ಸಕಲೇಶಪುರ(ಡಿ.26): ಕಾಲು ಜಾರಿ ಕೆರೆಗೆ ಬಿದ್ದು ದತ್ತ ಮಾಲಾಧಾರಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಗಾಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸುಮನ್‌(23) ಸಾವಿಗೀಡಾದ ಯುವಕ.

ಗುರುವಾರ ಸಂಜೆ ವೇಳೆ ಗುರುಪೂಜೆಗೆಂದು ಸ್ನಾನಕ್ಕೆ ಹೋಗಿದ್ದ ಯುವಕ ಕಾಲುಜಾರಿ ಬಿದ್ದು ಸಾವನ್ನಪ್ಪಿದ್ದಾನೆ. ಕೆರೆಯಲ್ಲಿ ಮುಳುಗಿರುವ ಶವನ್ನು ಮೇಲೆತ್ತಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಟ್ಟರು.

'ದೇವೇಗೌಡ ಇರೋವರೆಗೂ ಬಿಜೆಪಿ ಜತೆಗೆ ವಿಲೀನ ಮಾತೇ ಇಲ್ಲ'

ಈ ತಿಂಗಳ 29ಕ್ಕೆ ದತ್ತಪೀಠಕ್ಕೆ ತೆರಳಿ ಪಾದುಕೆ ದರ್ಶನ ಮಾಡಬೇಕಿದ್ದ ಯುವಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.