ಯಾದಗಿರಿ: ರಾಷ್ಟ್ರೀಯ ಪ್ರಶಸ್ತಿ ರೇಸ್‌ನಲ್ಲಿ ಯಾದಗಿರಿ ಆಸ್ಪತ್ರೆ..!
ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಇಲಾಖೆಯ ಲಕ್ಷ್ಯ ಯೋಜನೆ ಸಮರ್ಪವಾಗಿ ಅನುಷ್ಟಾನಗೊಂಡಿದೆ. ಇದರಿಂದ ಆರೋಗ್ಯ ಇಲಾಖೆಯ ಈಡೀ ರಾಷ್ಟ ಮಟ್ಟದ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ(ಜು.19): ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವ ಕಾಲದಲ್ಲಿ ನಾವಿದ್ದೀವಿ. ಆದ್ರೆ ಅತೀ ಹಿಂದುಳಿದ ಜಿಲ್ಲೆ ಎಂಬ ಎಂಬ ಕುಖ್ಯಾತಿ ಹೊಂದಿರುವ ಯಾದಗಿರಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡೆಸುವ ಲಕ್ಷ್ಯ ಯೋಜನೆಯಡೀ ರಾಜ್ಯದಿಂದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದೆ.
ರಾಷ್ಟ್ರೀಯ ಪ್ರಶಸ್ತಿ ರೇಸ್ ನಲ್ಲಿ ರಾಜನಕೋಳೂರು ಆಸ್ಪತ್ರೆ
ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳಿಗೆ ಕೋಟ್ಯಾಂತರ ರೂ. ಅನುದಾನ ಬಂದ್ರು ಅದನ್ನು ಸಮರ್ಪಕವಾಗಿ ಬಳಸದೇ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡುವಲ್ಲಿ ವಿಫಲವಾಗುತ್ತಿವೆ. ಹಾಗಾಗಿ ಜನರು ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ. ಆದ್ರೆ ಖಾಸಗಿ ಆಸ್ಪತ್ರೆ ಸೆಡ್ಡು ಹೊಡೆಯುವಂತಿದೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ರಾಜಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಆರೋಗ್ಯ ಇಲಾಖೆಯ ಲಕ್ಷ್ಯ ಯೋಜನೆ ಸಮರ್ಪವಾಗಿ ಅನುಷ್ಟಾನಗೊಂಡಿದೆ. ಇದರಿಂದ ಆರೋಗ್ಯ ಇಲಾಖೆಯ ಈಡೀ ರಾಷ್ಟ ಮಟ್ಟದ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ. ಇದರಿಂದ ಯಾದಗಿರಿ ಜಿಲ್ಲೆ ಅಷ್ಟೆಡ ಅಲ್ಲದೇ ಅಕ್ಕಪಕ್ಕದ ಜಿಲ್ಲೆಗಳಾದ ವಿಜಯಪುರ ಹಾಗೂ ರಾಯಚೂರು ಜಿಲ್ಲೆಯ ಹಲವು ಗರ್ಭಿಣಿಯರು ರಾಜಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬಂದು ಹೆರಿಗೆ ಮಾಡಿಸಿಕೊಳ್ತಾರೆ. ಯಾದಗಿರಿ ಜಿಲ್ಲೆಯ ರಾಜಕೋಳೂರು ಆಸ್ಪತ್ರೆ ಲಕ್ಷ್ಯ ಯೋಜನೆಯಡೀ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಜಿಲ್ಲೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದೆ. ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ 1998 ರಲ್ಲಿ ಸ್ಥಾಪನೆಯಾಗಿದೆ. ಆದ್ರೆ ಜನರು ಆಸ್ಪತ್ರೆಯತ್ತ ಬರಲು ಜನರು ಹಿಂದೇಟು ಹಾಕ್ತಿದ್ದರಂತೆ, ಮೊದಲ ಹತ್ತು ವರ್ಷ ಯಾವುದೇ ಹೆರಿಗೆ ಸೇವೆಯನ್ನು ಪ್ರಾರಂಭಿರಲಿಲ್ಲ. ನಂತರ 2008 ರಲ್ಲಿ ಹೆರಿಗೆ ಇದೇ ಆಸ್ಪತ್ರೆಯಲ್ಲಿ ಹೆರಿಗೆ ಮಾಡಲು ಪ್ರಾರಂಭ ಮಾಡಲಾಗಿತ್ತು. ಕಳೆದ ವರ್ಷ ಒಂದೇ ತಿಂಗಳಲ್ಲಿ 164 ಕ್ಕೂ ಹೆಚ್ಚು ಹೆರಿಗೆ ನಡೆದಿದ್ದು ದಾಖಲೆಯಾಗಿದೆ. ಸಾಮಾನ್ಯವಾಗಿ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಾಸರಿ 8-10 ಹೆರಿಗೆಗಳು ಆಗ್ತವೆ. ಆದ್ರೆ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸರಾಸರಿ 110 ಕ್ಕೂ ಅಧಿಕ ಹೆರಿಗೆ ಆಗಿವೆ. ಕಳೆದ ಐದು ವರ್ಷದಲ್ಲಿ 7258 ಸಾಮಾನ್ಯ ಹೆರಿಗೆ ಆಗಿವೆ.
