ಕಾಡು ಬೆಳೆಸಿ ನಾಡು ಉಳಿಸಿ ಪಣ ತೊಟ್ಟ ಗ್ರಾಮಸ್ಥರು, 5 ಸಾವಿರ ಸಸಿ ನೆಡಲು ಮೆರವಣಿಗೆ

ಯಾದಗಿರಿಯ  ತಾತಳಗೇರಾ ಗ್ರಾಮಸ್ಥರು ಗ್ರಾಮದ ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ 5 ಸಾವಿರ ಸಸಿಗಳನ್ನು ನೆಡುವ ಮೂಲಕ ಹಸಿರುಮಯ ಗ್ರಾಮಕ್ಕೆ ಪಣ ತೊಟ್ಟಿದ್ದಾರೆ.

Yadgir village people who have cultivated the forest and save the country campaign gow

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಜೂ.14): ಹಸಿರೇ ಉಸಿರು, ಕಾಡು ಬೆಳೆಸಬೇಕು ನಾಡನ್ನು ಉಳಿಸಬೇಕು ಎಂಬ ಧ್ಯೇಯದಂತೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮಸ್ಥರು ಗ್ರಾಮದ ಪ್ರತಿಯೊಬ್ಬರು ಸ್ವಯಂಪ್ರೇರಿತವಾಗಿ 5 ಸಾವಿರ ಸಸಿಗಳನ್ನು ನೆಡುವ ಮೂಲಕ ಹಸಿರುಮಯ ಗ್ರಾಮಕ್ಕೆ ಪಣ ತೊಟ್ಟಿದ್ದಾರೆ.

ಹಸಿರೇ ಉಸಿರು ತಾತಳಗೇರಾ ಗ್ರಾಮಸ್ಥರ ಸಂಕಲ್ಪ!
ಯಾದಗಿರಿ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಶುರುವಾಗಿದೆ. ಇದರಿಂದ ಭೂಮಿ ಸಂಪೂರ್ಣವಾಗಿ ಹದವಾಗಿದ್ದು, ಈಗ ರೈತರು ಬಿತ್ತನೆ ಸಹ ಭರ್ಜರಿಯಾಗಿ ಆರಂಭವಾಗಿದೆ. ಇದರಂತೆಯೇ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲೂಕಿನ ತಾತಳಗೇರಾ ಗ್ರಾಮದ ಜನರು ಹಸಿರುಮಯ ಗ್ರಾಮವನ್ನಾಗಿ ಪರಿವರ್ತಿಸಲು ಮುಂದಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಅತೀ ಹೆಚ್ಚು ತಾಪಮಾನ ಸಹ ದಾಖಲಾಗಿತ್ತು, ಅದನ್ನು ಅರಿತ ತಾತಳಗೇರಾ ಗ್ರಾಮಸ್ಥರು ಗೀಡ-ಮರಗಳನ್ನು ಬೆಳೆಸಲು ಹಾಗೂ ಸಂರಕ್ಷಿಸಲು ಮುಂದಾಗಿದ್ದಾರೆ. ಗ್ರಾಮದ ಪ್ರತಿಯೊಬ್ಬರು ಕಾಡು ಬೆಳೆಸಿ ನಾಡು ಉಳಿಸಿ ಅನ್ನೋ ವಾಕ್ಯವನ್ನ ಸಾಭೀತು ಮಾಡಲು ಸೈ ಎಂದಿದ್ದಾರೆ.

ಸಂಡೂರು ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನ ತುಕಾರಾಂ ರಾಜೀನಾಮೆ

ಐದು ಸಾವಿರ ಸಸಿ ನೆಡಲು ಗ್ರಾಮಸ್ಥರ ಪಣ!
ತಾತಳಗೇರಾ ಗ್ರಾಮದಲ್ಲಿ ಮನೆ ಮನೆಗೂ ಸಸಿ ನೆಡುವ ಅಭಿಯಾನ ಕೈಗೊಂಡಿದ್ದಾರೆ‌. ತಾತಳಗೇರಾ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸೆಡ್ಡು ಹೊಡೆದಿದ್ದಾರೆ. ಅರಣ್ಯ ಇಲಾಖೆ ಮಾಡಬೇಕಾಗಿರುವ ಕೆಲಸವನ್ನು ಗ್ರಾಮಸ್ಥರೇ ಮಾಡಿ ಮಾದರಿಯಾಗಿದ್ದಾರೆ. ಬೇಸಿಗೆಯಲ್ಲಿ ಬಿಸಿಲಿನ ಝಳ ಹೆಚ್ಚಾಗ್ತಿರೋದ್ರಿಂದ ಮಳೆಗಾಲದಲ್ಲಿ ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿದ್ದಾರೆ. ಗ್ರಾಮದಲ್ಲೇ ಐದು ಸಾವಿರ ಸಸಿ ನೆಡುವ ಪಣತೊಟ್ಟಿರುವ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸೆಡ್ಡು ಹೊಡೆದಂತ್ತಾಗಿದೆ. ಅಧಿಕ ಬಿಸಿಲಿನ ಝಳ‌ ತಪ್ಪಿಸಿಕೊಳ್ಳಲು ಈ ರೀತಿ ಪ್ಲಾನ್ ಮಾಡಿದ್ದಾರೆ.

ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲು, ಕೊಲೆ ಬೆದರಿಕೆ ಕೇಸ್‌ಗೆ ಮರು ಜೀವ!

ಜೊಡೆತ್ತಿನ ಚಕ್ಕಡಿಯಲ್ಲಿ ಸಸಿಗಳ ಭವ್ಯ ಮೆರವಣಿಗೆ
ಸುಮಾರು ಐದು ಸಾವಿರ ಸಸಿಗಳನ್ನು ನೆಡಲು ಮುಂದಾಗಿರುವ ತಾತಳಗೇರಾ ಗ್ರಾಮಸ್ಥರು ಸ್ವತಃ ತಾವೇ ಸಸಿ ನೆಡುವ ಸಂಕಲ್ಪಗೈದಿದ್ದಾರೆ. ಕೈಯಲ್ಲಿ ಸಲಿಕೆಯನ್ನು ಹಿಡಿದಿರುವ ಗಂಡಸರು. ಮಣ್ಣು ಎತ್ತಲು ಬುಟ್ಟಿ ಹೊತ್ತ ಮಹಿಳೆಯರು. ಮತ್ತೊಂದು ಕಡೆ ಜೊಡೆತ್ತಿನಲ್ಲಿ ಸಸಿಗಳನ್ನು ಇಟ್ಟು ಭವ್ಯ ಮೆರವಣಿಗೆ ಮಾಡಲಾಗ್ತಿದೆ. ತಾತಳಗೇರಾ ಈಡೀ ಗ್ರಾಮಸ್ಥರು ಬಹಳ ಸಂಭ್ರಮ-ಸಡಗರದಿಂದ ಮರ-ಗೀಡಗಳನ್ನು ಬೆಳೆಸಲು ಮುಂದಾಗಿದ್ದಾರೆ. ಇನ್ನು ಸರ್ಕಾರಿ ಅಧಿಕಾರಿಗಳು ಮಾಡಬೇಕಿದ್ದ ಕೆಲಸವನ್ನು ಗ್ರಾಮಸ್ಥರೇ ಮಾಡಿ ಬೇರೆಯವ್ರಿಗೂ ಮಾದರಿಯಾಗಿದ್ದಾರೆ. ತಾತಳಗೇರಾ ಗ್ರಾಮಸ್ಥರ ವಿನೂತನ ಅಭಿಯಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Latest Videos
Follow Us:
Download App:
  • android
  • ios