ಲಾಕ್‌ಡೌನ್ ಸಡಿಲ: ಬಸ್‌ಗಳ ಮೂಲಕ ಸ್ವಂತ ಸ್ಥಳಗಳಿಗೆ ತೆರಳಿದ ವಲಸೆ ಕಾರ್ಮಿಕರು
ಸಾಮಾಜಿಕ ಅಂತರದಲ್ಲಿ ಸ್ವಂತ ಸ್ಥಳಗಳಿಗೆ ತೆರಳಿದ 357 ವಲಸೆ ಕಾರ್ಮಿಕರು| ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದ 44 ವಲಸೆ ಕಾರ್ಮಿಕರನ್ನು ಸ್ವಂತ ಸ್ಥಳಗಳಾದ ಲಿಂಗಸೂಗೂರು, ಸಿಂಧನೂರು, ಮಾನ್ವಿ, ಗಂಗಾವತಿ, ಸಿರುಗುಪ್ಪ ಸೇರಿದಂತೆ ವಿವಿಧ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸಾಮಾಜಿಕ ಅಂತರದಲ್ಲಿ ಅವರನ್ನು ಕೂಡಿಸಿ ಕಳುಹಿಸಿಕೊಡಲಾಯಿತು|
ಬಳ್ಳಾರಿ(ಏ.25): ಕೋವಿಡ್-19 ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆ ಜಿಲ್ಲಾಡಳಿತ ಆರಂಭಿಸಿದ್ದ ತಾತ್ಕಾಲಿಕ ನಿರಾಶ್ರಿತರ ಪರಿಹಾರ ಕೇಂದ್ರಗಳಲ್ಲಿದ್ದ ರಾಜ್ಯದ ವಿವಿಧ ಜಿಲ್ಲೆಗಳ 357 ಕಾರ್ಮಿಕರನ್ನು ಅವರ ಸ್ವಂತ ಸ್ಥಳಗಳಿಗೆ ಶುಕ್ರವಾರ ಕಳುಹಿಸಿಕೊಡಲಾಯಿತು.
ನಗರದ ಮಯೂರ ಹೋಟೆಲ್ ಹಿಂಭಾಗದಲ್ಲಿರುವ ವಸತಿ ನಿಲಯದಲ್ಲಿ ತಾತ್ಕಾಲಿಕವಾಗಿ ಆರಂಭಿಸಲಾಗಿದ್ದ ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಂಜುನಾಥ, ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ,ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿದ್ದ 44 ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಸ್ಥಳಗಳಾದ ಲಿಂಗಸೂಗೂರು, ಸಿಂಧನೂರು, ಮಾನ್ವಿ, ಗಂಗಾವತಿ, ಸಿರುಗುಪ್ಪ ಸೇರಿದಂತೆ ವಿವಿಧ ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸಾಮಾಜಿಕ ಅಂತರದಲ್ಲಿ ಅವರನ್ನು ಕೂಡಿಸಿ ಕಳುಹಿಸಿಕೊಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ, ಸಹಾಯಕ ನಿರ್ದೇಶಕಿ ಮಮತಾ ಇದ್ದರು.
ಮಹಾಮಾರಿ ಕೊರೋನಾದಿಂದ ಗುಣಮುಖ: ಬಳ್ಳಾರಿಯಲ್ಲಿ ಮೂವರು ಡಿಸ್ಚಾರ್ಜ್
ಹಡಗಲಿಯಲ್ಲಿ 38, ಹಗರಿಬೊಮ್ಮನಹಳ್ಳಿಯಲ್ಲಿ 140, ಹೊಸಪೇಟೆಯಲ್ಲಿ 34, ಕೂಡ್ಲಿಗಿಯಲ್ಲಿ 05, ಸಿರುಗುಪ್ಪದಲ್ಲಿ 16, ಸಂಡೂರಿನಲ್ಲಿ 08 ಮತ್ತು ಹರಪನಹಳ್ಳಿಯಲ್ಲಿ 72 ಜನ ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ಬಸ್‌ಗಳ ಮೂಲಕ ರಾಜ್ಯ ಸರ್ಕಾರದ ಸೂಚನೆಯಂತೆ ಕಳುಹಿಸಿಕೊಡಲಾಗಿದೆ. ಸದ್ಯ ನಮ್ಮಲ್ಲಿ ಅನ್ಯರಾಜ್ಯಗಳ 115 ವಲಸೆ ಕಾರ್ಮಿಕರು ಮಾತ್ರ ಇದ್ದು, ಅವರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಸೂಚನೆ ಬಂದರೆ ಅವರ ಬಿಡುಗಡೆಗೆ ಕ್ರಮವಹಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ರಾಜಪ್ಪ ತಿಳಿಸಿದ್ದಾರೆ.