ತುಮಕೂರು, ಕೋಲಾರ ಜಿಲ್ಲೆಗಳಿಗೆ 2 ವರ್ಷದೊಳಗೆ ಎತ್ತಿನಹೊಳೆ ನೀರು ಪೂರೈಕೆ!
ಮುಂದಿನ 2 ವರ್ಷಗಳಲ್ಲಿ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಬೆಂಗಳೂರು (ಡಿ.18): ಎತ್ತಿನ ಹೊಳೆ ಯೋಜನೆಗೆ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನ ನೀಡಿಲ್ಲ. ಹೀಗಾಗಿ ಸ್ಥಗಿತಗೊಂಡಿದ್ದ ಯೋಜನೆಯ ಕೆಲಸವನ್ನು ನಮ್ಮ ಸರ್ಕಾರ ಆರಂಭಿಸಿದೆ. ಮುಂದಿನ 2 ವರ್ಷಗಳಲ್ಲಿ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.
ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎತ್ತಿನ ಹೊಳೆ ಯೋಜನೆಯು ಪ್ರಾರಂಭದಲ್ಲಿ ಅಂದಾಜು ವೆಚ್ಚ 13,500 ಕೋಟಿ ರೂ. ಮಾಡಲಾಗಿತ್ತು. ಈ ಹಿಂದಿನ ಅವಧಿಯಲ್ಲಿ ಬಿಜೆಪಿ ಸರ್ಕಾರವು ಅನುದಾನವನ್ನು ನೀಡಿಲ್ಲ. ಇದೇ ಕಾರಣದಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಈಗ ನಮ್ಮ ಸರ್ಕಾರವು ಅನುದಾನ ಬಿಡಗುಡೆ ಮಾಡಲಾಗಿದೆ. ಯೋಜನೆಯ ಅಂದಾಜು ವೆಚ್ಚ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಪ್ರಸ್ತುತ 22 ಸಾವಿರ ಕೋಟಿ ರೂ. ಆಗುತ್ತಿದೆ. ಎರಡು ವರ್ಷದೊಳಗೆ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು.
ಲೀಲಮ್ಮ ಇನ್ನೊಬ್ಬರನ್ನು ನೋಯಿಸಿದ್ದೀನಾ ಅನ್ನೋ ಚಿಂತೆಯಲ್ಲೇ ಬದುಕಿದ್ರು: ಗುಟ್ಟು ಬಿಚ್ಚಿಟ್ಟ ವಿನೋದ್ ರಾಜ್!
ವಾಟರ್ ಸ್ಟೋರೆಜ್‌ಗಾಗಿ ಕೊರಟಗೆರೆ ರೈತರು ನೀಡಿರುವ ಭೂಮಿಗೆ ಎಕರೆಗೆ 8 ಲಕ್ಷ ರೂ. ಹಾಗೂ ದೊಡ್ಡಬಳ್ಳಾಪುರದಲ್ಲಿ ಎಕರೆ ಭೂಮಿಗೆ 32 ಲಕ್ಷ ರೂ. ಪರಿಹಾರ ನಿಗಧಿಪಡಿಸಲಾಗಿದೆ. ಎಲ್ಲ ರೈತರಿಗೂ ಒಂದೇ ರೀತಿಯ ಸಮಾನ ಪರಿಹಾರ ಕಲ್ಪಿಸುವಂತೆ ಒತ್ತಾಯಿಸಲಾಗಿದೆ. ಇನ್ನು ಎತ್ತಿನಹೊಳೆ ಯೋಜನೆ ಪೂರ್ಣಗೊಂಡಲ್ಲಿ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ಹೇಳಿದರು.
ರಾಜ್ಯದಲ್ಲಿ ಎನ್‌ಐಎ ದಾಳಿ: ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಚೇರಿ ಆಗಿದೆ. ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ಆಧರಿಸಿ ದಾಳಿ ಮಾಡುತ್ತಿರುತ್ತಾರೆ. ಈ ಬಗ್ಗೆ ಎನ್‌ಐಎ ತಂಡವು ಕೆಲವು ಸಲ ರಾಜ್ಯ ಪೊಲೀಸರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಾರೆ. ಅವರ ಕರ್ತವ್ಯ ಅವರು ಮಾಡಲಿದ್ದಾರೆ ಎಂದರು.
