ಚಿಕ್ಕಮಗಳೂರು ಹಬ್ಬದ ಅಂಗವಾಗಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ, ಜಟ್ಟಿಗಳಿಗೆ ಪ್ರೇಕ್ಷಕರ ಚಪ್ಪಾಳೆ
ಇದೇ ತಿಂಗಳು 18ರಿಂದ 22 ವರೆಗೂ ಚಿಕ್ಕಮಗಳೂರು ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಇದರ ಅಂಗವಾಗಿ ನಗರದ ಬೈಪಾಸ್ ರಸ್ತೆಯ ಎಂಎಲ್ಎಂಎನ್ ಕಾಲೇಜು ಆಟದ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜ.16): ಇದೇ ತಿಂಗಳು 18ರಿಂದ 22 ವರೆಗೂ ಚಿಕ್ಕಮಗಳೂರು ಹಬ್ಬವನ್ನು ಆಯೋಜನೆ ಮಾಡಲಾಗಿದೆ. ಇದರ ಅಂಗವಾಗಿ ನಗರದ ಬೈಪಾಸ್ ರಸ್ತೆಯ ಎಂಎಲ್ಎಂಎನ್ ಕಾಲೇಜು ಆಟದ ಮೈದಾನದಲ್ಲಿ ಕುಸ್ತಿ ಪಂದ್ಯಾವಳಿ ಆಯೋಜನೆ ಮಾಡಲಾಗಿತ್ತು. ಕೆಂಪು ಮಣ್ಣಿನ ಅಖಾಡದಲ್ಲಿ ಸುತ್ತಲೂ ಜನರು, ನಡುವೆ ಕುಸ್ತಿ ಅಖಾಡದಲ್ಲಿ ಕುಸ್ತಿಪಟುಗಳ ಸೆಣಸಾಟ. ಇತ್ತ ಜಟ್ಟಿಗಳು ಪಟ್ಟು ಹಾಕಿ ಪರಸ್ಪರ ಸೆಣಸಿದರೆ, ಪ್ರೇಕ್ಷಕರು ಕೇಕೆ, ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ಹಬ್ಬದ ಅಂಗವಾಗಿ ಜಿಲ್ಲಾಡಳಿತ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ರಾಜ್ಯಮಟ್ಟದ ಗ್ರಾಮೀಣ ಕುಸ್ತಿ ಪಂದ್ಯಾವಳಿ ನಡೆಯಿತು. ಪಂದ್ಯಾವಳಿಗೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಹಿತ ವಿವಿಧ ಜಿಲ್ಲೆಗಳಿಂದ ಕುಸ್ತಿಪಟುಗಳು ಭಾಗವಹಿಸಿದ್ದರು. ಪುರುಷ ಹಾಗೂ ಮಹಿಳೆಯರಿಗೆ ವಯೋಮಾನ ಮತ್ತು ತೂಕದ ಆಧರಿಸಿ ಪ್ರತ್ಯೇಕವಾಗಿ ಎಂಟು ವಿಭಾಗಗಳಲ್ಲಿ ಕುಸ್ತಿ ನಡೆಯಿತು.
14 ವರ್ಷದಿಂದ 19 ವರ್ಷ ವಯೋಮಾನದವರು ಭಾಗವಹಿಸಿದ್ದರು.ಕುಸ್ತಿ ತರಬೇತುದಾರ ನಾಗರಾಜ್ ಮಾತನಾಡಿ,14 ರಿಂದ 19 ವರ್ಷದೊಳಗಿನ ಕುಸ್ತಿ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 2 ಸಾವಿರ ನಗದು, ದ್ವಿತೀಯ: 1 ಸಾವಿರ, ತೃತೀಯ:750, ನಾಲ್ಕನೇ ಸ್ಥಾನ: 500 ನಿಗದಿಪಡಿಸಲಾಗಿದೆ ಎಂದರು. ಇದರಜೊತೆಗೆ 19 ವರ್ಷ ಮೇಲ್ಪಟ್ಟವರ ವಿಭಾಗ(ತೂಕದ ಮಾನದಂಡದಂತೆ)ದಲ್ಲಿ ಪ್ರಥಮ ಸ್ಥಾನ 3 ಸಾವಿರ, ದ್ವಿತೀಯ: 2ಸಾವಿರ, ತೃತೀಯ: 1500, ನಾಲ್ಕನೇ ಸ್ಥಾನಕ್ಕೆ 1 ಸಾವಿರ ನಗದು ಬಹುಮಾನ ಹಾಗೂ ಪದಕದೊಂದಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದರು.
