Hijab Row: ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು: ಯದುವೀರ್‌

*  ರೈಲ್ವೆ ಕ್ಷೇತ್ರಕ್ಕೆ ಚಾಮರಾಜ ಒಡೆಯರ್ ಕೊಡುಗೆ ಅಪಾರ
*  ಒಡೆಯರ್ ಹೆಸರು ಪ್ರಸ್ತಾಪ ಆಗಿರುವುದೇ ಸಂತಸ
*  ಸರ್ಕಾರದ ಆದೇಶಕ್ಕೆ ಎಲ್ಲರೂ ಕಠಿಬದ್ಧರಾಗಿರಬೇಕು

Yaduveer Krishnadatta Wadiyar React on Hijab Row in Karnataka grg

ಮೈಸೂರು(ಫೆ.19): ಹಿಜಾಬ್(Hijab) ವಿಚಾರದಲ್ಲಿ ಸರ್ಕಾರದ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು. ಈಗಾಗಲೇ ಈ ಪ್ರಕರಣ ನ್ಯಾಯಾಲಯದಲ್ಲಿದೆ. ನ್ಯಾಯಾಲಯ(Court) ಹಾಗೂ ಸರ್ಕಾರದ ಆದೇಶಕ್ಕೆ ಎಲ್ಲರೂ ಕಠಿಬದ್ಧರಾಗಿರಬೇಕು. ಇದರಲ್ಲಿ ನನ್ನ ವೈಯಕ್ತಿಕ ಅಭಿಪ್ರಾಯ ಇಲ್ಲ ಅಂತ ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌(Yaduveer Krishnadatta Wadiyar) ತಿಳಿಸಿದ್ದಾರೆ.

ಟಿಪ್ಪು ಎಕ್ಸ್‌ಪ್ರೆಸ್‌ಗೆ(Tippu Express) ಚಾಮರಾಜ ಒಡೆಯರ್ ಹೆಸರು ಮರು ನಾಮಕರಣ ವಿಚಾರಕ್ಕೆ ಸಂಬಂಧಿಸಿದಂತೆ ಇಂದು(ಶನಿವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೈಲ್ವೆ ಕ್ಷೇತ್ರಕ್ಕೆ ಚಾಮರಾಜ ಒಡೆಯರ್(Chamaeraj Wadiyar) ಅವರ ಕೊಡುಗೆ ಅಪಾರವಾಗಿದೆ. ಒಡೆಯರ್ ಹೆಸರು ಪ್ರಸ್ತಾಪ ಆಗಿರುವುದೇ ಸಂತಸವಾಗಿದೆ ಅಂತ ಹೇಳಿದ್ದಾರೆ. 

Hijab Protest: ವಿದ್ಯಾರ್ಥಿಗಳ ಮೇಲೆ ಎಫ್‌ಐಆರ್‌, 58 ಮಂದಿ ಸಸ್ಪೆಂಡ್‌

ಸರ್ಕಾರ(Government of Karnataka) ಯಾವುದೇ ನಿರ್ಧಾರ ತೆಗೆದುಕೊಂಡ್ರು ನಮ್ಮ ಸಮ್ಮತಿ ಇದೆ. ಒಡೆಯರ್ ಕಾರ್ಯ ಮೆಚ್ಚಿ ಸಂಸದರು ಅವರ ಅಭಿಪ್ರಾಯ ಹೇಳಿದ್ದಾರೆ ಅಂತ ರಾಜವಂಶಸ್ಥ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದಾರೆ. 

ಯಾರು ಏನೇ ಹೇಳಿದರೂ ಧರ್ಮ ದೊಡ್ಡದಾಗಿ ಬೆಳೆಸಿ: ಯದುವೀರ

ಚಾಮರಾಜನಗರ: ಯಾರು ಏನೇ ಹೇಳಿದರೂ ಧರ್ಮವನ್ನು ದೊಡ್ಡಮಟ್ಟದಲ್ಲಿ ಬೆಳೆಸಬೇಕು, ಧರ್ಮ ಉಳಿಸಲು ಎಲ್ಲರೂ ಒಂದಾಗಬೇಕು. ಹಿಂದೂ ಧರ್ಮ ರಕ್ಷಣೆಗೆ ಮೈಸೂರು ಅರಮನೆಯು(Mysuru Palace) ಹಿಂದೆಯೂ ಸದಾ ಸಿದ್ಧವಾಗಿತ್ತು, ಈಗಲೂ ಸಿದ್ಧವಾಗಿದ್ದೇವೆ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಒಡೆಯರ್‌ ಹೇಳಿದ್ದರು. 

