Asianet Suvarna News Asianet Suvarna News

ಫೆವಿಕಾಲ್ ಜಾಹೀ​ರಾ​ತಿ​ನಲ್ಲಿ ಯಕ್ಷ​ಗಾ​ನಕ್ಕೆ ಅಪ​ಚಾರ..!

ಫೆವಿ​ಕಾಲ್ ಜಾ​ಹೀ​ರಾ​ತಿ​ನಲ್ಲಿ ಯಕ್ಷ​ಗಾ​ನದ ದೃಶ್ಯ​ಗ​ಳನ್ನು ಅನು​ಚಿ​ತ​ವಾಗಿ ಬಳ​ಸಿ​ದ್ದಾರೆ ಎಂಬ ಆರೋಪ ಕೇಳಿ ಬಂದಿದೆ

Yakshagana coastal art form used in fevicol advertisement dpl
Author
Bangalore, First Published Nov 22, 2020, 1:01 PM IST

ಮಂಗಳೂರು(ನ.22): ಫೆವಿ​ಕಾಲ್‌ ಸಂಸ್ಥೆ​ಯ​ವರು ತಮ್ಮ ಅಂಟಿ​ನ ಉತ್ಪ​ನ್ನದ ಟಿ.ವಿ.​ಜಾ​ಹೀ​ರಾ​ತಿ​ನಲ್ಲಿ ಯಕ್ಷ​ಗಾ​ನದ ದೃಶ್ಯ​ಗ​ಳನ್ನು ಅನು​ಚಿ​ತ​ವಾಗಿ ಬಳ​ಸಿ​ದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಶನಿವಾರ ಈ ಜಾಹೀ​ರಾ​ತಿನ ತುಣುಕು ಜಾಲ​ತಾ​ಣ​ಗ​ಳಲ್ಲಿ ವೈರಲ್‌ ಆಗಿದ್ದು, ಇದು ಯಕ್ಷ​ಗಾ​ನದ ಆಶ​ಯ​ಗ​ಳಿಗೆ ವಿರು​ದ್ಧ​ವಾ​ಗಿದ್ದು, ಯಕ್ಷ​ಗಾ​ನ​ವನ್ನು ಅವ​ಹೇ​ಳ​ನ​ಕಾ​ರಿ​ಯಾಗಿ ಬಳ​ಸ​ಲಾ​ಗಿದೆ ಎಂದು ಅಭಿ​ಪ್ರಾಯ ವ್ಯಕ್ತ​ವಾ​ಗಿ​ದೆ.

2 ವರ್ಷ ಆಗ್ತಾ ಬಂದ್ರೂ ಪತ್ತೆಯಾಗದ ಮೀನುಗಾರರು: ಕುಟುಂಬಕ್ಕೆ 10 ಲಕ್ಷ ರು. ಪರಿಹಾರ

ಕಥಕ್ಕಳಿಯ ಹಿಮ್ಮೇಳದ ಸದ್ದು, ಯಕ್ಷಗಾನದ ರಂಗಸ್ಥಳದಲ್ಲಿ ತೆಂಕಿತಿಟ್ಟಿನ ಪ್ರದರ್ಶನ ಆರಂಭ, ಇದೇ ವೇಳೆ ರಂಗಸ್ಥಳದ ಸಿಂಹಾಸನದಲ್ಲಿ ವೇಷಧಾರಿ ಕುಳಿತುಕೊಳ್ಳುವಾಗ ಅದು ಕುಸಿದು ಬೀಳುತ್ತದೆ. ಆಗ ಸಿಟ್ಟಿನಿಂದ ವೇಷಧಾರಿ ಅರಚುತ್ತಾ ಎದುರು ವೇಷಧಾರಿ ಸಹಿತ ಹಿಮ್ಮೇಳದವರನ್ನು ಅಟ್ಟಾಡಿಸುತ್ತಾನೆ.

ಈ ಮೂಲಕ ಸಂಸ್ಥೆಯ ಅಂಟಿನ ಉತ್ಪ​ನ್ನಕ್ಕೆ ಯಾವುದೂ ಸರಿಸಾಟ ಇಲ್ಲ ಎಂಬುದನ್ನು ಸಾರುವ ಪ್ರಯತ್ನ ನಡೆಸಲಾಗಿದೆ. ಜಾಹೀ​ರಾ​ತಿ​ನಲ್ಲಿ ಕಾಣಿ​ಸಿ​ಕೊಂಡ ಕಲಾ​ವಿ​ದರ ಪೈಕಿ ಕೆಲ​ವರು ವೃತ್ತಿಪರ ಕಲಾವಿದರು ಎಂದು ನೆಟ್ಟಿ​ಗರು ಗುರು​ತಿ​ಸಿ​ದ್ದಾರೆ. ಜಾಹಿರಾತನ್ನು ಕೂಡಲೇ ನಿರ್ಬಂಧಿಸುವಂತೆ ಕಲಾಪ್ರೇಮಿಗಳು ಆಗ್ರಹಿಸಿದ್ದಾ​ರೆ.

Follow Us:
Download App:
  • android
  • ios