ಕಾಳೆಬೆಳಗುಂದಿ ಭದ್ರಕಾಳೇಶ್ವರಿ ದೇಗುಲದಲ್ಲಿ ಕಳ್ಳತನ
ಲಕ್ಷ್ಯ ಯೋಜನೆಯಡಿ ರಾಜನಕೋಳೂರು ಆಸ್ಪತ್ರೆ ಟಾಪ್..!
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲಕ್ಷ್ಯ ಯೋಜನೆ ಹಲವು ನೀತಿನಿ-ಯಮಗಳನ್ನು ಹೊಂದಿದೆ. ರಾಜ್ಯದ ನಾಲ್ಕು ಬಾರಿ, ನಾಲ್ಕು ತಂಡ ರಾಜನಕೋಳೂರು ಆಸ್ಪತ್ರೆ ಬಂದು ಪರಿಶೀಲನೆ ನಡೆಸಿದೆ. ಈ ಆಸ್ಪತ್ರೆಯಲ್ಲಿ ಕೇವಲ ಒಬ್ಬ ವೈದ್ಯಾಧಿಕಾರಿಗಳಿದ್ದು, ಐದು ಜನ ಸ್ಟಾಪ್ ನರ್ಸ್ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲಕ್ಷ್ಯ ಯೋಜನೆ ಇದು ರಾಷ್ಟ್ರ ಮಟ್ಟದ ಯೋಜನೆಯಾಗಿದೆ. ಇದನ್ನು ಸಮರ್ಪವಾಗಿ ಅನುಷ್ಠಾನಗೊಳಿಸುವ ಆಸ್ಪತ್ರೆಗೆ ರಾಷ್ಟ್ರ ಮಟ್ಟದಲ್ಲಿ ಗುರುತಿಸಿ ಪ್ರಶಸ್ತಿಯನ್ನು ಸಹ ನೀಡಲಾಗುವುದು. ಅಂದಹಾಗೇ ಯಾದಗಿರಿ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಈಡೀ ರಾಜ್ಯದಲ್ಲಿ ಲಕ್ಷ್ಯ ಯೋಜನೆಯಲ್ಲಿ ಆಯ್ಕೆಯಾದ ಮೊದಲ ಆಸ್ಪತ್ರೆಯಾಗಿದೆ. ತಾಯಿ ಹಾಗೂ ಶಿಶುವಿಗೆ ವಿಶೇಷ ಕಾಳಜಿ ವಹಿಸುವುದು. ತಾಯಿ-ಶಿಶುವಿನ ಮರಣ ಪ್ರಮಾಣದಲ್ಲಿ ನಿಯಂತ್ರಣ ವಹಿಸುವುದು. ಉತ್ತಮ ಹಾಗೂ ಗುಣಾತ್ಮಕ ಆರೋಗ್ಯ ಸೇವೆಯ ಅಂಶಗಳನ್ನು ಈ ಲಕ್ಷ್ಯ ಯೋಜನೆ ಹೊಂದಿದೆ. ಈ ಲಕ್ಷ್ಯ ಯೋಜನೆಯ ಅಂಶಗಳನ್ನು ಅನುಷ್ಠಾನಗೊಳಿಸುವುವಲ್ಲಿ ಈ ರಾಜನಕೋಳೂರು ಆಸ್ಪತ್ರೆ ಮೊದಲ ಸ್ಥಾನ ಹೊಂದಿದೆ. ಜೊತೆಗೆ ವಿಶಿಷ್ಟ ಆರೋಗ್ಯ ಸೇವೆ ಒದಗಿಸುವಲ್ಲಿ ಮುಂಚೂಣಿಯಲ್ಲಿದೆ. ಸುರಕ್ಷಿತ ಹೆರಿಗೆ, ಉತ್ತಮ ಹೆರಿಗೆ ವಾರ್ಡ್ ಹಾಗೂ ಅಪರೇಷನ್ ಥಿಯೇಟರ್ ನ ಗುಣಮಟ್ಟವನ್ನು ಉತ್ತಮವಾಗಿ ಕಾಪಾಡಿಕೊಂಡಿದೆ. ಇದರಿಂದ ಇಲ್ಲಿಯವರೆಗೆ 15 ಸಾವಿರಕ್ಕೂ ಅಧಿಕ ಸುರಕ್ಷಿತ ಹೆರಿಗೆ ಮಾಡಲಾಗಿದೆ.
