Kolar: ಸಾಲ ವಸೂಲಿಗೆ ಬಂದ್ರೆ ಹುಷಾರ್‌!: 'ಸ್ತ್ರೀ ಶಕ್ತಿ' ಎಚ್ಚರಿಕೆ

ಸಾಲ ಮನ್ನಾ ಮಾಡುತ್ತೇನೆಂದು ಮಾತಿದ ತಪ್ಪಿದ ಕಾಂಗ್ರೆಸ್‌ ಸರ್ಕಾರ ಮಹಿಳೆಯರ ಆಕ್ರೋಶಕ್ಕೆ ಗುರಿಯಾದ ಫಲವಾಗಿ ಶುಕ್ರವಾರ ಸಾಲ ವಸೂಲಿಗೆ ಹೋದ ಸೊಸೈಟಿ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿಹಾಕಲು ಮುಂದಾಗಿ ಸಾಲ ವಸೂಲಿ ಮಾಡಲು ಬಂದರೆ ಹುಷಾರ್‌!

womens refuse to repay stree shakti sangha loan in kolar gvd

ಕೋಲಾರ (ಜೂ.17): ಸಾಲ ಮನ್ನಾ ಮಾಡುತ್ತೇನೆಂದು ಮಾತಿದ ತಪ್ಪಿದ ಕಾಂಗ್ರೆಸ್‌ ಸರ್ಕಾರ ಮಹಿಳೆಯರ ಆಕ್ರೋಶಕ್ಕೆ ಗುರಿಯಾದ ಫಲವಾಗಿ ಶುಕ್ರವಾರ ಸಾಲ ವಸೂಲಿಗೆ ಹೋದ ಸೊಸೈಟಿ ಸಿಬ್ಬಂದಿಯನ್ನು ಹಗ್ಗದಿಂದ ಕಟ್ಟಿ ಹಾಕಲು ಮುಂದಾಗಿ ಸಾಲ ವಸೂಲಿ ಮಾಡಲು ಬಂದರೆ ಹುಷಾರ್‌! ಸಾಲ ಮನ್ನಾ ಮಾಡುತ್ತೇವೆಂದು ನಮಗೆ ಮೋಸ ಮಾಡಿದ ಮುಖ್ಯಮಂತ್ರಿಗಳ ಬಳಿ ಸಾಲ ವಸೂಲಿ ಮಾಡಿಕೊಳ್ಳಿ ಎಂದು ಮುಳಬಾಗಿಲು ತಾಲೂಕಿನ ಹೀರೇಗೌಡನ ಹಳ್ಳಿಯಲ್ಲಿ ಖಡಕ್‌ ಎಚ್ಚರಿಕೆ ನೀಡಿದರು.

ಚುನಾವಣೆ ಸಮಯದಲ್ಲಿ ಕೋಲಾರ ತಾಲೂಕಿನ ವೇಮಗಲ್‌ ಕಾಂಗ್ರೆಸ್‌ ಸಮಾವೇಶದಲ್ಲಿ ಸಿದ್ದರಾಮಯ್ಯ ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡೇ ಮಾಡ್ತಿನಿ ಎಂದು ಮಹಿಳೆಯರ ವೋಟ್‌ಗಾಗಿ ಹೇಳಿಕೆ ಕೊಟ್ಟರೆ ಸಾಲದು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳಬೇಕಾಗಿದೆ. ಇಲ್ಲವಾದರೆ ಬ್ಯಾಂಕ್‌ ಸಿಬ್ಬಂದಿ ಮತ್ತು ಸರ್ಕಾರಕ್ಕೆ ಸಂಕಷ್ಟ ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ.

