ಗೃಹಲಕ್ಷ್ಮಿ ಯೋಜನೆ ಆರಂಭವಾದ ತಕ್ಷಣ ಅನೇಕರಿಗೆ ನೋಂದಣಿಯ ಸಂದೇಶಗಳು ಬಾರದ ಕಾರಣ ಅವರು ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಲು ಬ್ಯಾಂಕ್‌ಗಳಲ್ಲಿ ಜಮಾಯಿಸಿದ್ದು ನಿತ್ಯ ವ್ಯವಹಾರ ಮಾಡುವವರಿಗೆ ತಲೆ ಬಿಸಿಯಾಗಿದೆ. 

ಸೂಲಿಬೆಲೆ(ಜು.22):  ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಯ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಲು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜೋರಾಗಿದ್ದು ಬ್ಯಾಂಕ್‌ ಖಾತೆಗೆ ಆಧಾರ್‌ ಮತ್ತು ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಲು ಫಲಾನುಭವಿಗಳಾಗಲು ಮಹಿಳೆಯರು ಹರಸಾಹಸ ಮಾಡುತ್ತಿದ್ದಾರೆ.

ಅನ್ನಭಾಗ್ಯ ಯೋಜನೆಯ ಹಣ ಕೆಲವೇ ಖಾತೆಗಳಿಗೆ ಮಾತ್ರ ಜಮೆಯಾಗಿದ್ದು ಅನೇಕರು ಬ್ಯಾಂಕ್‌ಗಳಿಗೆ ಅಲೆದಾಡುತ್ತಿದ್ದಾರೆ. ಬ್ಯಾಂಕ್‌ ಖಾತೆಗೆ ಮೊಬೈಲ್‌ ಸಂಖ್ಯೆ, ಆಧಾರ್‌ ಕಾರ್ಡ್‌ ಲಿಂಕ್‌ ಮಾಡದ ಕಾರಣ ಅನ್ನಭಾಗ್ಯದ 5 ಕೆಜಿ ಹಣ ಜಮೆಯಾಗಿಲ್ಲ ಎಂಬ ಸಿದ್ದ ಉತ್ತರ ಸಿಗುತ್ತಿದೆ. ಕೆಲವು ಖಾತೆಗಳಿಗೆ ಹಣ ಜಮೆಯಾಗಿದ್ದರು ಖಾತೆ ನಿರ್ವಹಣೆ ವೆಚ್ಚವೆಂದು ಹಣವನ್ನು ಬ್ಯಾಂಕ್‌ ಮುಟ್ಟುಗೋಲು ಹಾಕಿಕೊಂಡಿರುವ ಘಟನೆಗಳೂ ನಡೆದಿವೆ. ಇದರಿಂದ ಮಹಿಳೆಯರು ಗೊಂದಲದಲ್ಲಿದ್ದು ಬ್ಯಾಂಕ್‌ಗಳಿಗೆ ಎಡತಾಕುತ್ತಿದ್ದಾರೆ.

ಜುಲೈ 23ರಿಂದ ಕುಂದಾಪ್ರ ಕನ್ನಡ ಹಬ್ಬ, ಬೆಂಗಳೂರಿನಲ್ಲಿ ಕುಂದಾಪುರ ಕನ್ನಡಿಗರ ಸಮಾಗಮ

ಗೃಹಲಕ್ಷ್ಮಿ ಯೋಜನೆ ಆರಂಭವಾದ ತಕ್ಷಣ ಅನೇಕರಿಗೆ ನೋಂದಣಿಯ ಸಂದೇಶಗಳು ಬಾರದ ಕಾರಣ ಅವರು ಮೊಬೈಲ್‌ ಸಂಖ್ಯೆ ಲಿಂಕ್‌ ಮಾಡಲು ಬ್ಯಾಂಕ್‌ಗಳಲ್ಲಿ ಜಮಾಯಿಸಿದ್ದು ನಿತ್ಯ ವ್ಯವಹಾರ ಮಾಡುವವರಿಗೆ ತಲೆ ಬಿಸಿಯಾಗಿದೆ. ಹಣಪಾವತಿ ಮತ್ತು ನಗದು ಸ್ವೀಕಾರಕ್ಕೆ ಅವಕಾಶವೇ ಇಲ್ಲದಂತಾಗಿದೆ. ಅನೇಕರು ಬ್ಯಾಂಕ್‌ಗಳಲ್ಲಿ ಆಧಾರ್‌ ಜೋಡಣೆಗೆ ಸರದಿಯಲ್ಲಿ ನಿಂತಿದ್ದು, ಸೂಲಿಬೆಲೆ ಕರ್ನಾಟಕ ಬ್ಯಾಂಕ್‌ನಲ್ಲಿ ಗ್ರಾಹಕ ವ್ಯವಹಾರಕ್ಕಿಂತ ಅನ್ನಭಾಗ್ಯ, ಗೃಹಲಕ್ಷ್ಮೇ ಫಲಾನುಭವಿಗಳ ಕೆಲಸವೇ ಹೆಚ್ಚಾಗಿದೆ. ಬ್ಯಾಂಕ್‌ಗಳಲ್ಲಿ ನಿತ್ಯ ವ್ಯವಹಾರದಲ್ಲಿ ಹೈರಾಣಗಿರುವ ಬ್ಯಾಂಕ್‌ ಸಿಬ್ಬಂದಿಗೆ ಹೆಚ್ಚುವರಿ ಕೆಲಸವಾಗಿದೆ.