ಕುಸ್ತಿ ಸಂಸ್ಕೃತಿಯ ಪ್ರತೀಕ:
ಕುಸ್ತಿ ಸಂಸ್ಕೃತಿಯ ಪ್ರತೀಕ. ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಪ್ರಾಚೀನ ಯುದ್ಧ ಕಲೆ ಎಂದು ಶಾಸಕ ಸಿ.ಟಿ ರವಿ ಹೇಳಿದರು. ರಾಜ್ಯಮಟ್ಟದ ಗ್ರಾಮೀಣ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಗ್ರಾಮೀಣ ಕಲೆಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ನಿಟ್ಟಿನಲ್ಲಿ ಜಿಲ್ಲಾ ಉತ್ಸವದಲ್ಲಿ ಆಯೋಜನೆ ಮಾಡಲಾಗಿದೆ. ಇತಿಹಾಸದಲ್ಲಿ ಕುಸ್ತಿಪಟುಗಳು ದೇಹದ ಕಸರತ್ತಿನ ಹೊರತಾಗಿ ಸಂಕಷ್ಟದ ಸಮಯದಲ್ಲಿ ದೇಶದ ರಕ್ಷಣೆಯಲ್ಲಿಯೂ ಪಾಲ್ಗೊಂಡಿದ್ದಾರೆ ಎಂದರು. ಯುವಜನತೆ ದೇಹದ ಸದೃಢತೆ ಜತೆಗೆ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ದೇಶದ ಸಂಸ್ಕೃತಿ, ಪರಂಪರೆ, ಕ್ರೀಡೆಗಳನ್ನು ಉಳಿಸಿ,ಬೆಳೆಸಬೇಕು ಎಂದು ಸಲಹೆ ನೀಡಿದರು. ದೈಹಿಕ ಶಿಕ್ಷಣ ಶಿಕ್ಷಕ ಸುಧಾಕರ್, ಮುನಿಸ್ವಾಮಿ, ಕುಸ್ತಿಪಟು ಮಂಜುನಾಥ್ ಇದ್ದರು.
Chikkaballapur Utsav: ಚಿಕ್ಕಬಳ್ಳಾಪುರಕ್ಕೆ ವಿಶ್ವ ಭೂಪಟದಲ್ಲಿ ವಿಶಿಷ್ಟ ಸ್ಥಾನ: ಸಚಿವ ಸುಧಾಕರ್ ಹರ್ಷ
ಗುಡ್ಡಗಾಡು ಓಟ: ಕುಸ್ತಿಪಂದ್ಯಾವಳಿ ಅಲ್ಲದೆ ಗುಡ್ಡಗಾಡು ಓಟವನ್ನು ಹಬ್ಬದ ಅಂಗವಾಗಿ ಆಯೋಜನೆ ಮಾಡಲಾಗಿತ್ತು. ಆಟೋಟಗಳು ದೈಹಿಕ, ಮಾನಸಿಕವಾಗಿ ಕ್ರಿಯಾಶೀಲರನ್ನಾ ಗಿಸುತ್ತವೆ ಎನ್ನುವ ಉದ್ದೇಶದಿಂದ ಕ್ರೀಡಾ ಚಟುವಟಿಕೆಯನ್ನು ಆಯೋಜನೆ ಮಾಡಲಾಗಿದೆ. ಮುಳ್ಳಯ್ಯನಗಿರಿ, ದತ್ತಪೀಠದ ಭಾಗದಲ್ಲಿ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿತ್ತು. ಓಟದಲ್ಲಿ ಜಿಲ್ಲೆ ಮಾತ್ರವಲ್ಲಿ ಹೊರ ಜಿಲ್ಲೆಗಳಿಂದಲೂ ಸ್ಪರ್ಧೇಳುಗಳು ಭಾಗವಹಿಸಿ ಪೈಪೋಟಿಯನ್ನು ನೀಡಿದರು.
ಚಿಕ್ಕಬಳ್ಳಾಪುರ ಉತ್ಸವದಲ್ಲಿ ರಮ್ಯಾ ಭಾಗಿ, ಸಚಿವ ಸುಧಾಕರ್ ಕೆಲಸಕ್ಕೆ ಶ್ಲಾಘನೆ!
ವಿಜೇತರು: 18 ವರ್ಷದೊಳಗಿನವರ ವಿಭಾಗ: ಎಚ್.ಡಿ.ಪ್ರಥಮ್ ಪ್ರಥಮ, ಎಚ್.ಕೆ. ದರ್ಶನ್ ದ್ವಿತೀಯ, ಸಿ.ಎಂ ಸಾಕ್ಷಿತ್ ತೃತೀಯ, ಬಾಲಕಿ ಯರ ವಿಭಾಗದಲ್ಲಿ ಮೌಲ್ಯಾ ಚಂದ್ರ ಶೇಖರ್ ಪ್ರಥಮ, ಅಮೃತಾ: ದ್ವಿತೀಯ, ಪೂರ್ಣಾಗೌಡ: ತೃತೀಯ ಸ್ಥಾನ ಪಡೆದಿದ್ಧಾರೆ.14 ವರ್ಷದೊಳಗಿನ ಬಾಲಕರ ವಿಭಾಗ: ನವನೀತ್ ಪ್ರಥಮ, ತನಿಷ್ಕ್ಗೌಡ ದ್ವಿತೀಯ, ದಿಗಂತ್ ಆರ್.ಗೌಡ ತೃತೀಯ, ಬಾಲಕಿಯರ ವಿಭಾಗದಲ್ಲಿ ಯೋಗಿತಾ ಪ್ರಥಮ, ಮನಸ್ವಿ ದ್ವಿತೀಯ, ಅನುಶ್ರೇಯ ತೃತೀಯ ಸ್ಥಾನ ಪಡೆದಿದ್ದಾರೆ.