ವರ್ಷದ ಹಿನ್ನೋಟ: ಮಂಪರಿನಲ್ಲೇ ಮುಗಿದ 22, ಮಾಯೆ ಮಾಡುವುದೇ 23?
ನಟ ಸುದೀಪ್ ಮಂತ್ರಾಲಯಕ್ಕೆ ಭೇಟಿ, ಮೊದಲ ಬಾರಿಗೆ ಶಿವಣ್ಣ ರಾಯಚೂರಿಗೆ ಆಗಮನ, ಕಲುಷಿತ ನೀರು ಸೇವಿಸಿ 7 ಜನರ ದುರ್ಮರಣ, ನಿರಂತರ ಮಳೆಯಿಂದಾಗಿ ಜಿಲ್ಲೆಯಾದ್ಯಂತ .73 ಕೋಟಿ ಹಾನಿ, ಜಿಲ್ಲೆಯಲ್ಲಿ ಸಮೊದಲ ಝೀಕಾ ವೇರಸ್ ಪತ್ತೆ, ಗಿಲ್ಲೆಸುಗೂರಿನಲ್ಲಿ ಜೆæಡಿಸ್ ಸಮಾವೇಶ, ಬಿಜೆಪಿಯ ಜನಸಸಂಕಲ್ಪ ಯಾತ್ರಗೆ ಚಾಲನೆ, ಕಾಂಗ್ರೆಸ್‌ನ ಭಾರತ್ ಜೋಡೋ ಯಾತ್ರೆ ರಾಯಚೂರು ನಗರಕ್ಕೆ ಪ್ರವೇಶ
ರಾಮಕೃಷ್ಣ ದಾಸರಿ
ರಾಯಚೂರು (ಡಿ.31) : ಒಮಿಕ್ರೋನ್ ಆತಂಕದಲ್ಲಿಯೇ ಆರಂಭಗೊಂಡಿದ್ದ 2022ನೇ ಇಸವಿ ಅದೇ ಮಹಾಮಾರಿಯ ಭೀತಿಯಲ್ಲಿಯೇ ಕೊನೆಗೊಂಡಿದೆ. ಇಡೀ ವರ್ಷ ಜಿಲ್ಲೆ ಜನರಿಗೆ ಸಿಹಿಗಿಂತಲೂ ಕಹಿ ಅನುಭವವನ್ನೇ ಉಣಬಡಿಸುವುದರ ಜೊತೆಗೆ ಅದೇ ಮಂಪರಿನಲ್ಲಿಯೇ ಮುಗಿದಿದ್ದು, ಹೊಸ ವರ್ಷದಲ್ಲಾದರು ಜನರ ಸಂಕಷ್ಟಗಳು ದೂರವಾಗಿ, ಪ್ರಗತಿಯ ಜ್ವಾಲೆಯು ಹೊತ್ತಿ ಉರಿದು ನವ ಬೆಳಕಿನ ಮಾಯೆ ಮಾಡುವುದೇ ಎನ್ನುವ ನಿರೀಕ್ಷೆಗಳನ್ನು ನಾಗರಿಕರು ಹೊಂದಿದ್ದಾರೆ.
ವರ್ಷದ ಆರಂಭದಲ್ಲಿ ಕೋವಿಡ್ ಲಸಿಕೆ ಅಭಿಯಾನ(Covid Vaccination Campaign), ಒಮಿಕ್ರಾನ್ ಸೋಂಕು(Omicronvirus) ವ್ಯಾಪಿಸದಂತೆ ವಾರಾಂತ್ಯದ ಕಫä್ರ್ಯ ಜಾರಿ, ಜ.26 ರಂದು ಜಿಲ್ಲಾ ನ್ಯಾಯಾ ಸಂಕೀರ್ಣದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರಕ್ಕೆ ನ್ಯಾಯಾಧೀಶರು ಅಪಮಾನ ಮಾಡಿದ್ದಾರೆ ಎನ್ನುವ ಆರೋಪದ ಘಟನೆಯು ಎಲ್ಲೆಡೆ ಹಬ್ಬಿತ್ತು.
