Asianet Suvarna News Asianet Suvarna News

ದಲಿತರಿಂದಲೇ ದಲಿತರ ಶೋಷಣೆ: ಡಾ.ಸುಬ್ರಾವ ಎಂಟೆತ್ತಿನವರ

85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ|  'ದಲಿತ ಬಂಡಾಯ: ಸ್ಥಿತ್ಯಂತರ ನೆಲೆಗಳು’ವಿಷಯವಾಗಿ ಜರುಗಿದ ಗೋಷ್ಠಿ| ಈಗಿನ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಗಲಭೆ, ಶೋಷಣೆ, ಅತ್ಯಾಚಾರ ಪ್ರಕರಣಗಳು ನಿಲ್ಲಬೇಕು|

Writer Subrao Entettanavar Talks Over Dalit
Author
Bengaluru, First Published Feb 7, 2020, 10:47 AM IST

ಕಲಬುರಗಿ(ಫೆ.07):  ದಲಿತ ವರ್ಗದವರಿಂದಲೇ ಪ್ರಜಾಪ್ರಭುತ್ವ ಉಳಿಯಲು ಸಾಧ್ಯ. ದಲಿತರು, ಶೋಷಿತರು ಶ್ರಮವಹಿಸುವ ಮೂಲಕ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಸುಬ್ರಾವ ಎಂಟೆತ್ತಿನವರ ಅಭಿಪ್ರಾಯಪಟ್ಟಿದ್ದಾರೆ. 

ಕನ್ನಡ ಸಾಹಿತ್ಯ ಸಮ್ಮೇಳನ: ತಾಯಿ ಭುವನೇಶ್ವರಿಗೆ ಪದಾರತಿ ಎತ್ತಿದ ಎಚ್‌ಎಸ್‌ವಿ!

ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಆರಂಭವಾಗಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ 2 ನೇ ದಿನವಾದ ಗುರುವಾರ ಶ್ರೀವಿಜಯ ಪ್ರಧಾನ ವೇದಿಕೆಯಲ್ಲಿ ನಡೆದ ‘ದಲಿತ ಬಂಡಾಯ: ಸ್ಥಿತ್ಯಂತರ ನೆಲೆಗಳು’ವಿಷಯವಾಗಿ ಜರುಗಿದ 4ನೇ ಗೋಷ್ಠಿಯಲ್ಲಿ ಶೋಷಣೆ ಮತ್ತು ಬಿಡುಗಡೆ ಬಗ್ಗೆ ವಿಚಾರ ಮಂಡನೆ ಮಾಡಿದರು. 

ಮಲೆಯಾಳಿಗಳು, ತಮಿಳರಂತೆ ಭಾಷಾಪ್ರೇಮ ಅನುಸರಿಸೋಣ: ಬಳಿಗಾರ

ಸಾಹಿತಿ ಕೆ.ಕೃಷ್ಣಪ್ಪ ಅವರು ಕಲೆ ಮತ್ತು ಸಂಸ್ಕೃತಿ ವಿಷಯ ಕುರಿತು ಮಾತನಾಡಿ, ನವ್ಯ, ನವೋದಯ, ಪ್ರಗತಿಶೀಲ ಹಾಗೂ ದಲಿತ ಬಂಡಾಯಗಳು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಮೂಲಕ ದಲಿತರೂ ಸಾಹಿತ್ಯಿಕವಾಗಿ ಮುಂದೆ ಬರಬಹುದು ಎಂದು ತೋರಿಸಿಕೊಟ್ಟವು. ದಲಿತರು, ಶೋಷಿತರಿಗೆ ಮುಖ್ಯವಾಗಿ ಸಾಮಾಜಿಕ ನೆಲೆಗಟ್ಟು ಹಾಗೂ ಆರ್ಥಿಕ, ಶಿಕ್ಷಣದ ಮಹತ್ವ ಅರಿಯಬೇಕು. ಅಲ್ಲದೇ ದಲಿತ ಸಾಹಿತ್ಯವು ಸಮಾಜದ ಜಡತ್ವವನ್ನು ಕೊನೆಗಾಣಿಸುವಲ್ಲಿ ನಿರಂತರವಾಗಿ ಶ್ರಮಿಸಿದೆ ಎಂದರು. 

