ಜೆಡಿಎಸ್ ಪಕ್ಷ, ಜಾತ್ಯಾತೀತವನ್ನು ತುಳಿದು ಚಾತುರ್ವಣ್ರ ಸಮಾಜವನ್ನೇ ತನ್ನ ದೇವರು ಅಂದುಕೊಂಡ ರಾಷ್ಟ್ರೀಯ ಸಂಘ ಪರಿವಾರದ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡ ಹಿನ್ನೆಲೆಯಲ್ಲಿ ಆ ಪಕ್ಷ ನೈತಿಕವಾಗಿ ಪತನವಾಗಿದೆ. ಅಷ್ಟೇ ಅಲ್ಲ, ಜೆಡಿಎಸ್‌ನ ಬೆನ್ನು ಮತ್ತು ತಲೆಯ ಮೇಲೆ ಸಂಘ ಪರಿ ವಾರ, ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ: ಹಿರಿಯ ಸಾಹಿತಿ ದೇವನೂರ ಮಹಾದೇವ 

ಮಂಡ್ಯ(ಫೆ.16): ಬಿಜೆಪಿ ಜೊತೆಗೂಡಿ ಜೆಡಿಎಸ್ ಮುನ್ನಡೆದಿದ್ದೆ ಕೆರಗೋಡು ಹನುಮ ಧ್ವಜ ಪ್ರಕರಣ ನಡೆಯಲು ಕಾರಣವಾಗಿದೆ. ಮಂಡ್ಯ ನೆಲದ ಸೊಗಡನ್ನು ಅರಿಯಲು ದೇವೇಗೌಡರ ಮನೆತನ ಸೋತಿದೆ ಎಂದು ಹಿರಿಯ ಸಾಹಿತಿ ದೇವನೂರ ಮಹಾದೇವ ಆರೋಪಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಶಾಂತಿ ಸೌಹಾರ್ದತೆ ಸಹಬಾಳ್ವೆಗಾಗಿ ಪ್ರಗತಿಪರರು ನಡೆಸಿದ ಧರಣಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. 

ಅಯೋಧ್ಯೆ ರಾಮಮಂದಿರ ರಾಜಕೀಯ ಜೂಜಾಟ ಕೇಂದ್ರ: ಹಿರಿಯ ಸಾಹಿತಿ ದೇವನೂರ ಮಹಾದೇವ

ಜೆಡಿಎಸ್ ಪಕ್ಷ, ಜಾತ್ಯಾತೀತವನ್ನು ತುಳಿದು ಚಾತುರ್ವಣ್ರ ಸಮಾಜವನ್ನೇ ತನ್ನ ದೇವರು ಅಂದುಕೊಂಡ ರಾಷ್ಟ್ರೀಯ ಸಂಘ ಪರಿವಾರದ ಬಿಜೆಪಿ ಪಕ್ಷವನ್ನು ಆಲಂಗಿಸಿಕೊಂಡ ಹಿನ್ನೆಲೆಯಲ್ಲಿ ಆ ಪಕ್ಷ ನೈತಿಕವಾಗಿ ಪತನವಾಗಿದೆ. ಅಷ್ಟೇ ಅಲ್ಲ, ಜೆಡಿಎಸ್‌ನ ಬೆನ್ನು ಮತ್ತು ತಲೆಯ ಮೇಲೆ ಸಂಘ ಪರಿ ವಾರ, ಬಿಜೆಪಿಯ ಛಿದ್ರಕಾರಿ ಶಕ್ತಿಗಳು ಸವಾರಿ ಮಾಡುತ್ತಿವೆ ಎಂದು ಟೀಕಿಸಿದರು.