ಕೋಲಾರ: ನಮ್ಮೂರಿಗೆ ಬಾರ್ ಬೇಡವೇ ಬೇಡ ಎಂದು ಮಹಿಳೆಯರ ಆಕ್ರೋಶ..!
ತಮ್ಮ ಹಳ್ಳಿಯಲ್ಲಿ ಬಾರ್‌ಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ದ ಮಹಿಳೆಯರು ವಾಗ್ದಾಳಿ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿದ್ದು ಕೋಲಾರ ತಾಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ. ಊರಲ್ಲಿ ಹೊಸದಾಗಿ ಮದ್ಯದಂಗಡಿಯನ್ನ ಶುರು ಮಾಡುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು.
ವರದಿ: ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್, ಕೋಲಾರ
ಕೋಲಾರ(ಜೂ.10): ಕೋಲಾರದ ಹಳ್ಳಿಯೊಂದರಲ್ಲಿ ನೂತನ ಎಂಎಸ್‌ಐಎಲ್ ಮದ್ಯದಂಗಡಿ ಸ್ಥಾಪನೆಗೆ ಮಹಿಳೆಯರು ಹಾಗೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪೊಲೀಸರು-ಗ್ರಾಮಸ್ಥರ ನಡುವೆ ಮಾತಿನ ಚಕಮಕಿ-ತಳ್ಳಾಟ ನೂಕಾಟ ನಡೆದಿದೆ. ಸ್ಥಳಕ್ಕೆ ಬಂದ ಅಬಕಾರಿ ಅಧಿಕಾರಿಗಳು ಬಾರ್ ಓಪನ್ ಇಲ್ಲ ಎಂದು ಭರವಸೆ ನೀಡಿದ ಬಳಿಕ ಪರಿಸ್ಥತಿ ತಿಳಿಗೊಂಡಿದೆ.
ತಮ್ಮ ಹಳ್ಳಿಯಲ್ಲಿ ಬಾರ್‌ಗೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ದ ಮಹಿಳೆಯರು ವಾಗ್ದಾಳಿ ನಡೆಸುತ್ತಿರುವ ದೃಶ್ಯಗಳು ಕಂಡುಬಂದಿದ್ದು ಕೋಲಾರ ತಾಲೂಕಿನ ಬೆಗ್ಲಿ ಬೆಣಜೇನಹಳ್ಳಿಯಲ್ಲಿ. ಊರಲ್ಲಿ ಹೊಸದಾಗಿ ಮದ್ಯದಂಗಡಿಯನ್ನ ಶುರು ಮಾಡುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ರು. ಈ ಮಳಿಗೆಯಿಂದ ಊರಲ್ಲಿ ಕುಡುಕರ ಹಾವಳಿ ಹೆಚ್ಚಾಗುತ್ತೆ.ಮದ್ಯದಂಗಡಿಗೆ ಪರವಾನಗಿ ನೀಡಬಾರದು ಎಂದು ಊರವ್ರೆಲ್ಲ ಅಬಕಾರಿ ಇಲಾಖೆಯವರಿಗೆ ಮನವಿ ಮಾಡಿದ್ರೂ ಗಣನಗೆ ತೆಗೆದುಕೊಂಡಿಲ್ಲ ಅಂತ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.ಊರಿನಿಂದ ಮುಖ್ಯ ರಸ್ತೆಯವರೆಗೆ ಪ್ರತಿಭಟನಾ ಜಾಥಾ ನಡೆಸಿದ್ರು.
ಕೋಲಾರ: ಕಾಂಗ್ರೆಸ್ ಗ್ಯಾರಂಟಿಯಿಂದಾಗಿ ಖಾಸಗಿ ಬಸ್ ಮಾಲೀಕರಿಗೆ ಆತಂಕ..!
ಗ್ರಾಮದ ಬಳಿ ಮದ್ಯದ ಮಳಿಗೆ ತೆರೆಯದಂತೆ ಈಗಾಗಲೇ ಮಾಲೀಕರಿಗೆ ಎಚ್ಚರಿಕೆ ನೀಡಲಾಯ್ತು. ಕೋಲಾರ ಹಾಗೂ ಟೇಕಲ್ ಮುಖ್ಯ ರಸ್ತೆಯನ್ನ ತಡೆದು ಅಧಿಕಾರಿಗಳ ವಿರುದ್ದ ಆಕ್ರೋಶವನ್ನೂ ಹೊರಹಾಕಲಾಯಿತು.ಈ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ತಳ್ಳಾಟ ನೂಕಾಟ ನಡೆಯಿತು.ಸ್ಥಳಕ್ಕೆ ಭೇಟಿ ನೀಡಿದ ಅಬಕಾರಿ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು,ಮದ್ಯದಂಗಡಿ ತೆರೆಯುವುದಕ್ಕೆ ಅವಕಾಶ ನೀಡುವುದಿಲ್ಲ ಅಂತಾ ಭರವಸೆ ನೀಡಿದ್ರು.ಈ ವೇಳೆ ಗ್ರಾಮದ ಮಹಿಳೆಯರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಕೈ ಬಿಟ್ಟರು.
ಒಟ್ನಲ್ಲಿ, ಮದ್ಯದಂಗಡಿ ಓಪನ್‌ಗೂ ಮುನ್ನವೆ ಗ್ರಾಮಸ್ಥರು ಹಾಗೂ ಬಾರ್ ಮಾಲೀಕರ ಮಧ್ಯೆ ಗಲಾಟೆ ಶುರುವಾಗಿದೆ.ಮುಂದೆ ಏನಾದ್ರು ಗ್ರಾಮಸ್ಥರ ವಿರೋಧದ ನಡುವೆಯೂ ಬಾರ್ ಓಪನ್ ಮಾಡಿದ್ರೆ ಬಾರ್ ಮೇಲೆ ದಾಳಿ ಮಾಡುವ ಎಚ್ಚರಿಕೆ ಹಾಕಿದ್ದು, ಗ್ರಾಮದ ಬಳಿ ಬಾರ್ ಓಪನ್ ಮಾಡದಂತೆ ಎಚ್ಚರಿಕೆ ನೀಡಿರೋದು ವಿಶೇಷವಾಗಿದೆ.