RAICHUR: ತುಂಗಭದ್ರಾ ಕಾಲುವೆಯಲ್ಲಿ ರಾತ್ರಿ ವೇಳೆ ನೀರು ಕಳ್ಳತನ: ಸುತ್ತಮುತ್ತ 144 ಸೆಕ್ಷನ್ ಜಾರಿ
ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ಮಂಡನೆ, ಶ್ರೀರಾಮಸೇನೆ(Sriramasene) ಮುಖಂಡನ ಪ್ರಮೋಚನಕಾರಿ ಭಾಷಣೆ ಮಾಡಿದ ಶ್ರೀರಾಮಸೇನೆ ಮುಖಂಡನ ಬಂಧನ, ನಗರಸಭೆ ಕಲುಷಿತ ನೀರು ಕುಡಿದು ನಿವಾಸಿಗಳ ಸಾವು, ಕುರುಕುಂದಾದಲ್ಲಿ ವಾಲ್ಮೀಕಿ ಪುತ್ತಳಿ ಅನಾವರಣಕ್ಕೆ ಕಿಚ್ಚ ಸುದೀಪ್ ಆಗಮಿಸಿದ್ದು, ಏಮ್ಸ್‌ಗಾಗಿ ಅನಿರ್ದಿಷ್ಟಾವಧಿ ಹೋರಾಟ ಆರಂಭ, ವಾಡಿಕೆಗಿಂತ ಹೆಚ್ಚು ಮಳೆ, ನದಿಪಾತ್ರಗಳಲ್ಲಿ ಪದೇ ಪದೆ ಪ್ರವಾಹ ಭೀತಿ, ಮಳೆ ಹಾನಿ, ರಾಜಕೀಯ ಪಕ್ಷಗಳಿಂದ ಚುನಾವಣೆ ಚಟುವಟಿಕೆಗಳ ಆರಂಭ, ಭಾರತ್ ಜೋಡೋ ಯಾತ್ರೆ, ಅಪಘಾತಗಳಲ್ಲಿ ಸಾವು ನೋವು, ರಾಜ್ಯದಲ್ಲಿಯೇ ಮೊದಲ ಝೀಕಾ ವೈರಸ್ ಪತ್ತೆ ಹೀಗೆ ಹತ್ತು ಹಲವು ವಿಶೇಷತೆಗಳಿಗೆ 2022 ಸಾಕ್ಷಿಯಾಗಿತ್ತು.
ಜಿಲ್ಲೆಯಲ್ಲಿ ನಡೆದ ಪ್ರಮುಖ ರಾಜಕೀಯ ಚಟುವಟಿಕೆಗಳು
- ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಯಚೂರು ಕೃಷಿ ವಿವಿ ಕಾರ್ಯಕ್ರಮದಲ್ಲಿ ಭಾಗಿ
- ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಚಾಲನೆ
- ಅರಕೇರಾ ಗ್ರಾಮದಲ್ಲಿ ಕಂದಾಯ ಮಂತ್ರಿ ಅರ್.ಅಶೋಕ ಗ್ರಾಮವಾಸ್ತವ್ಯ, ಜನರಿಂದ ಅಹವಾಲು ಸ್ವೀಕಾರ
- ರಾಯಚೂರಿನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ಭಾರತ್ ಜೋಡೋ ಯಾತ್ರೆ
2022ರ ಪ್ರಮುಖ ಘಟನೆಗಳು
ಜ.26 ರಾಯಚೂರು ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಗಣರಾಜ್ಯೋತ್ಸವ ದಿನಾಚರಣೆ ವೇಳೆ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆರವುಗೊಳಿಸಿದ್ದನ್ನು ಖಂಡಿಸಿ ವ್ಯಾಪಕ ವಿರೋಧ
ಫೆ.24 ರಾಯಚೂರು ನವೋದಯ ವೈದ್ಯಕೀಯ ವಿಜ್ಞಾನ ಸಂಸ್ಥೆ 371 ಜೆ ಮೀಸಲಾತಿಯಡಿ ಸೀಟು ಹಂಚಿಕೆ ಮಾಡಲಾಗುವುದಿಲ್ಲ ಎಂದು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ವಿರೋಧ, ಪ್ರತಿಭಟನೆ
ಮಾ.4 ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ ಶುಕ್ರವಾರ ನಡೆದ ರಾಯರ 401ನೇ ಪಟ್ಟಾಭಿಷೇಕ ಮಹೋತ್ಸವದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆ ಪಾಲ್ಗೊಂಡಿದ್ದರು. ಇದೇ ಕಾರ್ಯಕ್ರಮದಲ್ಲಿ ನಟ ಸುದೀಪ್ ಕೂಡ ಆಗಮಿಸಿ ರಾಯರ ದರ್ಶನ ಪಡೆದರು.
