ಬೀದರ್(ಜ.16): ಸಂಕ್ರಾಂತಿ ಹಬ್ಬದ ನಿಮಿತ್ತ ಗಾಳಿಪಟ ಹಾರಿಸುವ ವೇಳೆ ಪಟದ ದಾರದಿಂದ ಯುವಕನೊಬ್ಬ ಗಾಯಗೊಂಡ ಘಟನೆ ಜಿಲ್ಲೆಯ ಹುಮನಾಬಾದ್‌ ನಗರದಲ್ಲಿ ಇಂದು(ಗುರುವಾರ) ನಡೆದಿದೆ.  

ಶೇಖ್ ಇಜಾಜ್ ಶೇಖ ಅಲಿ ಎಂಬಾತನೇ ಗಾಯಗೊಂಡ ಯುವಕನಾಗಿದ್ದಾನೆ. ಬೈಕ್ ಮೇಲೆ ಹೋಗುತ್ತಿದ್ದ ವೇಳೆ ‌ಶೇಖ್ ಇಜಾಜ್ ಶೇಖ ಅಲಿ ಕತ್ತಿಗೆ ಗಾಳಿ ಪಟ ಹಾರಿಸುವ ದಾರ ಸಿಲುಕಿ ಕತ್ತು ಸೀಳಿದೆ. ಕಂಬ-ತಂತಿಗೆ ಗಾಳಿಪಟದ ದಾರ ಸಿಲುಕಿತ್ತು.  ದಾರ ‌ಶೇಖ್ ಇಜಾಜ್ ಶೇಖ ಅಲಿ ಅವರಿಗೆ ಕಾಣದಿದ್ದರಿಂದ ಬೈಕ್ ಚಲಾಯಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಈ ವೇಳೆ ಗಾಳಿ ಪಟ ಹಾರಿಸುವ ದಾರ ‌ಶೇಖ್ ಇಜಾಜ್ ಶೇಖ ಅಲಿ ಅವರ ಕತ್ತು ಸೀಳಿ ಗಾಯಗೊಳಿಸಿದೆ.