ದಾವಣಗೆರೆ(ಸೆ.06): ಪ್ರೀತಿಸಿದ ಹುಡುಗಿಗೆ ಯುವಕನೊಬ್ಬ ನಡು ರಸ್ತೆಯಲ್ಲಿಯೇ ತಾಳಿ ಕಟ್ಟಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಿಮ್ಲಾಪುರ ಗ್ರಾಮ ತಿಮ್ಲಾಪುರ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. 

ಹೇಮಂತ್ ಹಾಗೂ ಯುವತಿ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಯುವಕರ ಯುವತಿ ಅನ್ಯ ಜಾತಿಯವರಾಗಿದ್ದರು. ಹೀಗಾಗಿ ಹೇಮಂತ್ ಇತ್ತೀಚಿಗಷ್ಟೆ ಸ್ವಜಾತಿ ಯುವತಿ ಮದುವೆ ಆಗಿದ್ದ. ಅದರೂ ಕೂಡ ಹೇಮಂತ್‌ ತಾನು ಪ್ರೀತಿಸಿದ ಯುವತಿಗೆ ಇಂದು ನಡು ರಸ್ತೆಯಲ್ಲಿಯೇ ತಾಳಿ ಕಟ್ಟಿ ಮದುವೆಯಾಗಿದ್ದಾನೆ.

7.5 ಮೀಸಲಾತಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದ ರಾಮುಲು, ಬಿಎಸ್‌ವೈಗೆ ಟೆನ್ಷನ್

ಯುವಕ‌-ಯುವತಿ ಅನ್ಯ ಜಾತಿಗೆ ಸೇರಿದ್ದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ತಿಮ್ಮಾಪುರ ಗ್ರಾಮಕ್ಕೆ ಚನ್ನಗಿರಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.