ಮಾ.19 ರಾಯಚೂರು ನಗರಸಭೆ ಅಧ್ಯಕ್ಷ ಈ.ವಿನಯಕುಮಾರ್ ವಿರುದ್ಧ ಅವಿಶ್ವಾಸ ಮಂಡನೆ
ಏ.17 ಪ್ರಚೋದನಕಾರಿ ಹೇಳಿಕೆ ಶ್ರೀರಾಮಸೇನೆ ಮುಖಂಡರ ಬಂಧನ
ಏ.27 ಕುರುಕುಂದ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಹಾಗೂ ವೀರ ಮದಕರಿ ನಾಯಕರ ಪ್ರತಿಮೆ ಅನಾವರಣ ಮಾಡಲು ಆಗಮಿಸಿದ್ದ ನಟ ಕಿಚ್ಚ ಸುದೀಪ್
ಮೇ.12 ರಾಯಚೂರು ಏಮ್ಸ್ ಹೋರಾಟ ಸಮಿತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಅನಿರ್ದಿಷ್ಟಾವಧಿ ಧರಣಿ ಆರಂಭ
ಮೇ.30 ಕಲುಷಿತ ನೀರು ಸೇವಿಸಿ ರಾಯಚೂರು ನಗರದ ಮಲ್ಲಮ್ಮ ಸಾವಿನ ಪ್ರಕರಣ. ಒಟ್ಟು ಏಳು ಜನರು ಸಾವನ್ನಪ್ಪಿದ ದುರ್ಘಟನೆ.
ಜು.2 ಮಾನ್ವಿ ತಾಲೂಕಿನ ವಲ್ಕಂದಿನ್ನಿ ಮತ್ತು ಜೂಕೂರ ಗ್ರಾಮಗಳಲ್ಲಿ ಕಲುಷಿತ ನೀರು ಸೇವಿಸಿ 40 ಜನರಿಗೆ ವಾಂತಿಭೇದಿ.
ಜು.7 ರಾಯಚೂರು ಜಿಪಂ ಸಿಇಒ ಹುದ್ದೆಗೆ ನೂರ್ ಜಹಾರ್ ಖಾನಂ ಅವರನ್ನು ನೇಮಕ ಆದೇಶವನ್ನು ಕೆಎಟಿ ರದ್ದುಗೊಳಿಸಿ ಆದೇಶ.
ಆ.10 ಮಂತ್ರಾಲಯದಲ್ಲಿ ಕೋವಿಡ್ ಬಳಿಕ ಅದ್ಧೂರಿಯಾಗಿ ಆರಾಧನಾ ಮಹೋತ್ಸವ ಆರಂಭ
ಆ.25 ತುಮಕೂರಿನ ಕಳ್ಳಂಬೆಳ್ಳ ಹತ್ತಿರ ಸಂಭವಿಸಿದ ಅಪಘಾತದಲ್ಲಿ ರಾಯಚೂರಿನ ಒಂಬತ್ತು ಕೂಲಿ ಕಾರ್ಮಿಕರು ಸಾವು
ಆ.27 ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಯಚೂರು ಕೃಷಿ ವಿವಿ ಕಾರ್ಯಕ್ರಮದಲ್ಲಿ ಭಾಗಿ
ಸೆ.6 ರಾಯಚೂರು ಜಿಲ್ಲೆಯಾದ್ಯಂತ ಸುರಿದ ನಿರಂತರ ಮಳೆಯಿಂದಾಗಿ .73 ಕೋಟಿ ಹಾನಿ
ಸೆ.19 ಸೆಲ್ಫಿ ತೆಗೆದುಕೊಳ್ಳಲು ಹೋಗಿ ಟಿಎಲ್‌ಬಿಸಿ ಕಾಲುವೆಯಲ್ಲಿ ಬಿದ್ದು ರಾಯಚೂರು ನಗರದ ವಿದ್ಯಾರ್ಥಿಗಳ ಸಾವು
ಸೆ.27 ರಾಯಚೂರು ನಗರದಲ್ಲಿ ಪಿಎಫ್‌ಐ ಮುಖಂಡರಿಬ್ಬರ ಬಂಧನ, ಗಲಾಟೆ
ಸೆ.30 ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ಜೆಡಿಎಸ್ ಸಮಾವೇಶ
