Asianet Suvarna News Asianet Suvarna News

ಧಾರವಾಡದಲ್ಲಿ ಕಾಣ್ತಿಲ್ಲ ಲಾಕ್‌ಡೌನ್‌ ವಾತಾವರಣ

* ಧಾರವಾಡ ಜಿಲ್ಲೆಯಲ್ಲಿ ಜಾರಿಯಾಗದ ಯಾವುದೇ ಕಠಿಣ ನಿಯಮ
* ಬೇಕಾಬೇಟ್ಟಿಯಾಗಿ ಅಡ್ಡಾಡುತ್ತಿರುವ ಜನತೆ 
* ತಪಾಸಣಾ ಕಾರ್ಯ ಸಂಪೂರ್ಣವಾಗಿ ನಿಲ್ಲಿಸಿದ ಪೊಲೀಸರು

Yet Strict Rules are not Enforced in Dharwad District grg
Author
Bengaluru, First Published May 20, 2021, 8:11 AM IST

ಧಾರವಾಡ(ಮೇ.20): ಬೇರೆ ಬೇರೆ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ನಿಯಮ ಮತ್ತಷ್ಟು ಕಠಿಣಗೊಳಿಸಲು ಜಿಲ್ಲಾಧಿಕಾರಿ ತೀರ್ಮಾನಿಸಿದ್ದಾರೆ. ಆದರೆ, ಧಾರವಾಡ ಜಿಲ್ಲೆಯಲ್ಲಿ ಅಂತಹ ಯಾವುದೇ ಕಠಿಣ ನಿಯಮಗಳು ಇನ್ನೂ ಜಾರಿಯಾಗಿಲ್ಲ. ಹೀಗಾಗಿ ಜನರು ಬೇಕಾಬಿಟ್ಟಿಯಾಗಿ ಅಡ್ಡಾಡುತ್ತಿದ್ದಾರೆ.

Yet Strict Rules are not Enforced in Dharwad District grg

ಸೆಮಿ ಲಾಕ್‌ಡೌನ್‌ ಜಾರಿಯಾಗಿ ಹತ್ತು ದಿನಗಳು ಕಳೆದರೂ ಇನ್ನೂ 1000 ಸಮೀಪದಲ್ಲಿ ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ದಾಖಲಾಗುತ್ತಿವೆ. ಹಾಗೆಯೇ ನಿತ್ಯವೂ ಸರಾಸರಿ 6 ಜನ ಸೋಂಕಿತರು ಮೃತರಾಗುತ್ತಿದ್ದಾರೆ.

"

ಕೋವಿಡ್‌ ಭಯ ಇದ್ದರೂ ಹುಬ್ಬ​ಳ್ಳಿ-ಧಾರವಾಡದ ಜನ ನಿತ್ಯ ಅಗತ್ಯ ವಸ್ತುಗಳ ಖರೀದಿಯ ಹೆಸರಿನಲ್ಲಿ ಬೆಳಗ್ಗೆ 6ರಿಂದ 10 ಹಾಗೂ ಸಂಜೆಯೆ ಹೊತ್ತು ಬೇಕಾಬೇಟ್ಟಿಯಾಗಿ ಅಡ್ಡಾಡುತ್ತಿದ್ದಾರೆ. ಪೊಲೀಸರು ಪ್ರಮುಖ ರಸ್ತೆ, ವೃತ್ತಗಳಲ್ಲಿ ಬ್ಯಾರಿಕೇಡ್‌ ಹಾಕಿದ್ದಾರೆಯೇ ಹೊರತು ತಪಾಸಣಾ ಕಾರ್ಯವನ್ನೂ ಸಂಪೂರ್ಣವಾಗಿ ನಿಲ್ಲಿಸಿದ್ದಾರೆ. ಹೀಗಾಗಿ ಲಾಕ್‌ಡೌನ್‌ ಎನ್ನುವ ವಾತಾವರಣ ಇಲ್ಲವಾಗಿದೆ.

Yet Strict Rules are not Enforced in Dharwad District grg

ಕೊರೋನಾ ಅಟ್ಟಹಾಸದ ಮಧ್ಯೆ ಬಳಕೆಯಾಗದ ರೈಲ್ವೆ ಐಸೋಲೇಷನ್‌ ಬೋಗಿ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
 

Follow Us:
Download App:
  • android
  • ios