ದಾವಣಗೆರೆ, (ಸೆ.06): ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾತಿ ಪ್ರಮಾಣ ಹೆಚ್ಚಿಸುವ ಸಂಬಂಧ ನಾಗಮೋಹನ್ ದಾಸ್ ವರದಿ ಅಂಶಗಳನ್ನು  ಬಹಿರಂಗಪಡಿಸಿದ ಆರೋಗ್ಯ ಸಚಿವ ಶ್ರೀರಾಮುಲು ಬಹಿರಂಗಪಡಿಸಿದ್ದಾರೆ.

ಇಂದು (ಭಾನುವಾರ) ದಾವಣಗೆರೆ ರಾಜನಹಳ್ಳಿ ಗುರುಪೀಠದಲ್ಲಿ  ಮಾತನಾಡಿದ ಅವರು, ವಾಲ್ಮೀಕಿ ಸಮುದಾಯದ ಹೋರಾಟ ನಾಲ್ಕು ದಶಕಗಳಿಂದ ನಡೆಯುತ್ತಿದೆ. 7.5 ಮೀಸಲಾತಿ ಕೊಡಬೇಕೆಂದು ನಮ್ಮ ಆಗ್ರಹ. ಪಕ್ಷಾತೀತವಾಗಿ ಮೀಸಲಾತಿ ಹೋರಾಟವನ್ನು ನನ್ನ ಮೇಲೆ‌ ಹಾಕಿದ್ದಾರೆ. ರಾಜಕಾರಣದ ಜೊತೆ ಸಮಾಜದ ಹಿತ ಮುಖ್ಯ . 7.5 ಮೀಸಲಾತಿ ಹೋರಾಟದ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಹೇಳುವ ಮೂಲಕ ಸಿಎಂ ಬಿಎಸ್ ಯಡಿಯೂರಪ್ಪಗೆ ಮತ್ತೆ ಒತ್ತಡ ತಂದಿಟ್ಟರು. 

ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ: ಅಂತಿಮವಾಗಿ CM ಸಭೆಯಲ್ಲಿ ಏನಾಯ್ತು..?

ಸದನ ನಡೆಯುವ ಸಂದರ್ಭದಲ್ಲಿ ನಾವೆಲ್ಲಾ ಸೇರೋಣ. ಎಲ್ಲಾ ಶಾಸಕರು ರಾಮುಲು ಅಣ್ಣನ ಮೇಲೆ ಜವಬ್ಧಾರಿ ಕೊಟ್ಟಿದ್ದಾರೆ. ಜಸ್ಟೀಸ್ ನಾಗ್ ಮೋಹನ್ ದಾಸ್ ಎಸ್ಟಿಗೆ   ಶೇ 5 ರಷ್ಟು ಮೀಸಲಾತಿ ಕೊಡಿ ಎಂದು ವರದಿ ಕೊಟ್ಟಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಗಳನ್ನು ಭೇಟಿ ಮಾಡಿ 7.5 ರಷ್ಟು ಮೀಸಲಾತಿ ಕೊಡಬೇಕೆಂದು ಒತ್ತಾಯಿಸೋಣ. ಯಡಿಯೂರಪ್ಪ ನವರು ನಮಗೆ 7.5 ರಷ್ಟು ಮೀಸಲಾತಿ ಕೊಟ್ಟೆ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ಕೋವಿಡ್ ಇದ್ದುದರಿಂದ ನ್ಯಾ. ನಾಗಮೋಹನ್ ದಾಸ್ ವರದಿಯನ್ನು ಜಾರಿಯಾಗಿಲ್ಲ. ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಯಾಗಬೇಕೆಂಬುದು ಇಡೀ ಸಮಾಜದ ಆಗ್ರಹವಾಗಿದ್ದು, ಅದಕ್ಕಾಗಿ ನಾಗಮೋಹನ್ ದಾಸ್ ಸಮಿತಿ ರಚಿಸಲಾಗಿತ್ತು. ಪರಿಶಿಷ್ಟ ಪಂಗಡ ಸಮುದಾಯಕ್ಕೆ ಶೇ  7.5 ಮೀಸಲಾತಿ ಘೋಷಣೆಯಾಗುತ್ತೆ. ಕೋವಿಡ್ ಹಿನ್ನಲೆಯಲ್ಲಿ ತಡವಾಗಿದ್ದು, ಸರ್ಕಾರದ ಮೇಲೆ ಒತ್ತಡ ಹಾಕಲು ಸಮಾಜದ ಮುಖಂಡರ  ಸಭೆ ಕರೆಯಲಾಗಿದೆ ಎಂದರು.