ಮಂಡ್ಯ[ಆ.15]  ಕೆಆರ್‌‌ಎಸ್ ಅಣೆಕಟ್ಟೆಗೆ ಯದುವೀರ್ ದಂಪತಿ ಭೇಟಿ ನೀಡಿದ್ದರು. ಯದುವೀರ್ ಗೆ ಪತ್ನಿ ತ್ರಿಷಿಕಾ ಕುಮಾರಿ ಸಾಥ್ ನೀಡಿದ್ದು ಅಣೆಕಟ್ಟೆ ತುಂಬಿರುವ ಹಿನ್ನಲೆಯಲ್ಲಿ ಪರಿಸರ ಆಸ್ವಾದಿಸಿದರು.

ಯದುವೀರ್ ತಾತ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ನಿರ್ಮಿಸಿರುವ ಕೃಷ್ಣರಾಜ ಸಾಗರ ಅಣೆಕಟ್ಟೆಯ ಸೌಂದರ್ಯ ಸವಿದರು.  ಹೊರ ಅರಿವು ಹೆಚ್ಚಳದಿಂದ ಆಗಿರುವ ಸಮಸ್ಯೆ ಬಗ್ಗೆಯೂ ಮಾಹಿತಿ ಪಡೆದ ಯದುವೀರ್‌ಗೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿವರ ನೀಡಿದರು.

ರೆಬಲ್ ಸ್ಟಾರ್ ಭೇಟಿ: ರೆಬಲ್ ಸ್ಟಾರ್ ಅಂಬರೀಶ್ ಸಹ ಕೆ ಆರ್ ಎಸ್ ಗೆ ಭೇಟಿ ನೀಡಿ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದಾರೆ.