ವೃಷಭಾವತಿ ನದಿಯಲ್ಲಿ ಹಳದಿ ನೀರು
ಕೊಳಚೆ ನೀರು ಹರಿಯುತ್ತಿದ್ದ ವೃಷಭಾವತಿ ನದಿಯಲ್ಲಿ ಇದೀಗ ಹಳದಿ ಬಣ್ಣದ ನೀರು ಹರಿಯುತ್ತಿದೆ.
ರಾಮನಗರ [ಸೆ.24]: ಕೊಳಚೆ ನೀರು ಹರಿಯುತ್ತಿದ್ದ ವೃಷಭಾವತಿ ನದಿಯಲ್ಲಿ ಇದೀಗ ಹಳದಿ ಬಣ್ಣದ ನೀರು ಹರಿಯುತ್ತಿದೆ.
ಇದು ಮಳೆಯೊಂದಿಗೆ ಹರಿದು ಬಂದಿರುವ ಮಣ್ಣು ಮಿಶ್ರಿತ ಅಥವಾ ಯಾವುದಾದರೂ ಕೈಗಾರಿಕೆಯ ತ್ಯಾಜ್ಯದ ನೀರು ಎಂಬ ಅನುಮಾನ ಮೂಡಿದೆ. ಇದರಿಂದ ನದಿ ಪಾತ್ರದ ಜನರು ಹಾಗೂ ಬಿಡದಿಯ ಭೈರಮಂಗಲ ಕೆರೆ ಭಾಗದ ರೈತರು ಆತಂಕಗೊಂಡಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಷ್ಟು ದಿನದವರೆಗೆ ವೃಷಭಾವತಿ ನದಿಯಲ್ಲಿ ಕಪ್ಪು ಬಣ್ಣದ ನೊರೆ ಮಿಶ್ರಿತ ನೀರು ಹರಿಯುತ್ತಿತ್ತು. ಕುಂ ಬಳಗೂಡು ಕೈಗಾರಿಕಾ ಪ್ರದೇಶದಿಂದ ಕೊಳಚೆ ನೀರು ಹರಿಯಬಿಡಲಾಗಿದೆ ಎಂಬ ಅನುಮಾನಿಸಲಾಗಿದೆ.