ತುಮಕೂರು ಚುನಾವಣಾ ಕಣ ಸಜ್ಜಾಗುತ್ತಿದ್ದು, ಶಿರಾ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುತ್ತಿದೆ. ಬಿಜೆಪಿ ಟಿಕೆಟ್‌ಗಾಗಿ  ಹಲವರು ಬೇಡಿಕೆ ಇರಿಸಿದ್ದಾರೆ.

 ಶಿರಾ (ಸೆ.07): ಯಾದವ(ಗೊಲ್ಲ) ಸಮುದಾಯದ ಮುಖಂಡ ಡಿ.ಟಿ.ಶ್ರೀನಿವಾಸ್‌ಗೆ ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ನೀಡಬೇಕು ಎಂದು ಯಾದವ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ.

ಶಿರಾದ ಬಯಲು ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವಿವಿಧ ಸಮುದಾಯದ ಮುಖಂಡರು, ಬಿಜೆಪಿ ಕಾರ್ಯಕರ್ತರು ಸಭೆ ನಡೆಸಿ, ಯಾದವ (ಗೊಲ್ಲ) ಸಮುದಾಯವನ್ನು ಎಲ್ಲಾ ಪಕ್ಷಗಳು ಕಡೆಗಣಿಸಿವೆ. ಈ ಬಾರಿ ಶಿರಾ ತಾಲೂಕಿನ ಉಪಚುನಾವಣೆ ಇರುವುದರಿಂದ ಯಾದವ ಸಮುದಾಯದ ಡಿ.ಟಿ.ಶ್ರೀನಿವಾಸ್‌ಗೆ ಬಿಜೆಪಿ ಬಿ.ಫಾರಂ ನೀಡಬೇಕು ಎಂದು ಒತ್ತಾಯಿಸಿದರು.

7.5 ಮೀಸಲಾತಿಯಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದ ರಾಮುಲು, ಬಿಎಸ್‌ವೈಗೆ ಟೆನ್ಷನ್ ..

ಪಾವಗಡ ತಾಲೂಕಿನವರಾದ ಡಿ.ಟಿ.ಶ್ರೀನಿವಾಸ್‌ ಕೆಎಎಸ್‌ ಅಧಿಕಾರಿಯಾಗಿ ಪೋಲಿಸ್‌, ಕಂದಾಯ, ಬಿಸಿಎಂ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಯಾದವ(ಗೊಲ್ಲ) ಸಂಘ ಸ್ಥಾಪನೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಪದಾಧಿಕಾರಿಯಾಗಿದ್ದು, ಇವರಿಗೆ ಶಿರಾ ಉಪಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಸಭೆಯಲ್ಲಿ ಈರೇಗೌಡ, ಲೋಕೇಶ್‌ ಹೆಂದೊರೆ, ಅಭಿ ಬೆಜ್ಜಿಹಳ್ಳಿ, ಮಂಜುನಾಥ ಬಡಮಂಗನಹಟ್ಟಿ, ವೀರೇಂದ್ರ, ಶ್ರೀಧರ ಕರಿರಾಮನಹಳ್ಳಿ, ಚಿಕ್ಕಣ್ಣ, ಮಂಜು ಚಂಗಾವರ, ಗಂಗಾಧರ, ಶಶಿ ವಾಜರಹಳ್ಳಿ, ಕಿರಣ್‌, ರವಿ ಯಾದವ್‌, ಕಾಂತರಾಜು ವಾಜರಹಳ್ಳಿ, ಮಂಜು ಯದವ್‌ ಕರಿರಾಮನಹಳ್ಳಿ ಮುಂತಾದವರು ಭಾಗವಹಿಸಿದ್ದರು.