ಬೆಂಗಳೂರು (ಆ.16): ಮಹಾ ಮಾನವತಾವಾದಿ ಬಸವಣ್ಣನಿಗೆ ಮಾರು ಹೋದ  ಯುವಕನೊಬ್ಬ ಜಂಗಮ ದೀಕ್ಷೆ ಪಡೆದಿದ್ದಾರೆ. 
ಯಾದಗಿರಿ ಜಿಲ್ಲೆಯ ಶಹಾಪೂರ ತಾಲೂಕಿನ ನಿಸಾರ್‌ ಅಹ್ಮದ್‌ ಎಂಬುವರೇ ಬಸವ ತತ್ವ ಪ್ರಚಾರಕ್ಕಾಗಿ ತಮ್ಮ ಜೀವನವನ್ನು ಜಂಗಮನಾಗಿ ಸವೆಯಲು ನಿರ್ಧರಿಸಿದವರು.

 ಹಲವು ವರ್ಷಗಳಿಂದ ಬಸವತತ್ವದ ಕುರಿತು ಅಧ್ಯಯನ ನಡೆಸಿ ಆರು ತಿಂಗಳ ಹಿಂದಷ್ಟೇ ಬಸವಕಲ್ಯಾಣದ ಬಸವ ಮಹಾಮನೆಯಲ್ಲಿ ಬಸವಪ್ರಭು ಸ್ವಾಮೀಜಿಗಳಿಂದ ಲಿಂಗ ದೀಕ್ಷೆ ಸ್ವೀಕರಿಸಿದ್ದರು. 

'ನವೀನ್‌ ತಂದು ನಮಗೆ ಕೊಡಿ' ಪೊಲೀಸರ ಬಳಿ ಇದೆಂಥ ಬೇಡಿಕೆ!...

ಇದೀಗ ಬಸವಕಲ್ಯಾಣದ ಬಸವಧರ್ಮ ಪೀಠದ ಬಸವ ಮಹಾಮನೆಯಲ್ಲಿ ಆ.15ರಂದು ಬಸವಧರ್ಮ ಪೀಠದ ಪೀಠಾಧ್ಯಕ್ಷರಾದ ಡಾ.ಮಾತೆ ಗಂಗಾದೇವಿ ಅವರು ಮೊಬೈಲ್‌ನಲ್ಲಿ ಬಸವ ತತ್ವದ ಪ್ರತಿಜ್ಞೆ ಬೋಧಿಸಿ ನಿಸಾರ್‌ ಅವರಿಗೆ ‘ಸದ್ಗುರು ನಿಜಲಿಂಗ ಸ್ವಾಮೀಜಿ’ ಎಂದು ನಾಮಕರಣ ಮಾಡಿ ಜಂಗಮ ದೀಕ್ಷೆ ನೀಡಿದ್ದಾರೆ.