ಚಿಕ್ಕಮಗಳೂರು: ಪಟಾಕಿಯಕಿಡಿ ಹೊತ್ತಿ ಏಕಾಏಕಿ ಸಿಡಿದ ಆಟಂ ಬಾಂಬ್, ಯುವಕ ಸಾವು
ಮಕ್ಕಳ ಕೈಗೆ ಆಟಂ ಬಾಂಬ್ ಪಟಾಕಿ ಬಾಕ್ಸ್ ಸಿಗಬಾರದು ಅಂತ ಕುರ್ಚಿಯ ಕೆಳಗೆ ಇಟ್ಟು ಅದೇ ಕುರ್ಚಿಯ ಮೇಲೆ ಕೂತಿದ್ದ, ಮಕ್ಕಳು ಹಾಗೂ ಸ್ನೇಹಿತರ ಜೊತೆ ಆಟವಾಡ್ತಾ ಸಣ್ಣ ಪುಟ್ಟ ಪಟಾಕಿ ಹೊಡೆಯುತ್ತಿದ್ದ, ಇದೇ ವೇಳೆ ಆ ಪಟಾಕಿಯ ಕಿಡಿ ಬಾಕ್ಸ್ ಮೇಲೆ ಬಿದ್ದು ಆಟಂ ಬಾಂಬ್ ಏಕಾಏಕಿ ಸಿಡಿದು ಐದು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದಾನೆ. ಪಟಾಕಿ ಜ್ವಾಲೆಯ ರಭಸಕ್ಕೆ ನೋಡ ನೋಡ್ತಿದಂತೆ ಏನಾಗುತ್ತಿದೆ ಅನ್ನುವಷ್ಟರಲ್ಲಿ ಯುವಕ ಪ್ರದೀಪ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ನ.15): ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಸುಣ್ಣದ ಹಳ್ಳಿ ಗ್ರಾಮದಲ್ಲಿ ಪಟಾಕಿ ಸಿಡಿತಕ್ಕೆ 34 ವರ್ಷದ ಯುವಕ ಪ್ರದೀಪ್ ಬಲಿಯಾಗಿದ್ದಾನೆ. ಮತ್ತೋರ್ವ ಯುವಕನಿಗೂ ಗಂಭೀರ ಗಾಯವಾಗಿದ್ದು, ಮೂವರು ಮಕ್ಕಳು ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಬಚಾವ್ ಆಗಿದ್ದಾರೆ. ಅಷ್ಟಕ್ಕೂ ಈ ಘಟನೆ ಸಂಭವಿಸಿದ್ದಾದ್ರು ಹೇಗೆ ಅನ್ನೋದನ್ನ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.
ಮಕ್ಕಳ ಕೈಗೆ ಆಟಂ ಬಾಂಬ್ ಪಟಾಕಿ ಬಾಕ್ಸ್ ಸಿಗಬಾರದು ಅಂತ ಕುರ್ಚಿಯ ಕೆಳಗೆ ಇಟ್ಟು ಅದೇ ಕುರ್ಚಿಯ ಮೇಲೆ ಕೂತಿದ್ದ, ಮಕ್ಕಳು ಹಾಗೂ ಸ್ನೇಹಿತರ ಜೊತೆ ಆಟವಾಡ್ತಾ ಸಣ್ಣ ಪುಟ್ಟ ಪಟಾಕಿ ಹೊಡೆಯುತ್ತಿದ್ದ, ಇದೇ ವೇಳೆ ಆ ಪಟಾಕಿಯ ಕಿಡಿ ಬಾಕ್ಸ್ ಮೇಲೆ ಬಿದ್ದು ಆಟಂ ಬಾಂಬ್ ಏಕಾಏಕಿ ಸಿಡಿದು ಐದು ಅಡಿ ಮೇಲಕ್ಕೆ ಹಾರಿ ಬಿದ್ದಿದ್ದಾನೆ. ಪಟಾಕಿ ಜ್ವಾಲೆಯ ರಭಸಕ್ಕೆ ನೋಡ ನೋಡ್ತಿದಂತೆ ಏನಾಗುತ್ತಿದೆ ಅನ್ನುವಷ್ಟರಲ್ಲಿ ಯುವಕ ಪ್ರದೀಪ್ ಪ್ರಾಣ ಪಕ್ಷಿ ಹಾರಿ ಹೋಗಿದೆ.
ಮಲೆನಾಡಿನಲ್ಲಿ ಇಬ್ಬರನ್ನು ಬಲಿ ಪಡೆದ ಒಂಟಿ ಸಲಗ: ಸೆರೆ ಹಿಡಿಯಲು ಹರಸಾಹಸ ಪಡುತ್ತಿರುವ ಅರಣ್ಯ ಇಲಾಖೆ!
ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ :
ಇನ್ನು ಈ ಘಟನೆಯಲ್ಲಿ ಮೃತ ಯುವಕನ ಸೂಕ್ಷ್ಮ ಅಂಗಾಂಗಗಳಿಗೆ ತೀವ್ರ ಗಾಯವಾಗಿದ್ದು ಸಾವನ್ನಪ್ಪಿದ್ರೆ, ತಾತನ ಮನೆಗೆ ದೀಪಾವಳಿ ಆಚರಿಸಲು ಬಂದಿದ್ದ ಮತ್ತೋರ್ವ ಯುವಕ ದರ್ಶನ್, ಕಾಲಿಗೆ ಗಂಭೀರ ಗಾಯವಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಪಟಾಕಿ ಸಿಡಿತದ ವೇಳೆ ಪಕ್ಕದಲ್ಲೇ ಆಟವಾಡುತ್ತಿದ್ದ ಇಬ್ಬರು ಮಕ್ಕಳಿಗೂ ಸಣ್ಣಪುಟ್ಟ ಗಾಯವಾಗಿದ್ದು, ತರೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಒಟ್ಟಾರೆ ರಾಜ್ಯದಲ್ಲಿ ಪಟಾಕಿ ಅನಾಹುತಕ್ಕೆ ಸಾಲು ಸಾಲು ದುರಂತಗಳು ಸಂಭವಿಸುತ್ತಿದ್ದು, ಬಾಳಿ ಬದುಕಬೇಕಾಗಿದ್ದ ಯುವಕ ಪ್ರದೀಪ್ ಪಟಾಕಿ ಸಿಡಿತಕ್ಕೆ ಬಲಿಯಾಗಿದ್ದು ನಿಜಕ್ಕೂ ದುರಂತ..!.
ಇನ್ನಾದ್ರೂ ಪಟಾಕಿ ಸಿಡಿಸುವ ವೇಳೆ ಎಚ್ಚರಿಕೆ ವಹಿಸದಿದ್ದರೆ ಅನಾಹುತ ಕಟ್ಟಿಟ್ಟ ಬುತ್ತಿ. ಪ್ರತಿಯೊಬ್ಬರಿಗೂ ಈ ಘಟನೆ ಪಾಠವಾಗದಿದ್ದರೆ ಇನ್ನಷ್ಟು ಬಲಿ ಆಗೋದ್ರಲ್ಲಿ ನೋ ಡೌಟ್..