Asianet Suvarna News Asianet Suvarna News

ಫೆ.4ಕ್ಕೆ ಯಲ್ಲಾಪುರ ಕನ್ನಡ ಸಾಹಿತ್ಯ ಸಮ್ಮೇಳನ: ಸಚಿವ ಶಿವರಾಮ ಹೆಬ್ಬಾರ

 ಫೆ.4ರಂದು ಯಲ್ಲಾಪುರದ ಆನಗೋಡಿನಲ್ಲಿ ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರಕಟಿಸಿದರು.

Yallapur Kannada Sahitya Sammelna on Feb 4 says shivaram hebbar rav
Author
First Published Dec 25, 2022, 9:54 AM IST

ಯಲ್ಲಾಪುರ (ಡಿ.25) : ಫೆ.4ರಂದು ಯಲ್ಲಾಪುರದ ಆನಗೋಡಿನಲ್ಲಿ ಒಂದು ದಿನದ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಪ್ರಕಟಿಸಿದರು. ಅವರು ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಿದ್ಧತೆಯ ಹಿನ್ನೆಲೆಯಲ್ಲಿ ತಾಲೂಕಾ ಕ.ಸಾ.ಪ ಘಟಕ ಹಮ್ಮಿಕೊಂಡಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಸಮ್ಮೇಳನವನ್ನು ಅದ್ಧೂರಿಯಾಗಿ, ಸುವ್ಯವಸ್ಥಿತವಾಗಿ ಆಚರಿಸಬೇಕು. ಈ ಸಮ್ಮೇಳನಕ್ಕೆ ಶಾಸಕನಾಗಿ, ಸಚಿವನಾಗಿ ಅಗತ್ಯವಿರುವ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದ ಅವರು, ಸಮ್ಮೇಳನದ ವೆಚ್ಚಕ್ಕಾಗಿ ತಾನು .1 ಲಕ್ಷ ನೆರವು ನೀಡುವುದಾಗಿ ತಿಳಿಸಿದರು.

Kannada Sahitya Sammelana: ಹಾವೇರಿ ಸಾಹಿತ್ಯ ಸಮ್ಮೇಳನದಲ್ಲಿ 33 ಗೋಷ್ಠಿಗಳು

ಸಮ್ಮೇಳನಕ್ಕೆ ಅಂದಾಜು .2.5 ಲಕ್ಷ ವೆಚ್ಚ ಆಗಬಹುದೆಂದು ಸಭೆಯಲ್ಲಿ ಅಂದಾಜಿಸಲಾಯಿತು. ಸಮ್ಮೇಳನದ ತಯಾರಿಗಾಗಿ ವಿವಿಧ ಸಮಿತಿ ಹಾಗೂ ಉಪ ಸಮಿತಿಗಳನ್ನು ರಚಿಸಿ, ಶೀಘ್ರವೇ ಕಾರ್ಯಪ್ರವೃತ್ತರಾಗುವ ದಿಸೆಯಲ್ಲಿ ಅನೇಕರು ತಮ್ಮ ಸಲಹೆ, ಸೂಚನೆಗಳನ್ನು ನೀಡಿದರು. ಈ ಬಾರಿಯ ಸಮ್ಮೇಳನದ ಕಾರ್ಯಕ್ರಮದಲ್ಲಿ ಗಮಕ ವಾಚನಕ್ಕೆ ಒಂದು ಅವಕಾಶ ನೀಡುವಂತೆ ಮುಕ್ತಾ ಶಂಕರ ವಿನಂತಿಸಿದರು.

ಪಂಚಾಯತ್‌ ರಾಜ್‌ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ತಹಶೀಲ್ದಾರ ಶ್ರೀಕೃಷ್ಣ ಕಾಮ್ಕರ್‌, ಕ.ಸಾ.ಪ ಘಟಕಾಧ್ಯಕ್ಷ ಸುಬ್ರಹ್ಮಣ್ಯ ಭಟ್ಟ, ನಿವೃತ್ತ ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ, ಶ್ರೀರಂಗ ಕಟ್ಟಿ, ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಪ್ರಮುಖರಾದ ಎಂ.ಆರ್‌.ಹೆಗಡೆ ಕುಂಬ್ರಿಗುಡ್ಡೆ, ವೇಣುಗೋಪಾಲ ಮದ್ಗುಣಿ, ಪ್ರಕಾಶ ನಾಯ್ಕ, ದಿಲೀಪ ದೊಡ್ಮನಿ, ಸುಬ್ರಾಯ ಬಿದ್ರೇಮನೆ, ರಾಮು ನಾಯ್ಕ, ಡಾ.ರವಿ ಭಟ್ಟಬರಗದ್ದೆ, ಉಮೇಶ ಭಾಗ್ವತ, ಟಿ.ವಿ.ಕೋಮಾರ ಮತ್ತಿತರರು ಉಪಸ್ಥಿತರಿದ್ದು, ವಿವಿಧ ಸಲಹೆ, ಸೂಚನೆಗಳನ್ನು ನೀಡಿದರು. ಶಿಕ್ಷಕ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿದರು.  ಹಾವೇರಿ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

Follow Us:
Download App:
  • android
  • ios