ಸರ್ಕಾರಿ ಶಾಲೆಗಳ ಅಭಿವೃದ್ಧಿಯೇ ಪ್ರತಿಷ್ಠಾನದ ಗುರಿ: ಮಕ್ಕಳ ಕಲಿಕೆಗೆ ಅಗತ್ಯ ಸಲಕರಣೆಗಳ ವಿತ​ರ​ಣೆ

ಕಾಂಗ್ರೆಸ್‌ನ ಪ್ರಜಾಯಾತ್ರೆ ಸಮಾವೇಶಗಳಲ್ಲಿ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ನಮ್ಮ ಪಕ್ಷಕ್ಕೆ ಮಹಿಳೆಯರು ಮತ ನೀಡಿದರೆ ಸ್ತ್ರೀಶಕ್ತಿ ಸಾಲ ಮನ್ನಾ ಮಾಡುತ್ತೇವೆಂದು ಮಾತು ನೀಡಿ ಮತ ಪಡೆದ ಸಿದ್ದರಾಮಯ್ಯರ ಸರ್ಕಾರ ಸ್ತ್ರೀಶಕ್ತಿ ಸಾಲ ಮನ್ನಾ ಮಾಡದೆ ಇರುವುದು ಮಹಿಳೆಯರಿಗೆ ಮಾಡಿದ ದ್ರೋಹವಾಗಿದೆ ಎಂದು ಕಿಡಿಕಾರಿದರಲ್ಲದೆ, ಸಾಲ ಮನ್ನಾ ಆಗುವವರೆಗೂ ನಾವು ಸಾಲ ಕಟ್ಟುವುದಿಲ್ಲ. ಸಹಕಾರಿ ಬ್ಯಾಂಕ್‌ಗಳ ಸಿಬ್ಬಂದಿ ಏನಾದರೂ ಸಾಲ ವಸೂಲಿ ಹೆಸರಿನಲ್ಲಿ ಬಂದರೆ ಕಟ್ಟಿಹಾಕಬೇಕಾಗುತ್ತದೆ ಎಂದು ಬ್ಯಾಂಕ್‌ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

ರೈತ ಸಂಘದ ನಾರಾಯಣಗೌಡ ಘಟನೆ ನಡೆದ ಸ್ಥಳಕ್ಕೆ ಧಾವಿಸಿ, ಕೂಡಲೇ ಸರ್ಕಾರ ಕೊಟ್ಟಮಾತು ಉಳಿಸಿಕೊಂಡು ಸ್ತ್ರೀ ಶಕ್ತಿ ಸಾಲ ಮನ್ನಾ ಮಾಡಬೇಕೆಂದು ಒತ್ತಾಯಿಸಿದರು. ರೈತ ಸಂಘದ ನಾರಾಯಣಗೌಡ, ಮುನಿಲಕ್ಷಮ್ಮ, ಗೀತಾ, ಮುನಿಲಕ್ಷಿ ್ಮೕ, ನಾಗರತ್ನ, ನಾರಾಯಣಮ್ಮ, ಹನುಮಕ್ಕ, ಸುನಂದ, ಶಿಲ್ಪ, ಸಾವಿತ್ರಮ್ಮ, ಮಂಜುಳಾ, ಲಕ್ಷ್ಮೇದೇವಮ್ಮ, ಶೋಭಾ, ಶೈಲ, ಉಮಾ, ಈಶ್ವರಮ್ಮ, ಕಾಂತಮ್ಮ ಇದ್ದರು.

ನಾಳೆ ಪಂಚನಹಳ್ಳಿಯಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಅವರ 2ನೇ ಪುಣ್ಯಸ್ಮರಣೆ!

ಸರ್ಕಾರಕ್ಕೆ ಸ್ತ್ರೀಯರ ಹಿಡಿಶಾಪ: ಚುನಾವಣೆ ಸಮಯದಲ್ಲಿ ಸಿದ್ದರಾಮಯ್ಯನವರು ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ ಮಾಡುವುದಾಗಿ ಮತ ಹಾಕಿಸಿಕೊಂಡು ಈಗ ಸಾಲ ಮನ್ನ ಮಾಡದಿರುವುದಕ್ಕೆ ಸಹಕಾರಿ ಸಂಘದ ಸಿಬ್ಬಂದಿ ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಸಾಲ ವಸೂಲಿಗೆ ಸಹಕಾರಿ ಸಂಘಗಳ ಸಿಬ್ಬಂದಿ ಬಂದರೇ ಗ್ರಾಮದಲ್ಲಿ ಕಟ್ಟಿಹಾಕುವುದಾಗಿ ಮಹಿಳೆಯರು ಎಚ್ಚರಿಕೆ ನೀಡಿದರು.

Latest Videos
Follow Us:
Download App:
  • android
  • ios