ಅ.6 ಜಿಲ್ಲೆಯಲ್ಲಿ ಒಂದೇ ದಿನ 2 ಕೊಲೆ, ಲಿಂಗಸುಗೂರಿನ ಕೋಠಾ-ಸಿರವಾರದ ಮಲ್ಲಟದಲ್ಲಿ ಘಟನೆ
ಅ.11 ರಾಯಚೂರು ತಾಲೂಕಿನ ಗಿಲ್ಲೆಸುಗೂರಿನಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆಗೆ ಚಾಲನೆ, ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿ ಸಚಿವರು, ಸಂಸದರು, ಶಾಸಕರು ಭಾಗಿ
ಅ.15 ಅರಕೇರಾ ಗ್ರಾಮದಲ್ಲಿ ಕಂದಾಯ ಮಂತ್ರಿ ಅರ್.ಅಶೋಕ ಗ್ರಾಮವಾಸ್ತವ್ಯ, ಅರಕೇರಾ ಗ್ರಾಮ ತಾಲೂಕು ಘೋಷಣೆ, ಹಲವು ಅಭಿವೃದ್ಧಿ ಕೆಲಸಗಳಿಗೆ ಚಾಲನೆ, ಜನರಿಂದ ಅಹವಾಲು ಸ್ವೀಕಾರ
ಅ.17 ಆರ್ಟಿಪಿಎಸ್ ಗುತ್ತಿಗೆ ಕಾರ್ಮಿಕ ಸಣ್ಣ ಸೂಗಪ್ಪ (ಸುನೀಲ್) ಅವರಿಂದ ಚಿಮಣಿ ಮೇಲತ್ತಿ ಆತ್ಮಹತ್ಯೆ ಬೆದರಿಕೆ, ಲೈವ್ ವಿಡಿಯೋ.
ಅ.21 ರಿಂದ 23ರವರೆಗೆ ರಾಯಚೂರಿನಲ್ಲಿ ನಡೆದ ಭಾರತ ಜೋಡೋ ಯಾತ್ರೆ
ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ರಾಹುಲ್ ಗಾಂಧಿ ಭೇಟಿ. ನಂತರ ತುಂಗಭದ್ರಾ ನದಿ ದಾಟಿ ಕರ್ನಾಟಕ ಪ್ರವೇಶ, ಗಿಲ್ಲೆಸುಗೂರು, ರಾಯಚೂರು ನಗರದಲ್ಲಿ ಬಹಿರಂಗ ಸಭೆ, ಲಕ್ಷಾಂತರ ಸಂಖ್ಯೆಯಲ್ಲಿ ಜನರು ಭಾಗಿ, ಜನಸ್ತೋಮ ಕಂಡು ಎಲ್ಲರೂ ಅಚ್ಚರಿ, ಜೋಡಿ ಯಾತ್ರೆಗೆ ಅದ್ಧೂರಿ ಬೀಳ್ಕೊಡುಗೆ
ಅ.23 ಮಾಜಿ ಸಚಿವ ಸುಧೀಂದ್ರರಾವ್ ಕಸಬೆ ನಿಧನ
ಅ.24 ಸಾರಿಗೆ ಬಸ್ ಚಲಾಯಿಸುವಾಗ ಹೃದಯಘಾತವಾಗಿ ರಾಜಹಂಸ ಬಸ್ ಚಾಲಕ ನಾರಾಯಣಗೌಡ ಸಾವು, ಲಿಂಗಸುಗೂರು ತಾಲೂಕಿನ ಬೆಳಗಾಂ-ರಾಯಚೂರು ಹೆದ್ದಾರಿಯ ಚಿಕ್ಕಹೆಸರೂರು ಗ್ರಾಮದಲ್ಲಿ ಸಮೀಪ ನಡೆದ ಘಟನೆ, 34 ಪ್ರಯಾಣಿಕರಿದ್ದ ಬಸ್ಸಿನಲ್ಲಿ 14 ಜನರಿಗೆ ಸಣ್ಣ-ಪುಟ್ಟಗಾಯ
ಅ.29 ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಹೊಸ ಕುಲಪತಿಯನ್ನಾಗಿ ಡಾ.ಎಂ.ಹನುಮಂತಪ್ಪ ಅವರ ನೇಮಕ.
