ನಿರಂತರ ಕಾರ್ಯದಿಂದಾಗಿ ಸರ್ವರ್ ನಿಧಾನಗೊಂಡು ಆಧಾರ್ ತಿದ್ದುಪಡಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದಾಗಿ ಜನರು ಸಿಬ್ಬಂದಿಗೆ ಮನಬಂದಂತೆ ವಾಗ್ದಾಳಿ ನಡೆಸುತ್ತಿರುವುದು, ವಿಪರೀತ ಕೆಲಸದ ಒತ್ತಡವು ಮಹಿಳಾ ಸಿಬ್ಬಂದಿ ಕಣ್ಣೀರಿಗೆ ಕಾರಣವಾಗಿದೆ.
ರಾಯಚೂರು(ಜೂ.24): ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿಗಳ ಜಾರಿ ವಿಚಾರದಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದರ ಪರಿಣಾಮ ಆಧಾರ್ ನೋಂದಣಿ, ತಿದ್ದುಪಡಿಗಾಗಿ ಸಾರ್ವಜನಿಕರು ಆಧಾರ್ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇದರಿಂದಾಗಿ ಕೇಂದ್ರದ ಸಿಬ್ಬಂದಿ ಕೆಲಸದ ಒತ್ತಡಕ್ಕೆ ನಲುಗಿ ಹೋಗುತ್ತಿದ್ದಾರೆ.
ಸ್ಥಳೀಯ ಕೇಂದ್ರ ಅಂಚೆ ಕಚೇರಿ ಆವರಣದಲ್ಲಿ ಆಧಾರ್ ಕೇಂದ್ರದಲ್ಲಿ ದಿನೇ ದಿನೆ ಜನ ಸಂದಣಿ ಹೆಚ್ಚಾಗುತ್ತಿದ್ದು, ಇದರಿಂದಾಗಿ ಕೇಂದ್ರದ ಮಹಿಳಾ ಸಿಬ್ಬಂದಿಯೊಬ್ಬರು ಕಣ್ಣೀರಿಟ್ಟು ಕೆಲಸ ಮಾಡಿದ ಘಟನೆ ಜರುಗಿದೆ. ಆಧಾರ್ ಪಡೆಯುವುದಕ್ಕಾಗಿ ಕೇಂದ್ರದಲ್ಲಿ ಬೆಳಗ್ಗೆಯಿಂದ ಸಂಜೆವರೆಗೂ ಜನರು ಆಗಮಿಸುತ್ತಿದ್ದು, ಸಾಲಿನಲ್ಲಿ ನಿಲ್ಲದೇ ಕೇಂದ್ರದ ಸಿಬ್ಬಂದಿ ಮೇಲೆ ರೇಗಾಡುತ್ತಿದ್ದಾರೆ.
ಆಧಾರ್ - ಗೃಹಜ್ಯೋತಿ ಸಮಸ್ಯೆಗೆ ಜನ ಹೈರಾಣ..!
ನಿರಂತರ ಕಾರ್ಯದಿಂದಾಗಿ ಸರ್ವರ್ ನಿಧಾನಗೊಂಡು ಆಧಾರ್ ತಿದ್ದುಪಡಿ ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಇದರಿಂದಾಗಿ ಜನರು ಸಿಬ್ಬಂದಿಗೆ ಮನಬಂದಂತೆ ವಾಗ್ದಾಳಿ ನಡೆಸುತ್ತಿರುವುದು, ವಿಪರೀತ ಕೆಲಸದ ಒತ್ತಡವು ಮಹಿಳಾ ಸಿಬ್ಬಂದಿ ಕಣ್ಣೀರಿಗೆ ಕಾರಣವಾಗಿದೆ. ಕೇಂದ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವುದರಿಂದ ಅಂಚೆ ಇಲಾಖೆಯಿಂದ ಮತ್ತೊಂದು ಕೌಂಟರ್ ಸಹ ಆರಂಭಿಸಿದ್ದು, ಆದರೂ ಜನ ಸಂದಣಿ ಕಡಿಮೆಯಾಗುತ್ತಿಲ್ಲ.