ಅನೇಕ ಸಾಹಿತಿಗಳು, ಹೋರಾಟಗಾರರು, ಚಿಂತಕರು, ದಲಿತರ, ಶೋಷಿತರ ಧ್ವನಿಯಾಗಿ ನಿಂತರು. ಈಗಿನ ಸಮಾಜದಲ್ಲಿ ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸೆ, ಗಲಭೆ, ಶೋಷಣೆ, ಅತ್ಯಾಚಾರ ಪ್ರಕರಣಗಳು ನಿಲ್ಲಬೇಕು. ಎಲ್ಲರೂ ಒಂದೇ ಎನ್ನುವ ಮನೋಭಾವ ಬೆಳೆಯಬೇಕು. ಅಲ್ಲದೇ ಇತ್ತೀಚಿನ ದಿನಗಳಲ್ಲಿ ದಲಿತ ಸಾಹಿತ್ಯಕ್ಕೂ ವಿಶೇಷ ಸ್ಥಾನ ದೊರಕುತ್ತಿರುವುದು ಕೂಡಾ ಸಂತಸದ ಸಂಗತಿಯಾಗಿದೆ. ಬಂಡಾಯಗಳು ಬೀದಿಗೆ ಬಂದರೆ ಮಾತ್ರ ದಲಿತ ಸಾಹಿತ್ಯ ಮತ್ತು ದಲಿತರು ಉಳಿಯಲು ಸಾಧ್ಯ. ಈ ಮೂಲಕ ಕಲೆ ಮತ್ತು ಸಂಸ್ಕೃತಿ ಉಳಿಯಬೇಕು ಎಂದು ಹೇಳಿದರು. 

ಕಲಬುರಗಿ ಸಾಹಿತ್ಯ ಸಮ್ಮೇಳನ: ನಿರೀಕ್ಷೆಗೂ ಮೀರಿ ಜನ, ಊಟಕ್ಕೆ ನೂಕುನುಗ್ಗಲು

ಸಾಹಿತಿ ಡಿ.ಜಿ.ಸಾಗರ್ ಅವರು, ಚಳವಳಿಗಳು ವಿಷಯ ಕುರಿತು ಮಾತನಾಡಿ, ಧ್ವನಿ ಇಲ್ಲದವರ ಪಾಲಿಗೆ ಈ ದಲಿತ ಚಳುವಳಿಗಳು ಧ್ವನಿಯಾಗಿ ನಿಂತವು. ಮೊದಲಿನಿಂದಲೇ ನಮ್ಮ ನೆಲದಲ್ಲಿನ ಅನೇಕ ಸಾಹಿತಿಗಳು, ಚಿಂತಕರು, ವಚನಕಾರರು ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸಿದರು. ದಲಿತರಲ್ಲಿ ಬಂಡಾಯಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಿದರು. ದಲಿತರನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಿದರು. ಬಸವಣ್ಣ, ಬುದ್ಧ, ಬಸವ, ಅಂಬೇಡ್ಕರ್ ಹೀಗೆ ಅನೇಕ ಸಮಾಜ ಸುಧಾರಕರು ತಮ್ಮ ಚಿಂತನೆಗಳ ಮೂಲಕ ಜನರಲ್ಲಿ ನಿರಂತರ ಅರಿವಿನ ಜೊತೆಗೆ ಶಿಕ್ಷಣವನ್ನು ನೀಡುತ್ತಾ ಬಂದರು. ಸಮಾಜದಲ್ಲಿನ ಅಸಮಾನತೆ ಹೋಗಬೇಕಾದರೆ ಬಂಡಾಯಗಳು ನಡೆಯಲೇ ಬೇಕು, ಆಗ ಮಾತ್ರ ದಲಿ ಹಿರಿಯ ಸಾಹಿತಿ ಡಾ.ಸುಬ್ರಾವ ಎಂಟೆತ್ತಿನವರ ಅವರಿಂದ ವಿಚಾರ ಮಂಡನೆ. ತರ, ಶೋಷಿತರ ಹಕ್ಕು ಉಳಿಯಲು ಸಾಧ್ಯ ಎಂದರು.

Follow Us:
Download App:
  • android
  • ios