Asianet Suvarna News Asianet Suvarna News

ಕೊಪ್ಪಳ: ಅನಾರೋಗ್ಯಕ್ಕೆ ಯುವಕ ಬಲಿ, ಡೆಂಗ್ಯೂ ಶಂಕೆ

*   ಕೊಪ್ಪಳ ಜಿಲ್ಲೆಯ ಕನಕಗಿರಿ ಪಟ್ಟಣದಲ್ಲಿ ನಡೆದ ಘಟನೆ
*   ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮೃತ ಯುವಕ
*   ಚಿಕಿತ್ಸೆ ಫಲಿಸದೆ ಸಾವು 

Young Man Dies Due to Illness at Kanakagiri in Koppal grg
Author
Bengaluru, First Published Sep 20, 2021, 11:25 AM IST
  • Facebook
  • Twitter
  • Whatsapp

ಕನಕಗಿರಿ(ಸೆ.20):  ಅನಾರೋಗ್ಯಕ್ಕೆ ತುತ್ತಾಗಿ ಪಟ್ಟಣದ ಯುವಕನೋರ್ವ ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.

ಕಿರಣ್‌ ಹನುಮಂತಪ್ಪ ತಾವರಗೇರಿ (18) ಮೃತ ಯುವಕ. ಸೆ. 15ರಂದು ಕೊಪ್ಪಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಆರೋಗ್ಯವಾಗಿದ್ದ ಕಿರಣ್‌ ಅವರಿಗೆ ಮರುದಿನ ಮತ್ತೆ ಆರೋಗ್ಯ ಸಮಸ್ಯೆಯಾಗಿದ್ದು, ಶನಿವಾರ ಹುಬ್ಬಳ್ಳಿಯ ಎಸ್‌ಡಿಎಂ ಆಸ್ಪತ್ರೆಗೆ ಚಿಕಿತ್ಸೆಗೆಂದು ಹೋಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಯುವಕ ಮೃತಪಟ್ಟಿದ್ದಾನೆ. 

ಡೆಂಗ್ಯೂ : ಈ ರೋಗಲಕ್ಷಣ ಕಾಣಿಸಿಕೊಂಡ್ರೆ ಎಚ್ಚರ

ಡೆಂಗ್ಯೂ ಜ್ವರ ಹಿನ್ನೆಲೆಯಲ್ಲಿ ಎಸ್‌ಡಿಎಂ ಆಸ್ಪತ್ರೆಗೆ ಹೋಗಿದ್ದೆವು. ಚಿಕಿತ್ಸೆ ಫಲಿಸದೆ ನಮ್ಮ ಮಗ ಮರಣ ಹೊಂದಿದ್ದಾನೆ ಎಂದು ಮೃತ ಕಿರಣ್‌ ಕುಟುಂಬಸ್ಥರು ತಿಳಿಸಿದ್ದಾರೆ.
 

Follow Us:
Download App:
  • android
  • ios