ಗ್ರಾಮೀಣ ಜನರ ಜೀವನಾಡಿ ರಾಜನಕೋಳೂರು ಆಸ್ಪತ್ರೆ
ಯಾದಗಿರಿಯ ರಾಜನಕೋಳೂರು ಪ್ರಾಥಮಿಕ ಆರೋಗ್ಯ ಕೇಂದ್ರ ಜಿಲ್ಲೆಯಲ್ಲದೇ ಅಕ್ಕಪಕ್ಕದ ಹಲವು ಜನರ ಜೀವನಾಡಿಯಾಗಿದೆ. ಯಾಕಂದ್ರೆ ಹೆರಿಗೆ ಅಂದ್ರೆ ಈ ಕಾಲದಲ್ಲಿ ಲಕ್ಷಾಂತರ ರೂ. ಖರ್ಚು ಆಗ್ತವೆ. ಜಿಲ್ಲೆಯಲ್ಲಿ ಹೆಚ್ಚಾಗಿ ಬಡವರಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಈ ರಾಜನಕೋಳೂರು ಆಸ್ಪತ್ರೆ ಆಸರೆಯಾಗಿದೆ. ಯಾವುದೇ ಖರ್ಚು ಇಲ್ಲದೇ ಉತ್ತಮ ಆರೋಗ್ಯ ಸೇವೆ ನೀಡುತ್ತಿದೆ. ಇರುವ ಕೆಲವೇ ಕೆಲವು ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಗುಣಮಟ್ಟದ ಸೇವೆ ಗ್ರಾಮೀಣ ಜನರಿಗೆ ನೀಡುತ್ತಿರುವುದು ವಿಶಿಷ್ಟವಾಗಿದೆ. ನಾವು ದೂರದ ವಿಜಯಪುರ ಜಿಲ್ಲೆಯಿಂದ ಬಂದಿದಿವಿ, ನನ್ನ ಮಗಳ ಎರಡು ಹೆರಿಗೆಯನ್ನು ಇದೇ ರಾಜನಕೋಳೂರು ಆಸ್ಪತ್ರೆಯಲ್ಲಿ ಮಾಡಿಸಿದ್ದೇನೆ. ನಾವು ಯಾವಾಗ ಬಂದ್ರು ಒಳ್ಳೆಯ ಸೇವೆಯ ನೀಡ್ತಾರೆ ಹಾಡಿ ಹೊಗಳಿದರು. ಒಟ್ನಲ್ಲಿ ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಹೊಂದಿದ ಯಾದಗಿರಿ ಜಿಲ್ಲೆ ರಾಷ್ಟ್ರ ಮಟ್ಟದಲ್ಲಿ ಸಾವಿರಾರು ಹೆರಿಗೆಯನ್ನು ಗುಣಾತ್ಮಕ ಸೇವೆಯಿಂದ ಗುರುತಿಸಿಕೊಂಡಿರುವುದ ಹೆಮ್ಮೆಯ ಸಂಗತಿ ಎಂದು ಗ್ರಾಮಸ್ಥ ಹೆಚ್.ಸಿ.ಪಾಟೀಲ್ ಹರ್ಷ ವ್ಯಕ್ತಪಡಿಸಿದರು.