ಪುತ್ತೂರಿನ ಕಲಾವಿದ ಕೆ. ರಾಮ್ ಪ್ರಸಾದ್ ಅವರು ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗಾಗಿ ರಚಿಸಿದ ಲೋಗೋ ಆಯ್ಕೆಯಾಗಿದೆ. ದೇಶದಾದ್ಯಂತ ಬಂದ 7 ಸಾವಿರಕ್ಕೂ ಅಧಿಕ ವಿನ್ಯಾಸಗಳಲ್ಲಿ ಇವರ ಲೋಗೋ ಆಯ್ಕೆಯಾಗಿದ್ದು, ದೆಹಲಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಇವರನ್ನು ಸನ್ಮಾನಿಸಲಾಗುವುದು.
ಪುತ್ತೂರು (ಜೂ.27): ಕೇಂದ್ರ ಸರ್ಕಾರದ ವಿಬಿಜಿ ರಾಮ್ ಜಿ ಯೋಜನೆಗೆ ಕನ್ನಡಿಗ ಕಲಾವಿದ ರಚಿಸಿದ ಲೋಗೋ(Logo) ವಿನ್ಯಾಸವನ್ನು ಆಯ್ಕೆ ಮಾಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಲಾವಿದ ಕೆ.ರಾಮ್ ಪ್ರಸಾದ್(K Ram prasad) ಅವರು ಲೋಗೋ ರಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದ್ದರು. ಈ ಲೋಗೋ ವಿನ್ಯಾಸವನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು, ಜೂ.29ರಂದು ದೆಹಲಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅನಾವರಣ ಮಾಡಲಿದೆ. ಇದೇ ವೇಳೆ ರಾಮ್ ಪ್ರಸಾದ್ ಅವರನ್ನು ಸನ್ಮಾನಿಸಿ, ₹50 ಸಾವಿರ ನಗದು ಪುರಸ್ಕಾರ ನೀಡಿ ಸನ್ಮಾನಿಸಲಿದೆ.
ಲೋಗೊ ವಿನ್ಯಾಸ ಸ್ಪರ್ಧೆ
ವಿಬಿ ಜಿ ರಾಂ ಜಿ ಯೋಜನೆ(VBG Ramji Yojana)ಗೆ ಲೋಗೋ ವಿನ್ಯಾಸ ಮಾಡುವಂತೆ ದೇಶದಾಂತ್ಯಂತ ಕಲಾವಿದರಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವಿನ್ಯಾಸಕ್ಕೆ ದೇಶದ ಹಲವು ಕಡೆಗಳಿಂದ ಸುಮಾರು ೭ ಸಾವಿರಕ್ಕೂ ಅಧಿಕ ಕಲಾವಿದರು ವಿನ್ಯಾಸಗೊಳಿಸಿದ ಲೋಗೋ ಕಳುಹಿಸಿಕೊಟ್ಟಿದ್ದರು. ಪುತ್ತೂರು ನಗರ ನಿವಾಸಿಗಳಾದ ಮಲ್ಲೇಶ್ ಆಚಾರ್ಯ- ಅನುರಾಧಾ ಕೆ. ದಂಪತಿ ಪುತ್ರ ರಾಮ್‌ಪ್ರಸಾದ್ ಅವರು ಲೋಗೋ ವಿನ್ಯಾಸಗೊಳಿಸಿ ಕಳುಹಿಸಿದ್ದರು. ಇದಾದ ಒಂದೂವರೆ ತಿಂಗಳ ಬಳಿಕ ಅವರು ಕಳುಹಿಸಿದ ಲೋಗೋ ವಿಬಿಜಿ ರಾಮ್ ಜಿ ಯೋಜನೆಗೆ ಆಯ್ಕೆಯಾಗಿದೆ.ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಹೊಸ ರೂಪವಾಗಿ ಜಾರಿಗೆ ತಂದಿರುವ ವಿಬಿ ಜಿ ರಾಮ್ ಜಿ ಯೋಜನೆಗೆ ಮುಂದಿನ ದಿನಗಳಲ್ಲಿ ಬಳಸಲಾಗುವ ಲೋಗೊವನ್ನು ಒದಗಿಸಿದ ಕೀರ್ತಿ ಪುತ್ತೂರಿನ ರಾಮ್ ಪ್ರಸಾದ್ ಪಾಲಿಗೆ ಲಭಿಸಿದೆ.
