ಸಿದ್ದರಾಮಯ್ಯಗಿಂತ ಯಡಿಯೂರಪ್ಪ ತುಂಬಾ ಹಠಮಾರಿ: ಎಂ.ಬಿ ಪಾಟೀಲ್
ಸಿದ್ದರಾಮಯ್ಯ ಹಠಮಾರಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಮಾದ್ಯಮಗಳಿಗೆ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಯಡಿಯೂರಪ್ಪ ಅವರಷ್ಟು ಹಠಮಾರಿಯಲ್ಲ. ಯಡಿಯೂರಪ್ಪ ಸ್ವಭಾವ ನನಗೂ ಗೊತ್ತು, ಅವರು ಬಹಳ ಹಠಮಾರಿ ಎಂದರು.
ಚಿತ್ರದುರ್ಗ (ಆ.23): ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ಮೇಲೆ ಕೋಟೆನಾಡಿಗೆ ಮೊದಲ ಬಾರಿ ಆಗಮಿಸಿದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ಗೆ ಅದ್ದೂರಿ ಸ್ವಾಗತ ದೊರಕಿತು. ಚಿತ್ರದುರ್ಗ ನಗರದ ಒನಕೆ ಓಬವ್ವ ವೃತ್ತದಲ್ಲಿ ಬೃಹತ್ ಸೇವಿನ ಹಾರ ಹಾಕುವ ಮೂಲಕ ಅಭಿಮಾನಿಗಳು ಭರ್ಜರಿ ಸ್ವಾಗತ ಕೋರಿದರು. ನಂತರದಲ್ಲಿ ಬಹಿರಂಗ ಸಮಾವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತದನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಠಮಾರಿ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಮಾದ್ಯಮಗಳಿಗೆ ಸಚಿವ ಎಂ.ಬಿ ಪಾಟೀಲ್ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಯಡಿಯೂರಪ್ಪ ಅವರಷ್ಟು ಹಠಮಾರಿಯಲ್ಲ. ಯಡಿಯೂರಪ್ಪ ಸ್ವಭಾವ ನನಗೂ ಗೊತ್ತು, ಅವರು ಬಹಳ ಹಠಮಾರಿ ಎಂದರು. ಮಡಿಕೇರಿ ಚಲೋ ಆಗಿದ್ದು, ವಿಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆಯುವ ಕೆಲಸ ಮಾಡಿದ್ರಿಂದ ಈ ಘಟನೆಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನೇರ ಕಾರಣ. ಯಡಿಯೂರಪ್ಪ ಅವರಿಗೆ ಇದನ್ನ ಹೇಳಿ ಎಂದು ಪ್ರಶ್ನಿಸಿದರು. ಭದ್ರತಾ ವೈಪಲ್ಯದಿಂದ ಚಿಲ್ಲರೆ ಕೆಲಸಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಮಂತ್ರಿ ಅವರು ಅಸಮರ್ಥರು, ಅನ್ ಪಿಟ್ ಆಗಿದ್ದಾರೆ ಎಂದು ಕಿಡಿಕಾರಿದರು.
ಪ್ರತಾಪ್ ಸಿಂಹ ಹೇಳಿಕೆ ಗೆ ಎಂ.ಬಿ ಪಾಟೀಲ್ ಟಾಂಗ್ ಕೊಟ್ಟರು. ರಾಜ್ಯದ ಜನತೆಗೆ ಸಿದ್ದರಾಮಯ್ಯ ಯೋಗ್ಯತೆ ಏನೂ, ಪ್ರತಾಪ್ ಸಿಂಹ ಯೋಗ್ಯತೆ ಏನೂ ಗೊತ್ತಿದೆ. ರಾಜ್ಯದಲ್ಲಿ ಭಾವನೆ ಕದಡುವ ಕೆಲಸ ಬಿಟ್ಟು, ಜನರ ಬದುಕು ಕಟ್ಟುವ ಕೆಲಸ ಮಾಡಿ ಪ್ರತಾಪ್ ಸಿಂಹ. ಮೊಟ್ಟೆ ಎಸೆತ, ಸಾವರ್ಕರ್ ಪೋಟೋ ಬರೀ ಇದೆ ಆಯ್ತು, ಇದು ಹೊಟ್ಟೆ ತುಂಬಲ್ಲ. ಇದು ಭಾವನೆ ಕೆರಳಿಸುವ ಕೆಲಸ ಯಾಕೆ ಮಾಡುತ್ತೀದ್ದೀರಾ ಅಂದರೆ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ಎಂದರು.
