ನೆಲಮಂಗಲ(ಮಾ.07): ಬೆಂಕಿಯಿಂದ ಹಸುವನ್ನು ರಕ್ಷಿಸಲು ಹೋದ ಯುವಕನೋರ್ವ ಮೃತಪಟ್ಟ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಹೋಬಳಿಯ ತಾವರೇಕೆರೆ ಗ್ರಾಮದಲ್ಲಿ ನಿನ್ನೆ ರಾತ್ರಿ(ಶನಿವಾರ) ನಡೆದಿದೆ. ಲೋಕೇಶ್ ಎಂಬಾತನೇ ಹಸು ರಕ್ಷಿಸಲು ಹೋಗಿ ಪ್ರಾಣ ಕಳೆದುಕೊಂಡ ದುರ್ದೈವಿ.

ಮನೆಯ ನೀರು ಕಾಯಿಸುವ ಒಲೆಯಿಂದ ವ್ಯಾಪಿಸಿದ ಅಗ್ನಿ ಗೋವುಗಳಿದ್ದ ಕೊಟ್ಟಿಗೆಗೆ ಆವರಸಿಕೊಂಡಿತ್ತು. ಈ ವೇಳೆ ಹಸುವನ್ನು ಉಳಿಸಲು ಹೋದ ಗೋಪಾಲಕ ಲೋಕೇಶ್‌ಗೆ ಬೆಂಕಿ ತಗುಲಿದೆ. ಹೀಗಾಗಿ ಲೋಕೇಶ್ ಶೇ. 90 ರಷ್ಟು ಸುಟ್ಟು ಹೋಗಿದ್ದ, ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಲೋಕೇಶ್‌ ಕೊನೆಯುಸಿರೆಳೆದಿದ್ದಾರೆ. 

ಬೆಳ್ಳಂದೂರು ಕೆರೆಯಲ್ಲಿದ್ದ ಕಸದ ರಾಶಿಗೆ ಬೆಂಕಿ: ಆತಂಕ

ಘಟನೆಯಲ್ಲಿ ನಾಲ್ಕು ಹಸುಗಳಿಗೆ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ತ್ಯಾಮಗೊಂಡ್ಲು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.