ಚಾಮರಾಜನಗರದ(Chamarajanagar) ನಂದಿ ಭವನದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಎಬಿವಿಪಿ(ABVP) 41ನೇ ರಾಜ್ಯ ಸಮ್ಮೇಳನದಲ್ಲಿ ಅವರು ಮಾತನಾಡಿ, ನಮ್ಮ ಸಮಾಜದಲ್ಲಿನ ಬಹುತೇಕ ಸಮಸ್ಯೆಗಳಿಗೆ ಹಿಂದೂ ಧರ್ಮದಲ್ಲೇ(Hinduism) ಪರಿಹಾರ-ಉತ್ತರವಿದೆ. ಆದ್ದರಿಂದ, ಧರ್ಮ ರಕ್ಷಣೆ ಇಂದಿತ ಅಗತ್ಯವಾಗಿದೆ. ಧರ್ಮ ರಕ್ಷಣೆಗೆ ಜಾತಿ-ಜಾತಿಗಳು ಒಗ್ಗಟ್ಟಾಗಬೇಕು ಎಂದು ಹೇಳಿದ್ದರು. 

ಜಯಚಾಮರಾಜ ಒಡೆಯರ್‌ ಹಿಂದು ಪರಿಷತ್‌ನ ಅಧ್ಯಕ್ಷರಾಗಿದ್ದರು. ಜೊತೆಗೆ ಬೇಸಗೆ ಅರಮನೆಯಲ್ಲಿ ವಿಎಚ್ಪಿ ಸಮ್ಮೇಳನವೂ ನಡೆದಿತ್ತು ಎಂದು ನೆನಪಿಸಿಕೊಂಡರು. ಸಮ್ಮೇಳನಕ್ಕೆ ಚಾಲನೆ ನೀಡಿದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಸೇರಿದಂತೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ಸರ್ಕಾರಗಳು ರೂಪಿಸಿರುವ ಹತ್ತಾರು ಚಾರಿತ್ರಿಕ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಹಾಗೂ ಈ ಬಗ್ಗೆ ಅರಿವು ಮೂಡಿಸುವ ಮಹತ್ವದ ಕೆಲಸವನ್ನು ಎಬಿವಿಪಿ ಮಾಡಬೇಕು. ಇದರಿಂದ ಸದೃಢ ಮತ್ತು ಆರೋಗ್ಯಪೂರ್ಣ ಸಮಾಜವನ್ನು ನಿರ್ಮಿಸಬಹುದಾಗಿದೆ ಎಂದು ತಿಳಿಸಿದರು.

Siddaramaiah vs Hindutva ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ!

ಸಮ್ಮೇಳನಾಧ್ಯಕ್ಷೆ ಬಾಗೇಶ್ರೀ, ಎಬಿವಿಪಿ ರಾಷ್ಟ್ರೀಯ ಅಧ್ಯಕ್ಷ ಛಗನ್ಭಾಯಿ ಪಟೇಲ್, ರಾಜ್ಯಾಧ್ಯಕ್ಷ ವೀರೇಶ್ಬಾಳೇಕಾಯಿ, ಮೈಸೂರು ವಿವಿ ಕುಲಪತಿ ಪ್ರೊ.ಹೇಮಂತ್ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಸುಬ್ಬಯ್ಯ ಅಯ್ಯಪ್ಪನ್ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಎಪಿಬಿವಿ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ವಿವಾದದ ಕಿಚ್ಚಿ ಹೆಚ್ಚಾಗುತ್ತಿದ್ದಂತೆಯೇ ಹೇಳಿಕೆ ಹಿಂಪಡೆದ ತೇಜಸ್ವಿ ಸೂರ್ಯ

ಬೆಂಗಳೂರು: ಮುಸ್ಲಿಂ(Muslim), ಕ್ರೈಸ್ತರನ್ನು (Christian) ವಾಪಸ್ ಹಿಂದೂ ಧರ್ಮಕ್ಕೆ (Hindu Religion) ಕರೆತರದೆ ಬೇರೆ ದಾರಿಯೇ ಇಲ್ಲ ಎಂದಿದ್ದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಇದೀಗ ತಮ್ಮ ಹೇಳಿಕೆಯನ್ನು ವಾಪಸ್ ಪಡೆದುಕೊಂಡ ಘಟನೆ ಕಳೆದ ವರ್ಷದ ಡಿ.27 ರಂದು ನಡೆದಿತ್ತು.  

ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ (Udupi Shri Krishna Matha) ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ (BJP national Yuva Morcha president) ತೇಜಸ್ವಿ ಸೂರ್ಯ ಹೇಳಿದ್ದರು. ನನ್ನ ಭಾಷಣದ ಕೆಲವು ಹೇಳಿಕೆಗಳು ವಿವಾದವನ್ನು ಸೃಷ್ಟಿಸಿವೆ. ಹಾಗಾಗಿ ಬೇಷರತ್ತಾಗಿ ಹೇಳಿಕೆಗಳನ್ನು ಹಿಂಪಡೆಯುತ್ತೇನೆ' ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೋಮವಾರ ಟ್ವೀಟ್ (Tweet) ಮಾಡಿದ್ದರು.
 

Latest Videos
Follow Us:
Download App:
  • android
  • ios