ಹಾಸನ(ಡಿ.22): ಬಿಜೆಪಿ ಜತೆಗೆ ಜೆಡಿಎಸ್‌ ವಿಲೀನವಾಗಲಿದೆ ಎಂಬುದೆಲ್ಲ ಸುಳ್ಳು. ಬಿಜೆಪಿ, ಕಾಂಗ್ರೆಸ್‌ಗೆ ಜೆಡಿಎಸ್ಮುಗಿಸುವುದೊಂದೇ ಗುರಿ. ಇದೇ ಕಾರಣಕ್ಕೆ ಈ ರೀತಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದ್ದಾರೆ. 

ಬಿಜೆಪಿ ಜತೆಗೆ ಜೆಡಿಎಸ್‌ ಯಾವುದೇ ಕಾರಣಕ್ಕೂ ವಿಲೀನ ಆಗುವುದಿಲ್ಲ. ದೇವೇಗೌಡರು ಇರುವವರೆಗೂ ಈ ರೀತಿ ವಿಲೀನದ ಮಾತೇ ಇಲ್ಲ. ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ರೀತಿ ಅಪಪ್ರಚಾರ ಮಾಡುವುದು ಶೋಭೆ ತರುವುದಿಲ್ಲ’ ಎಂದು ಕಿಡಿಕಾರಿದ್ದಾರೆ. ಜತೆಗೆ, ಅರವಿಂದ ಲಿಂಬಾವಳಿ ವಿಲೀನಕ್ಕೆ ಸಂಬಂಧಿಸಿ ಹೇಳಿಕೆ ನೀಡಿರುವುದು ಸರಿಯಲ್ಲ. ಇದಕ್ಕಾಗಿ ಅವರು ಶೀಘ್ರ ರಾಜ್ಯದ ಜನರ ಕ್ಷಮೆ ಕೋರಬೇಕು ಎಂದಿದ್ದಾರೆ.

'ಬಿಜೆಪಿಯೊಂದಿಗೆ ಜೆಡಿಎಸ್‌ ಹೊಂದಾಣಿಕೆ ಮಾಡಿಕೊಂಡ್ರೆ ರಾಜಕೀಯ ನಿವೃತ್ತಿ'

ಸಂಕ್ರಾಂತಿ ಕಳೆಯಲಿ ಪಕ್ಷ ಸಂಘಟನೆ ಮಾಡುತ್ತೇವೆ. ನಮ್ಮ ಪಕ್ಷದಲ್ಲಿ ಯಾರೂ ಉಳಿಯುತ್ತಾರೋ ಅವರೊಂದಿಗೆ ಸೇರಿ ಪಕ್ಷ ಸಂಘಟನೆ ಮಾಡುತ್ತೇನೆ. ಜೆಡಿಎಸ್ಪಕ್ಷ ಬೇರೆ ಪಕ್ಷದೊಂದಿಗೆ ವಿಲೀನದಾದರೆ ಅಂದೇ ನಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ. ದೇವೇಗೌಡರ ಕಣ್ಣ ಎದುರೇ ಪಕ್ಷವನ್ನು ಮತ್ತೆ ಅಧಿ​ಕಾರಕ್ಕೆ ತರುತ್ತೇನೆ ಎಂದು ರೇವಣ್ಣ ಪಣ ತೊಟ್ಟರು.