ಆಯ್ಕೆಯಾಗುವ ನಿರೀಕ್ಷೆ ಇರಲಿಲ್ಲ..!
ಲೋಗೋ ಕೊಡಲು ಕೇಂದ್ರ ಸರ್ಕಾರ ಎಲ್ಲರಿಗೂ ಮುಕ್ತ ಅವಕಾಶ ನೀಡಿತ್ತು. ಇಂಟರ್ನೆಟ್‌ನಲ್ಲಿ ಈ ವಿಷಯ ನೋಡಿದೆ. ಮಾರ್ಚ್ ೩೦ ಕೊನೆಯ ದಿನವಾಗಿತ್ತು. ಕೊನೆಯ ಒಂದು ವಾರದಲ್ಲಿ ಸ್ಪರ್ಧೆಗಾಗಿ ಲೋಗೋ ಬಿಡಿಸಲು ತೊಡಗಿದೆ. ಮೊದಲು ವಿ.ಬಿ.ಜಿ. ರಾಮ್ ಜಿ ಯೋಜನೆಯ ಉದ್ದೇಶ, ಸ್ವರೂಪಗಳ ಬಗ್ಗೆ ತಿಳಿದುಕೊಂಡೆ. ಅದಕ್ಕೆ ತಕ್ಕದಾದ ಲೋಗೋ ಬರೆದೆ. ಆದರೆ ಸುಮಾರು ೨೦ ಲೋಗೋ ರಚಿಸಿದರೂ ನನಗೆ ತೃಪ್ತಿಯಾಗಲಿಲ್ಲ. ಆಗಲೇ ಡೆಡ್‌ಲೈನ್ ಮುಗಿದಿತ್ತು. ಮಾರ್ಚ್ ೩೦ರಂದು ೫ ಸಾವಿರ ನೋಂದಣಿ ಕಾಣುತ್ತಿತ್ತು. ಇನ್ನಾಗದು ಎಂದು ಕೈಬಿಟ್ಟೆ. ಏ.೧ರಂದು ನೋಡಿದಾಗ ೪ ದಿನ ವಿಸ್ತರಣೆ ಮಾಡಿದ್ದು ಗೊತ್ತಾಯಿತು. ಮತ್ತೆ ಉತ್ಸಾಹ ಚಿಗುರಿತು. ಮತ್ತೆ ಗೀಚತೊಡಗಿದೆ. ಹಲವಾರು ಲೋಗೋ ಬರೆದ ಬಳಿಕ ಒಂದು ಲೋಗೋ ನನಗೆ ಇಷ್ಟವಾಯಿತು. ಏ.೪ರಂದು ಕೊನೆಯ ಕ್ಷಣದಲ್ಲಿ ಅದನ್ನು ಕಳಿಸಿದೆ. ಆಯ್ಕೆಯಾಗುವ ಯಾವ ನಿರೀಕ್ಷೆಯೂ ಇರಲಿಲ್ಲ ಎಂದು ರಾಮ್ ಪ್ರಸಾದ್ ತಿಳಿಸಿದರು.
ಲೋಗೊ ರಚಿಸುವ ಮುನ್ನ ಏನು ಮಾಡಬೇಕು?
-ಕೆ.ರಾಮ್‌ಪ್ರಸಾದ್, ಲೋಗೋ ರಚಿಸಿದ ಯುವ ಕಲಾವಿದ.