ನ.12 ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಪಾದಯಾತ್ರೆ, ಧರ್ಮ ಸಭೆ
ನ.21 ದೇವದುರ್ಗ ಪಟ್ಟಣ ಸೇರಿದಂತೆ ತಾಲೂಕಿನ ನಾಲ್ಕು ಕಡೆ ಅನಧೀಕೃತವಾಗಿ ಕಸಾಯಿ ಖಾನೆಗಳಿಗೆ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನಗಳ ಮೇಲೆ ದಾಳಿ, 7 ಜನರ ಬಂಧನ 3 ವಾಹನ ವಶಕ್ಕೆ ಪಡೆದುಕೊಂಡು, 58 ಜಾನುವಾರುಗಳ ರಕ್ಷಣೆ ಮಾಡಿದ ಪೊಲೀಸರು.
ನ.21 ಮಾನ್ವಿ ತಾಲೂಕಿನ ನೀರಮಾನ್ವಿ ಗ್ರಾಮದ ತೃತೀಯ ಲಿಂಗಿ ಅಶ್ವತ್ಥಾಮ(ಪೂಜಾ) ಶಿಕ್ಷಕರಾಗಿ ಆಯ್ಕೆ
ನ.28 ರಾಯಚೂರು ನಗರದಲ್ಲಿ ಹೂಡಿರುವ ಏಮ್ಸ್ ಹೋರಾಟಕ್ಕೆ 200 ನೇ ದಿನ, ಬೃಹತ್ ಪ್ರತಿಭಟನಾ ಮೆರವಣಿಗೆ
ಡಿ.03 ರಾಯಚೂರಿಗೆ ಇದೇ ಮೊದಲ ಬಾರಿಗೆ ಚಿತ್ರನಟ ಡಾ.ಶಿವರಾಜ ಕುಮಾರ ಆಗಮನ, ಮಂತ್ರಾಲಯಕ್ಕೆ ಭೇಟಿ ರಾಯರ ದರ್ಶನ, ವೇದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿ
ಡಿ.03 ಸಿರವಾರ ಮಹಿಳಾ ಪಿಎಸ್‌ಐ ಕಿರುಕುಳ ತಾಳಲಾರದೇ ಡೆತ್‌ನೋಟ್ ಬರೆದಿಟ್ಟು ತಾಯಣ್ಣ ನೀಲಗಲ್ ಎಂಬ ಯುವಕ ನಾಪತ್ತೆ, ಎರಡು ದಿನಗಳ ಬಳಿಕ ಬಳ್ಳಾರಿಯಲ್ಲಿ ಪತ್ತೆ, ಯುವಕನ ದೂರನ್ನಾಧರಿಸಿ ಪಿಎಸ್‌ಐರನ್ನು (ಡಿ.18 ರಂದು) ಅಮಾನತುಗೊಳಿಸಿದ ಎಸ್ಪಿ
ಡಿ.12 ಮಾನ್ವಿ ತಾಲೂಕಿನ ಕೋಳಿ ಕ್ಯಾಂಪಿನ (ಸಣ್ಣಹಳ್ಳಿ) ಐದು ವರ್ಷದ ಬಾಲಕಿಯಲ್ಲಿ ಝೀಕಾ ವೈರಸ್ ಪತ್ತೆಯಾಗಿದ್ದು, ರಾಜ್ಯದಲ್ಲಿಯೇ ಇದು ಮೊದಲ ಝೀಕಾ ವೈರಸ್ ಪ್ರಕರಣ, ಕೇಂದ್ರ ವೈದ್ಯರ ತಂಡ ದೌಡು, ಎಲ್ಲೆಡೆ ಮುಂಜಾಗೃತಾ ಕ್ರಮ
