ವಿಜಯಪುರ(ಏ.27): ಕೋವಿಡ್‌-19 ಸೋಂಕಿತ ಭಾವಚಿತ್ರ ಹಾಗೂ ವ್ಯಕ್ತಿ ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಬಾರದೆಂಬ ಸರ್ಕಾರದ ಆದೇಶ ಉಲ್ಲಂಘಿಸಿ ವಿಜಯಪುರದ ಕೊರೋನಾ ಸೋಂಕಿತ ವೈದ್ಯಕೀಯ ವಿದ್ಯಾರ್ಥಿನಿಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನೊಬ್ಬ ಪೊಲೀಸರ ಅಥಿತಿಯಾಗಿದ್ದಾನೆ.

ವಿಜಯಪುರ ತಾಲೂಕಿನ ಮಕಣಾಪುರ ತಾಂಡಾ ನಂ.2ರ ನಿವಾಸಿ ಅನಿಲ ಬಾಬು ರಾಠೋಡ (24) ಬಂಧಿತ ಆರೋಪಿ. ಆರೋಪಿ ಕೊರೋನಾ ಸೋಂಕಿತ ವೈದ್ಯಕೀಯ ವಿದ್ಯಾರ್ಥಿನಿ ಗೆಳತಿಯರೊಂದಿಗೆ ತೆಗೆದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು, ಹಾಗೇ ಆರೋಪಿ ತನ್ನ ವಾಟ್ಸಾಪ್‌ ಸ್ಟೇಟಸ್‌ ಇಟ್ಟಿದ್ದ.

ಪೊಲೀಸರ ಒಳ್ಳೆ ಕೆಲಸ ನೋಡಿ , ಹಸುಗಳ ಹೊಟ್ಟೆ ತುಂಬಿಸಿದ ಕಲ್ಲಂಗಡಿ

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯಪುರ ಜಿಲ್ಲಾ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ನಂತರ ನ್ಯಾಯಾಂಗ ವಶಕ್ಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.