Tumakuru : ಕ್ಷೇತ್ರದ ಜನರ ಮಧ್ಯೆ ಇದ್ದು ಕೆಲಸ ಮಾಡುವೆ: ಶಾಸಕ
ಕ್ಷೇತ್ರದ ಶಾಸಕನಾದ ಅಲ್ಪಾವಧಿಯಲ್ಲಿಯೇ ಕ್ಷೇತ್ರದ 190 ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ನೀರಾವರಿ ಸೌಲಭ್ಯಗಳಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಜನರ ಮಧ್ಯದಲ್ಲಿದ್ದು, ಕೆಲಸ ಮಾಡುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ(ಅ.21): ಕ್ಷೇತ್ರದ ಶಾಸಕನಾದ ಅಲ್ಪಾವಧಿಯಲ್ಲಿಯೇ ಕ್ಷೇತ್ರದ 190 ಗ್ರಾಮಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ನೀರಾವರಿ ಸೌಲಭ್ಯಗಳಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ. ಮುಂದಿನ ದಿನಗಳಲ್ಲಿಯೂ ಜನರ ಮಧ್ಯದಲ್ಲಿದ್ದು, ಕೆಲಸ ಮಾಡುತ್ತೇನೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ತಾಲೂಕಿನ ಮದ್ದಕ್ಕನಹಳ್ಳಿ, ಬಡ ಮಂಗನಹಟ್ಟಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ (Village) ಸುಮಾರು 5.30 ಕೋಟಿ ರು. ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ತಾಲೂಕಿನ ಪ.ಜಾತಿ ಮತ್ತು ಪ.ಪಂಗಡದ (SC ST) ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. ಸುಮಾರು 70 ಕಾಲೋನಿಗಳ ದೇವಸ್ಥಾನಗಳಿಗೆ ಶೀಟ್ ಹಾಕಿಸಿಕೊಡಲಾಗುವುದು ಎಂದರು.
ಶಾಸಕ ಡಾ.ಸಿ.ಎಂ. ರಾಜೇಶ್ ಗೌಡ ಬುಧವಾರ ತಾಲೂಕಿನ ರು.35 ಲಕ್ಷ ವೆಚ್ಚದಲ್ಲಿ ಭೂತಪ್ಪನಗುಡಿ ರಸ್ತೆಯಿಂದ ಮದ್ದಕ್ಕನಹಳ್ಳಿ ಗ್ರಾಮದ ರಸ್ತೆ ನಿರ್ಮಾಣ ಕಾಮಗಾರಿ, 30 ಲಕ್ಷ ರು. ವೆಚ್ಚದ ಶಿರಾ- ಚಂಗಾವರ ರಸ್ತೆಯಿಂದ ಬೊಮ್ಮಗಾನಹಳ್ಳಿ ರಸ್ತೆ ನಿರ್ಮಾಣ ಕಾಮಗಾರಿ, 2 ಕೋಟಿ ರು. ವೆಚ್ಚದಲ್ಲಿ ಚಂಗಾವರ ಗ್ರಾಮದಿಂದ ಬಡಮಂಗನಹಟ್ಟಿಮಾರ್ಗ ಕುದುರೆ ಕುಂಟೆ ರಸ್ತೆ ನಿರ್ಮಾಣ ಕಾಮಗಾರಿ, 90 ಲಕ್ಷ ರು. ವೆಚ್ಚದಲ್ಲಿ ಲಕ್ಕವನಹಳ್ಳಿ ಹಾಗೂ ಲಕ್ಕವನಹಳ್ಳಿಯಿಂದ ಹೊನ್ನ ಗಿರಿಯಪ್ಪನಪಾಳ್ಯ ರಸ್ತೆ ನಿರ್ಮಾಣ ಕಾಮಗಾರಿ, 1.10 ಕೋಟಿ ರು. ವೆಚ್ಚದಲ್ಲಿ ಡ್ಯಾಗೇರಹಳ್ಳಿಯಿಂದ - ಹಿರಿಯೂರು ಗಡಿಯವರೆಗೆ ರಸ್ತೆ ನಿರ್ಮಾಣ ಕಾಮಗಾರಿ, 60 ಲಕ್ಷ ರು. ವೆಚ್ಚದಲ್ಲಿ ಯರವರಹಳ್ಳಿಯುಂದ - ಕುಂಟನಹಟ್ಟಿಮಾರ್ಗ ಹಿರಿಯೂರು ಗಡಿ ರಸ್ತೆ ನಿರ್ಮಾಣ ಕಾಮಗಾರಿಗೆ ಒಟ್ಟು 5.30 ಕೋಟಿ ರೂ. ವೆಚ್ಚದ ವಿವಧ ಕಾಮಗಾರಿಗಳಿಗೆ ಭೂನಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕಾಡುಗೊಲ್ಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಚಂಗಾವರ ಮಾರಣ್ಣ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ವಾಜರಹಳ್ಳಿ ನರಸಿಂಹೇಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ನಾಗಮ್ಮ ಕಾರನಾಗಪ್ಪ, ಸದಸ್ಯರಾದ ಮೂಡಲಗಿರಿಯಪ್ಪ, ಮಾಜಿ ಸದಸ್ಯ ತಿಮ್ಮಣ್ಣ, ಮಂಜುನಾಥ್, ಮುಖಂಡರಾದ ಚಂಗಾವರ ಗಿರೀಶ್, ನಾಗಣ್ಣ, ಮಂಜುನಾಥ್, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಕೃಷ್ಣಪ್ಪ, ಕೃಷ್ಣ ಗೌಡ, ಈರಣ್ಣ ಸೇರಿದಂತೆ ಹಲವರು ಹಾಜರಿದ್ದರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ 8 ಕೋಟಿ
ತಾಲೂಕಿನಲ್ಲಿ ಶಿಥಿಲಾವಸ್ಥೆಯಲ್ಲಿರುವ ಸರ್ಕಾರಿ ಶಾಲೆಗಳ ದುರಸ್ಥಿ ಹಾಗೂ ನೂತನ ಕೊಠಡಿಗಳ ನಿರ್ಮಾಣಕ್ಕೆ ಸರ್ಕಾರ ಸುಮಾರು 8 ಕೋಟಿ ರು.ಗಳ ಅನುದಾನ ನೀಡಿದೆ. ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಹಾಗೂ ಸರ್ಕಾರಿ ಶಾಲೆಗಳ ನವೀಕರಣ ಹಾಗೂ ಹೊಸ ಕೊಠಡಿಗಳ ನಿರ್ಮಾಣಕ್ಕೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಅನುದಾನದವನ್ನು ಉಪಯೋಗಿಸಿಕೊಂಡು ಶಾಲೆಗಳ ದುರಸ್ಥಿ ಕಾರ್ಯ ನಡೆಯಲಿದೆ. ಹೊಸದಾಗಿ 55 ಶಾಲೆಗಳಿಗೆ ನೂತನ ಕೊಠಡಿಗಳು ಮಂಜೂರಾಗಿದೆ. ಕಾಮಗಾರಿ ಸದ್ಯದಲ್ಲಿ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಹೇಳಿದರು.
ಶಿರಾ ತಾಲೂಕಿನ ಬಡಮಂಗನಹಟ್ಟಿಗ್ರಾಮದಲ್ಲಿ ಸಿ ಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ ಭೂಮಿ ಪೂಜೆ ನೆರವೇರಿಸಿದರು.
ಕ್ಷೇತ್ರದ ಜನರ ಮಧ್ಯೆ ಇದ್ದು ಕೆಲಸ ಮಾಡುವೆ: ಶಾಸಕ
ಮೂಲ ಸೌಕರ್ಯ ಕಲ್ಪಿಸುವೆ - 5.30 ಕೋಟಿ ರು.ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ರಾಜೇಶ್ ಗೌಡ
ಕ್ಷೇತ್ರದ ಶಾಸಕನಾದ ಅಲ್ಪಾವಧಿ ಯಲ್ಲಿಯೇ ಕ್ಷೇತ್ರದ 190 ಗ್ರಾಮಗಳಲ್ಲಿ ಅಗತ್ಯವಿರುವ ಮೂಲ ಭೂತ ಸೌಲಭ್ಯಗಳನ್ನು ಒದಗಿಸುವ ಹಾಗೂ ನೀರಾವರಿ ಸೌಲಭ್ಯಗಳಿಗೆ ಶಕ್ತಿ ಮೀರಿ ಕೆಲಸ ಮಾಡಿದ್ದೇನೆ.