Raichur: ತುಂಗಭದ್ರಾ ಕಾಲುವೆ ನೀರಿಗಾಗಿ ರಕ್ತದಲ್ಲಿ ಸಿಎಂಗೆ ಪತ್ರ ಬರೆದು ರೈತರಿಂದ ಹೋರಾಟ
ಡಿ.15 ಲಿಂಗಸುಗೂರು ತಾಲೂಕಿನ ಹೂನೂರು ಗ್ರಾಮದಲ್ಲಿ 5 ರು. ಕುರುಕಲು ಪ್ಯಾಕೇಟ್‌ನಲ್ಲಿ 500 ರು. ಪತ್ತೆ ಇಡೀ ರಾಜ್ಯಮಟ್ಟದ ಗಮನ ಸೆಳೆದ ಘಟನೆ
ಅಪರಾಧ ದುರಂತಗಳು 2022
- ಪ್ರಚೋದನಕಾರಿ ಹೇಳಿಕೆ ಶ್ರೀರಾಮಸೇನೆ ಮುಖಂಡರ ಬಂಧನ
- ಸಿರವಾರ ಪಿಎಸ್‌ಐ ಕಿರುಕುಳ ತಾಳಲಾರದೆ ಯುವಕ ಡೆತ್‌ನೋಡ್ ಬರೆದಿಟ್ಟು ನಾಪತ್ತೆ
- ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದ 7 ಜನರ ಬಂಧನ, 58 ಜಾನುವಾರುಗಳ ರಕ್ಷಣೆ
- ಜಿಲ್ಲೆಯಲ್ಲಿ ಒಂದೇ ದಿನ 2 ಕೊಲೆ, ಲಿಂಗಸುಗೂರಿನ ಕೋಠಾ-ಸಿರವಾರದ ಮಲ್ಲಟದಲ್ಲಿ ಘಟನೆ
- ರಾಯಚೂರು ನಗರದಲ್ಲಿ ಪಿಎಫ್‌ಐ ಮುಖಂಡರಿಬ್ಬರ ಬಂಧನ
ಸಾವು ನೋವು 2022
- ಸಾರಿಗೆ ಬಸ್ ಚಲಾಯಿಸುವಾಗ ಹೃದಯಘಾತವಾಗಿ ಬಸ್ ಚಾಲಕ ನಾರಾಯಣಗೌಡ ಸಾವು, 34 ಪ್ರಯಾಣಿಕರಿದ್ದ ಬಸ್ಸಿನಲ್ಲಿ 14 ಜನರಿಗೆ ಸಣ್ಣ-ಪುಟ್ಟಗಾಯ
- ಮಾಜಿ ಸಚಿವ ಸುಧೀಂದ್ರರಾವ್ ಕಸಬೆ ನಿಧನ
- ಸೆಲ್ಫಿ ತೆಗೆದುಕೊಳ್ಳಲು ಹೋಗಿ ಟಿಎಲ್‌ಬಿಸಿ ಕಾಲುವೆಗೆ ಬಿದ್ದು ರಾಯಚೂರು ನಗರದ ವಿದ್ಯಾರ್ಥಿಗಳ ಸಾವು
- ತುಮಕೂರಿನ ಕಳ್ಳಂಬೆಳ್ಳ ಹತ್ತಿರ ಸಂಭವಿಸಿದ ಅಪಘಾತದಲ್ಲಿ ರಾಯಚೂರಿನ 9 ಕೂಲಿ ಕಾರ್ಮಿಕರು ಸಾವು
- ಕಲುಷಿತ ನೀರು ಸೇವಿಸಿ ರಾಯಚೂರು ನಗರದ ಮಲ್ಲಮ್ಮ ಸಾವಿನ ಪ್ರಕರಣ. ಒಟ್ಟು 7 ಜನರು ಸಾವನ್ನಪ್ಪಿದ ದುರ್ಘಟನೆ
- 29ಕೆಪಿಆರ್‌ಸಿಆರ್02:ರಾಯಚೂರಿನಲ್ಲಿ ಸಾಗಿದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ ಜೋಡಿ ಯಾತ್ರೆ.