ನಟ ರವಿಕಿರಣ್‌ಗೆ ಗುರೂಜಿಯಿಂದ 4 ಲಕ್ಷ ರೂಪಾಯಿ ವಂಚನೆ!
ಬೆಂಗಳೂರು (ಡಿ.18): ಕನ್ನಡ ಚಲನಚಿತ್ರ ಮತ್ತು ಕಿರುತೆರೆಯ ಜನಪ್ರಿಯ ನಟ ಕಮ್-ನಿರ್ದೇಶಕ ಪಿ ರವಿಕಿರಣ್ ಅವರಿಗೆ 4 ಲಕ್ಷಕ್ಕೂ ಹೆಚ್ಚು ರೂ ವಂಚಿಸಿದ ಘಟನೆ ನಡೆದಿದೆ. ದುಬೈ ಟಿಕೆಟ್ ಹಾಗೂ ಗೋಲ್ಡ್ ಆಸೆ ತೋರಿಸಿ ಹಿರಿಯ ನಟನಿಗೆ ವಂಚಿಸಿದ್ದು, ನವೀನ್ ಭಾಗ್ಯಶ್ರೀ ಗುರೂಜಿ ವಿರುದ್ದ ದೂರು ದಾಖಲಾಗಿದೆ. 65 ವರ್ಷದ ಕಲಾವಿದ ರವಿಕಿರಣ್ ಈ ಸಂಬಂಧ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಟನಿಗೆ ನಾಲ್ಕು ಲಕ್ಷಕ್ಕೂ ಅಧಿಕ ಹಣ ವಂಚಿಸಿರೋ ಆರೋಪ ಕೇಳಿಬಂದಿದ್ದು, ನವೀನ್ ಗುರೂಜಿ ಅನಾಥಾಶ್ರಮಕ್ಕೆ ರೇಷನ್ ಕೊಡಿಸಿ ಎಂದು ರವಿಕಿರಣ್ ಬಳಿ ಹೋಗಿದ್ದನು. ಈ ವೇಳೆ ಹಿರಿಯ ನಟ 2500 ಹಣವನ್ನ ಗೂಗಲ್ ಪೇ ಮಾಡಿದ್ದರು.
ಬೆಳಗಾವಿ ಸಂತ್ರಸ್ಥೆ ಮಹಿಳೆ ಕೇಸ್ ವಿಚಾರಣೆಯಲ್ಲಿ ಮಾನವೀಯತೆ, ಸ್ತ್ರೀ ಗೌರವ ಎತ್ತಿಹಿಡಿದ ಹೈಕೋರ್ಟ್!
ಸ್ವಲ್ಪ ದಿನದ ಬಳಿಕ ದುಬೈನಲ್ಲಿ ಕಾರ್ಯಕ್ರಮ ಇದೆ ನೀವೇ ಇದಕ್ಕೆ ಮುಖ್ಯಅತಿಥಿ. ಕಾರ್ಯಕ್ರಮಕ್ಕೆ ಹೋದರೆ ಹಣ ಕೊಡ್ತಾರೆ ಅಂತ ಗುರೂಜಿ ಕರೆ ಮಾಡಿದ್ದ. ಇದಕ್ಕೆ ಒಪ್ಪಿ ಟಿಕೆಟ್ ಮಾಡಿಸಿ ಕೊಡಿ ಎಂದು ಗುರೂಜಿ ಬಳಿಯೇ ರವಿಕಿರಣ್ ಕೇಳಿದ್ದರು. ಇದಕ್ಕಾಗಿ ವೀಸಾ ಮತ್ತು ಟಿಕೆಟ್ ಗೆ 42 ಸಾವಿರ ಹಣ ಗುರೂಜಿ ಪಡೆದಿದ್ದ. ನಂತರ ಟಿಕಿಟ್ ಕ್ಯಾನ್ಸಲ್ ಆಗಿದೆ ಎಂದು ಹೇಳಿ ಯಾಮಾರಿಸಿದ್ದಾರಂತೆ. ಅಷ್ಟೇ ಅಲ್ಲದೇ ಕಡಿಮೆ ಬೆಲೆಗೆ ಚಿನ್ನ ಹಾಗೂ ಸೈಟ್ ಕೊಡಿಸೋದಾಗಿಯೂ ಹೇಳಿ ವಂಚಿಸಿದ್ದಾನೆ ಎಂದು ಆರೋಪಿಸಲಾಗಿದೆ.