ನಿಡಗುಂದಿ(ಫೆ.01): ಪೊಲೀಸ್‌ ಪೇದೆ ಪರೀಕ್ಷೆ ಬರೆಯಲು ವಯೋಮಿತಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಯುವಕನೊಬ್ಬ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿದ್ದಾನೆ. 

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಯಲ್ಲಮ್ಮನ ಬೂದಿಹಾಳ ಗ್ರಾಮದ ಯುವಕ ವಿದ್ಯಾಧರ ಬಡಿಗೇರ ಈ ರೀತಿ ಪತ್ರ ಬರೆದವರು. ರಕ್ತದ ಪತ್ರಗಳನ್ನು ಫೇಸ್‌ಬುಕ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಕಾಂಗ್ರೆಸ್‌ ನೆರಳಿನಲ್ಲಿರುವ ಸಿದ್ದು, ಸ್ವಂತ ಪಕ್ಷ ಕಟ್ಟಿ ಚುನಾವಣೆ ನಡೆಸಲಿ: ಹೆಚ್‌ಡಿಕೆ

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು 2019ರಲ್ಲಿ ಪೊಲೀಸ್‌ ಪೇದೆ ಪರೀಕ್ಷೆ ಬರೆದಿದ್ದು ವಿಫಲರಾಗಿದ್ದರು. ಕಳೆದ ವಷ ಕೊರೋನಾ ಹಿನ್ನಲೆ ಪರೀಕ್ಷೆ ನಡೆದಿಲ್ಲ. ಹೀಗಾಗಿ ನೆರೆ ರಾಜ್ಯದ ಮಾದರಿಯಲ್ಲಿ ನಮ್ಮಲ್ಲಿಯೂ ವಯೋಮಿತಿ ಹೆಚ್ಚಳ ಮಾಡಿ ವಿದ್ಯಾವಂತ ಯುವಕರ ನೆರವಿಗೆ ಸರ್ಕಾರ ಬರುವಂತೆ ವಿದ್ಯಾಧರ ಬಡಿಗೇರ ಒತ್ತಾಯಿಸಿದ್ದಾರೆ. ರಕ್ತದಲ್ಲಿ ಬರೆದ ಮನವಿ ಪತ್ರಗಳನ್ನು ಸೋಮವಾರ ಅವರು ಬೆಂಗಳೂರಲ್ಲಿ ಸಿಎಂ ಹಾಗೂ ಗೃಹ ಸಚಿವರಿಗೆ ನೀಡಲಿದ್ದಾರೆ.