ಸಿದ್ದುಗೆ ಮೊಟ್ಟೆ ಎಸೆತ ಬಗ್ಗೆ ತನಿಖೆ: ಸಿಎಂ ಬೊಮ್ಮಾಯಿ
ಸಾವರ್ಕರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಇದು ಐತಿಹಾಸಿಕ ಸತ್ಯ. ಇದಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಸಾವರ್ಕರ್ ಅವರು ಬ್ರಿಟಿಷ್ ರಿಗೆ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದು ಐತಿಹಾಸಿಕ ಸತ್ಯಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು. ನಂತರ ತಪ್ಪೋಪ್ಪಿಗೆ ಪತ್ರವನ್ನೂ ಕೂಡ ಬರೆದಿದ್ದು ಅಷ್ಟೇ ಸತ್ಯ. ಎಸಿಬಿ ರದ್ದು ಪ್ರಶ್ನಿಸಿ ಸರ್ಕಾರ ಸುಪ್ರಿಂ ಕೋರ್ಟ್ ಮೆಟ್ಟಿಲು ಏರಿರುವ ವಿಚಾರ. ನನಗೆ ಒಬ್ಬ ಹಿರಿಯ ವಕೀಲರು ಹೇಳಿದ್ದಾರೆ. ಎಸಿಬಿಗೆ ಸಪರೇಟ್ ಇರಬೇಕು ಎಂದು ಸರ್ಕಾರವೇ ಬೆಂಬಲಿಸಿದೆ. ನನಗೆ ತುಂಬಾ ಹಿರಿಯ ವಕೀಲರು ಹೇಳಿದ್ದಾರೆ. ಇದನ್ನ ನಾನು ವಿ.ಪಕ್ಷದ ನಾಯಕರಿಗೆ ಈ ವಿಚಾರ ಹೇಳಲು ಆಗಿಲ್ಲ. ಇದೀಗ ಸುಮ್ಮನೇ ಸುಪ್ರೀಂ ಕೋರ್ಟ್ ಹೋಗಿದ್ದಾರೆ. ಸರ್ಕಾರ ಮೇಲೊಂದು ಒಳಗೆ ಒಂದು ನಿಲುವಿನಲ್ಲಿದೆ ಎಂದು ವಾಗ್ದಾಳಿ ನಡಸಿದರು.
ಸಿದ್ದು ಕಾರಿಗೆ ಮೊಟ್ಟೆ ಎಸೆದಿದ್ದು ಖಂಡಿಸಿ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ
ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆಯಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು, ಯಾವುದಕ್ಕೂ ಹೆದರಲ್ಲ. ಸಿದ್ದರಾಮಯ್ಯ ಅವರನ್ನ ಯಾರೂ ಕೂಡಾ ಮುಟ್ಟಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಅವರನ್ನ ಮುಟ್ಟುವ ಪ್ರಯತ್ನ ಮಾಡಿದ್ರೆ, ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ. ಒಂದು ಮೊಟ್ಟೆ ಎಸೆದಿದ್ದಕ್ಕೆ ಇವರಿಗೆ ಪಾಠ ಕಲಿಸಿದ್ದಾರೆ. ಅವರನ್ನ ಮುಟ್ಟುವುದು, ಏನಾದ್ರೂ ಮಾಡುವುದು ಮಾಡಿದ್ರೆ, ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ.*ಮಡಿಕೇರಿ 4 ದಿನ ನಿಷೇದಾಜ್ಞೆ ವಿಚಾರದ ಕುರಿತು KPCC ಅಧ್ಯಕ್ಷರು, ವಿ.ಪಕ್ಷ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ ಎಂದರು.