತಿಯ ಉಪಾಧ್ಯಕ್ಷರಾದ ವಿಶ್ವನಾಥ ಪೂಜಾರಿ, ಪುಣೆ ಬಂಟರ ಸಂಘದ ಉಪಾಧ್ಯಕ್ಷರು ಪುಣೆ ಸಮಿತಿಯ ಮುಖ್ಯ ಸಂಯೋಜಕರಾದ ಪ್ರವೀಣ್ ಶೆಟ್ಟಿ ಪುತ್ತೂರು ಹಾಗೂ ವಿವಿಧ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
Udupi: ಚಂಡಮಾರುತ ಎಫೆಕ್ಟ್: ಮಟ್ಟು ಗುಳ್ಳ ಮಣ್ಣು ಪಾಲು
ಖಾಲಿ ಬಿಟ್ಟಿದ್ದ ಕೃಷಿ ಭೂಮಿಯಲ್ಲಿ ಭತ್ತ ಬೆಳೆಯುವ ಅಪರೂಪದ ಅಭಿಯಾನವನ್ನು ಕಳೆದ ಬಾರಿ ಕೋವಿಡ್ ಸಂದರ್ಭದಲ್ಲಿ ಪ್ರಾರಂಭಿಸಲಾಗಿತ್ತು. ಕೇದಾರ ಕಜೆ ಎನ್ನುವ ಅಪರೂಪದ ಕುಚ್ಚಲಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿ ರೈತರಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮದ ಬಗ್ಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.